ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vachanananda Swamiji: ದೇಶ ಇದ್ರೆ ಮಾತ್ರ ಮಠ, ಪೀಠ, ದೇವಸ್ಥಾನಗಳು: ವಚನಾನಂದ ಸ್ವಾಮೀಜಿ

Dharma samrakshana samavesha: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ ಮಾತನಾಡಿದ್ದು, ಅಧರ್ಮ ಹೆಚ್ಚಾದರೆ ಧರ್ಮದ ಕಾರ್ಯಗಳು ಕೂಡ ಹೆಚ್ಚಾಗಬೇಕು. ಇಂತಹ ಕಾರ್ಯದಲ್ಲಿ ಯುವ ಜನಾಂಗ ತೊಡಗಬೇಕು ಎಂದು ಸಲಹೆ ನೀಡಿದರು.

ದೇಶ ಇದ್ರೆ ಮಾತ್ರ ಮಠ, ಪೀಠ, ದೇವಸ್ಥಾನಗಳು: ವಚನಾನಂದ ಸ್ವಾಮೀಜಿ

Prabhakara R Prabhakara R Aug 24, 2025 3:15 PM

ಬೆಂಗಳೂರು: ನಮಗೆ ದೇಶ ಮುಖ್ಯ, ಧರ್ಮ ಮುಖ್ಯ. ನಾವು ರಾಷ್ಟ್ರ ಧರ್ಮ ಪಾಲನೆ ಮಾಡಬೇಕು. ದೇಶ ಇದ್ರೆ ಮಾತ್ರ ಮಠ, ಪೀಠ, ದೇವಸ್ಥಾನಗಳು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ (Vachanananda Swamiji) ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಸ್ವಾಮೀಜಿ ಮಾತನಾಡಿದರು.

ಹೆಗ್ಗಡೆಯವರಿಗೆ ಎಷ್ಟೊಂದು ಕೀಳು ಭಾಷೆಯಲ್ಲಿ ಮಾತನಾಡಿದರು. ಹದ್ದಿಗೆ ಕಾಗೆಗಳು ಅತ್ಯಂತ ಕಾಟ ಕೊಡುತ್ತವೆ. ಬೆನ್ನ ಮೇಲೆ ಶನಿ ಹೇರಿದಂತೆ ಅವು ಪೀಡಿಸುತ್ತವೆ. ಅದಕ್ಕೆ ತಲೆ ಕೆಡಿಸಿಕೊಳ್ಳದ ಹದ್ದು ಆಕಾಶದಲ್ಲಿ ಎತ್ತರಕ್ಕೆ ಹಾರುತ್ತದೆ. ಆಗ ಕಾಗೆಗಳು ಕೆಳಗೆ ಬೀಳುತ್ತವೆ. ಈಗ ಮೂರ್ನಾಲ್ಕು ಕಾಗೆಗಳು ಬಿದ್ದಿವೆ. ಹೀಗೆ ಧರ್ಮಕ್ಷೇತ್ರದ ಹೆಗ್ಗಡೆ ಅವರು ಎಷ್ಟೇ ಟೀಕೆಗಳು ಬರಲಿ ಧೃತಿಗೆಡದೆ ಧರ್ಮಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.



ನಾನು ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಯಾವುದೇ ಊರಿಗೆ ಹೋದರೂ ಸಾವಿರಾರು ಹೆಣ್ಣುಮಕ್ಕಳಿಗೆ ಉದ್ಯೋಗಗಳನ್ನು ನೀಡುತ್ತಿದ್ದಾರೆ. ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆಗಳ ಪುನಶ್ಚೇತನ ಹೀಗೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಂತವರಿಗೆ ಉಗಿದರೆ ಆಕಾಶಕ್ಕೆ ಉಗಿದ ರೀತಿ ಆಗುತ್ತದೆ. ಅಧರ್ಮ ಹೆಚ್ಚಾದರೆ ಧರ್ಮದ ಕಾರ್ಯಗಳು ಹೆಚ್ಚಾಗಬೇಕು. ಇಂತಹ ಕಾರ್ಯದಲ್ಲಿ ಯುವ ಜನಾಂಗ ತೊಡಗಬೇಕು ಎಂದು ಸಲಹೆ ನೀಡಿದರು.

ಈ ಮೊದಲು ಮತಾಂತರ ಜಾಸ್ತಿಯಾಗಿತ್ತು. ಮೋದಿ ಬಂದ ಮೇಲೆ ಇವರಿಗೆ ವಿದೇಶಗಳಿಂದ ಬರುವ ಆದಾಯ ನಿಂತಿದೆ. ಹೀಗಾಗಿ ವಾಮಮಾರ್ಗಗಳನ್ನು ಹಿಡಿದಿದ್ದಾರೆ. ಹೀಗಾಗಿ ನಾವೆಲ್ಲಾ ಒಂದಾಗಬೇಕು. ಇವತ್ತು ಧರ್ಮ ಸಂರಕ್ಷಣಾ ವೇದಿಕೆ ಮೂಲಕ ನಾನು ಹೇಳುವುದೇನೆಂದರೆ ನನಗೆ ಮಠ ಮುಖ್ಯವಲ್ಲ, ಪೀಠ ಮುಖ್ಯವಲ್ಲ. ನನಗೆ ಧರ್ಮ ಮುಖ್ಯ, ಈ ರಾಷ್ಟ್ರ ಮುಖ್ಯ. ನಮ್ಮಿಂದ ಏನೂ ಕಿತ್ಕೊಳೋಕೆ ಆಗಲ್ಲ, ಈ ಸನ್ಯಾಸವನ್ನು ಯಾರೂ ಕಿತ್ಕೊಳೋಕೆ ಆಗಲ್ಲ. ಈ ನಿಟ್ಟಿನಲ್ಲಿ ಧರ್ಮ ರಕ್ಷಣೆಗೆ ಯುವಪಡೆ ಮುಂದಾಗಬೇಕು ಎಂದು ಕರೆ ನೀಡಿದರು.

ಈ ಸುದ್ದಿಯನ್ನೂ ಓದಿ | Dharmasthala: ಧರ್ಮಸ್ಥಳ ಸಂಚುಕೋರರಿಗೆ ಸೋಲು ಸನಾತನ ಧರ್ಮಕ್ಕೆ ಗೆಲುವು : ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಆಶಯ