ಬೆಂಗಳೂರು: ಭೂಮಿ ಸಂರಕ್ಷಣೆ - ಅಭಿಯಾನ ಜನಜಾಗೃತಿ ಕಾರ್ಯಕ್ರಮವನ್ನು ಆರ್ಟ್ ಕಲ್ಚರಲ್ ಎಜುಕೇಶ ನಲ್ ಎನ್ ಲೈಟ್ ಫೌಂಡೇಶನ್ (ACE Foundation) ಸಂಸ್ಥಾಪಕಿ ಅಂಬಿಕಾ ಸಿ ಮತ್ತು ಸಂಸ್ಥೆ ಯವರು, "ವಿಶ್ವಭೂಮಿ ದಿನಾಚರಣೆ" ಅಂಗವಾಗಿ "ನಮ್ಮ ಶಕ್ತಿ - ನಮ್ಮ ಗ್ರಹ", ಎಂಬ ವಿಷಯ ಆಧಾರಿತ, ಭೂಮಿ ಸಂರಕ್ಷಣೆ ಅಭಿಯಾನ ಜನಜಾಗೃತಿ ಕಾರ್ಯಕ್ರಮವನ್ನು ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಾಲ ಭವನ ಸೊಸೈಟಿ ಕಬ್ಬನ್ ಪಾರ್ಕ್ ಬೆಂಗಳೂರು, ರವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಲ ಭವನದ ಅಧೀಕ್ಷಕರಾದ ಪುಷ್ಪಾ ವತಿ ಆರ್ ಮತ್ತು ಆಡಳಿತ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮಕ್ಕಳೊಡನೆ ಉಪಸ್ಥಿತರಿದ್ದು ಭೂಮಿ ದಿನಾಚರಣೆಯನ್ನು ಸಂಭ್ರಮದಿಂದ " ಭೂ ತಾಯಿಗೆ ನಮಸ್ಕರಿಸಿ " ಭಕ್ತಿ ಮತ್ತು ಪ್ರೀತಿಯಿಂದ " ಆಚರಿಸಿದರು.
ಈ ಕಾರ್ಯಕ್ರಮವು ಭರತನಾಟ್ಯ ಚಿತ್ರಕಲೆ ಭೂಮಿ ಕುರಿತಾದ ಭಾಷಣ ಇತ್ಯಾದಿಗಳನ್ನು ಒಳಗೊಂಡಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಸಂಸ್ಥೆಯ ಸಂಸ್ಥಾಪಕಿ ಅಂಬಿಕಾ ಸಿ, ರವರೊಂದಿಗೆ ಪುಷ್ಪಾವತಿ ಆರ್ ಮತ್ತು ಶಿಕ್ಷಕರು, ಗಿಡ ಮರ ಬೆಳೆಸುವ ಹವ್ಯಾಸ, ಪಂಚಭೂತಗಳ ಮಹತ್ವ, ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಪ್ಲಾಸ್ಟಿಕ್ ಮುಕ್ತ ಜೀವನ, ಹಾಗೂ ನೀರಿನ ಮಿತ ಬಳಕೆ ಇತ್ಯಾದಿ ಪರಿಸರ ಸಂರಕ್ಷಣೆ ಕುರಿತಾಗಿ ವಿಷಯಗಳ ಬಗ್ಗೆ ಮಾತನಾಡಿ ಮಕ್ಕಳಲ್ಲಿ ಅರಿವು ಜಾಗೃತಿ ಮೂಡಿಸಿದರು.