Bengaluru News: ಶ್ರೀ ವಾಸವಿ ಯುವಜನ ಸಂಘದಿಂದ ಮಣ್ಣಿನ ಗೌರಿ, ಗಣಪತಿ ಮೂರ್ತಿಗಳ ವಿತರಣೆ
ಪರಿಸರ ಸ್ನೇಹಿ ಹಬ್ಬ ಆಚರಿಸುವ ರಾಜ್ಯ ಸರ್ಕಾರದ ಕೆರೆಗೆ ಓಗೊಟ್ಟಿರುವ ಶ್ರೀ ವಾಸವಿ ಯುವಜನ ಸಂಘ ಜನ ಸಾಮಾನ್ಯರಿಗೆ ಮಣ್ಣಿನ ಗೌರಿ, ಗಣಪತಿ ಮೂರ್ತಿಗಳನ್ನು ವಿತರಿಸಿತು. “ಪ್ರಕೃತಿಯನ್ನು ಉಳಿಸಿ – ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಿ” ಎಂಬ ಘೋಷವಾಕ್ಯ ಮೊಳಗಿಸಿದೆ. ನಗರದ ಸಸ್ಯಕಾಶಿ ಲಾಲ್ಬಾಗ್ ಪಶ್ಚಿಮ ದ್ವಾರದ ಮುಂದೆ ಶ್ರೀ ವಾಸವಿ ಯುವಜನ ಸಂಘ ಸದಸ್ಯರು 9ನೇ ವರ್ಷವೂ ಮಣ್ಣಿನ ಮೂರ್ತಿಗಳನ್ನು ಗಣಪತಿಯನ್ನು ವಿತರಿಸಿದರು.


ಬೆಂಗಳೂರು: ಪರಿಸರ ಸ್ನೇಹಿ ಹಬ್ಬ ಆಚರಿಸುವ ರಾಜ್ಯ ಸರ್ಕಾರದ ಕೆರೆಗೆ ಓಗೊಟ್ಟಿರುವ ಶ್ರೀ ವಾಸವಿ ಯುವಜನ ಸಂಘ ಜನ ಸಾಮಾನ್ಯರಿಗೆ ಮಣ್ಣಿನ ಗೌರಿ, ಗಣಪತಿ ಮೂರ್ತಿಗಳನ್ನು ವಿತರಿಸಿತು. “ಪ್ರಕೃತಿಯನ್ನು ಉಳಿಸಿ – ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಿ” ಎಂಬ ಘೋಷ ವಾಕ್ಯ ಮೊಳಗಿಸಿದೆ. ನಗರದ ಸಸ್ಯಕಾಶಿ ಲಾಲ್ಬಾಗ್ ಪಶ್ಚಿಮ ದ್ವಾರದ ಮುಂದೆ ಶ್ರೀ ವಾಸವಿ ಯುವ ಜನ ಸಂಘ ಸದಸ್ಯರು 9ನೇ ವರ್ಷವೂ ಮಣ್ಣಿನ ಮೂರ್ತಿಗಳನ್ನು ಗಣಪತಿಯನ್ನು ವಿತರಿಸಿದರು.
ಬೆಳ್ಳಂಬೆಳಿಗ್ಗೆ ವಾಯು ವಿಹಾರಕ್ಕೆ ಬಂದವರಿಗೆ 500 ಮಣ್ಣಿನ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ವಿತರಿಸಿದರು. ಪ್ರಕೃತಿಗೆ ಹಾನಿಕಾರಕವಾದ ರಾಸಾಯನಿಕ ಬಣ್ಣಗಳಿಂದ ಮಾಡಿದ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಖರೀದಿಯನ್ನು ನಿಲ್ಲಿಸಬೇಕು. ಸರ್ಕಾರದ ಆದೇಶಕ್ಕೆ ಮನ್ನಣೆ ನೀಡಿ ಮಣ್ಣಿನಿಂದ ಮಾಡಿದ ದೀಪಗಳನ್ನೇ ಬಳಸಬೇಕು ಎಂದು ಜನ ಸಾಮಾನ್ಯರಿಗೆ ತಿಳಿವಳಿಕೆ ನೀಡಿದರು.
ಇದನ್ನೂ ಓದಿ: Greater Bengaluru Bill: ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿ.ಎ ಡಾ. ವಿಷ್ಣು ಭರತ್ ಆಲಂಪಲ್ಲಿ ಅವರು ರಚಿಸಿರುವ (ಅವರ 50ನೇ ಪುಸ್ತಕ) "ಮೋಸ್ಟ್ ಅಡೋರಬಲ್ ಮೋದಿಜಿ" ಎಂಬ ಶೀರ್ಷಿಕೆಯ ಪುಸ್ತಕವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ನಂತರ ಮಾತನಾಡಿದ ಸಿ.ಎ ಡಾ. ವಿಷ್ಣು ಭರತ್ ಆಲಂಪಲ್ಲಿ, ಪರಿಸರ ಸಂರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ. ನಾವೆಲ್ಲರೂ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿಸಬೇಕು ವಿವರಿಸಿದರು.
ಈ ಸಂದರ್ಭದಲ್ಲಿ ಶ್ರೀ ವಾಸವಿ ಯುವಜನ ಸಂಘದ ಪದಾಧಿಕಾರಿಗಳಾದ ದ್ವಾರಕನಾಥ್, ಶಂಕರ್, ಶ್ರೀಧರ್, ಸಂಘದ ಅಧ್ಯಕ್ಷ ಗುರುಪ್ರಸಾದ್, ಮಾಜಿ ಅಧ್ಯಕ್ಷ ಮುರಳಿ ಕೃಷ್ಣ, ಪದಾಧಿಕಾರಿಗಳಾದ ಮಹೇಂದ್ರ ಕುಮಾರ್, ಬಾಲಾಜಿ ಸೇರಿ 40 ಕ್ಕೂ ಅಧಿಕ ಮಂದಿ ಜನ ಜಾಗೃತಿಯಲ್ಲಿ ಪಾಲ್ಗೊಂಡರು.