ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dream11: ಏಷ್ಯಾಕಪ್‌ಗೂ ಮುನ್ನ ಟೀಮ್ ಇಂಡಿಯಾ ಪ್ರಾಯೋಜಕತ್ವ ತೊರೆಯಲಿದೆ ಡ್ರೀಮ್11!

ಬಿಸಿಸಿಐನೊಂದಿಗೆ ಬರೋಬ್ಬರಿ ₹358 ಕೋಟಿ ಮೊತ್ತದ ಜೆರ್ಸಿ ಪ್ರಾಯೋಜಕತ್ವ ಒಪ್ಪಂದವನ್ನು ಡ್ರೀಮ್11 ಹೊಂದಿದೆ. ಒಂದೊಮ್ಮೆ ಡ್ರೀಮ್‌11 ಪ್ರಾಯೋಜಕತ್ವ ಒಪ್ಪಂದವನ್ನು ರದ್ದುಗೊಳಿಸಿದರೆ ಏಷ್ಯಾ ಕಪ್‌ಗೂ ಮುನ್ನ ಬಿಸಿಸಿಐ ನೂತನ ಪ್ರಾಯೋಜಕತ್ವ ಹುಡುಕಬೇಕಿದೆ. 2023ರಲ್ಲಿ ಮೂರು ವರ್ಷಗಳ ಅವಧಿಗೆ ಡ್ರೀಮ್11 ಒಪ್ಪಂದ ಮಾಡಿಕೊಂಡಿತ್ತು.

ಭಾರತ ತಂಡದ ಪ್ರಾಯೋಜಕತ್ವ ತೊರೆಯಲಿದೆ ಡ್ರೀಮ್11; ಕಾರಣವೇನು?

Abhilash BC Abhilash BC Aug 24, 2025 8:55 PM

ನವದೆಹಲಿ: ಹೆಚ್ಚುತ್ತಿರುವ ಆನ್‌ಲೈನ್‌ ಗೇಮ್‌ ಚಟ, ಅಕ್ರಮ ಹಣ ವರ್ಗಾವಣೆ ಮತ್ತು ಆ್ಯಪ್‌ಗಳ ಮೂಲಕ ನಡೆಯುತ್ತಿರುವ ಹಣಕಾಸು ವಂಚನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಇತ್ತೀಚೆಗೆ ಎಲ್ಲಾ ರೀತಿಯ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಆನ್‌ಲೈನ್‌ ಗೇಮಿಂಗ್‌ ಉತ್ತೇಜನ ಮತ್ತು ನಿಯಂತ್ರಣ-2025 ವಿಧೇಯಕ ಜಾರಿಗೆ ತಂದ ಬೆನ್ನಲ್ಲೇ ಇದೀಗ ಆನ್‌ಲೈನ್‌ ಫ್ಯಾಂಟಸಿ ಗೇಮಿಂಗ್ ಫ್ಲಾಟ್‌ಫಾರ್ಮ್‌ 'ಡ್ರೀಮ್‌11'(Dream11), ಭಾರತ ಕ್ರಿಕೆಟ್ ತಂಡದೊಂದಿಗಿನ ಪ್ರಾಯೋಜಕತ್ವ ಒಪ್ಪಂದವನ್ನು ತೊರೆಯಲಿದೆ ಎಂದು ವರದಿಯಾಗಿದೆ.

ಬಿಸಿಸಿಐನೊಂದಿಗೆ ಬರೋಬ್ಬರಿ ₹358 ಕೋಟಿ ಮೊತ್ತದ ಜೆರ್ಸಿ ಪ್ರಾಯೋಜಕತ್ವ ಒಪ್ಪಂದವನ್ನು ಡ್ರೀಮ್11 ಹೊಂದಿದೆ. ಒಂದೊಮ್ಮೆ ಡ್ರೀಮ್‌11 ಪ್ರಾಯೋಜಕತ್ವ ಒಪ್ಪಂದವನ್ನು ರದ್ದುಗೊಳಿಸಿದರೆ ಏಷ್ಯಾ ಕಪ್‌ಗೂ ಮುನ್ನ ಬಿಸಿಸಿಐ ನೂತನ ಪ್ರಾಯೋಜಕತ್ವ ಹುಡುಕಬೇಕಿದೆ. 2023ರಲ್ಲಿ ಮೂರು ವರ್ಷಗಳ ಅವಧಿಗೆ ಡ್ರೀಮ್11 ಒಪ್ಪಂದ ಮಾಡಿಕೊಂಡಿತ್ತು. ಅಲ್ಲದೆ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ತನ್ನ ಲೊಗೊವನ್ನು ಮುದ್ರಿಸಿತ್ತು.

ವಿಧೇಯಕದಲ್ಲೇನಿದೆ?

ಆನ್‌ಲೈನ್‌ ಬೆಟ್ಟಿಂಗ್‌, ಜೂಜಾಟಗಳಿಗೆ ಸಂಪೂರ್ಣ ನಿಷೇಧ. ಅಂದರೆ ಫ್ಯಾಂಟಸಿ ಸ್ಪೋರ್ಟ್ಸ್‌, ಪೋಕರ್‌, ರಮ್ಮಿ ಮತ್ತು ಇತರೆ ಕಾರ್ಡ್‌ ಗೇಮ್ಸ್‌ ಸೇರಿ ಹಣ ಹಾಕಿ ಆಡುವ ಎಲ್ಲಾ ರೀತಿಯ ಗೇಮ್ಸ್‌ಗಳನ್ನು ನಿರ್ಬಂಧಿಸುತ್ತದೆ. ಆರೋಪಿಗಳಿಗೆ 3 ವರ್ಷದ ವರೆಗೆ ಜೈಲು, 1 ಕೋಟಿ ವರೆಗೆ ದಂಡ ವಿಧಿಸಲು ಅವಕಾಶ ಮಾಡಿಕೊಡುತ್ತದೆ. ಈ ಕಾಯ್ದೆ ಅನ್ವಯ ಆನ್‌ಲೈನ್‌ ಗೇಮ್‌ಗಳ ನಿರ್ವಹಣೆ, ವೇದಿಕೆ ಕಲ್ಪಿಸುವುದು, ಜಾಹೀರಾತು ಪ್ರಸಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಹೀಗಾಗಿ ಡ್ರೀಮ್11 ಯಾವುದೇ ಜಾಹೀರಾತು ಪ್ರಸಾರ ಮಾಡುವಂತಿಲ್ಲ. ಇದೇ ಕಾರಣಕ್ಕೆ ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವವನ್ನು ಕೊನೆಗೊಳಿಸಲು ನಿರ್ಧರಿಸಿದೆ.

ಇದನ್ನೂ ಓದಿ Online Gaming Bill 2025: ಆನ್‌ಲೈನ್‌ ಗೇಮಿಂಗ್‌ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ