ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ವಿಶ್ವದ ಮೊದಲ ಸಬ್ ಕ್ಯುಟೇನಿಯಸ್ ಇಮ್ಯುನೊಥೆರಪಿ-ಟೆಸೆಂಟ್ರಿಕ್ ಎಸ್ ಸಿ ಬಿಡುಗಡೆ

ಪರಂಪರಾಗತ IV  ಇನ್ಫೂಶನ್ ಚಿಕಿತ್ಸೆಗೆ ಹಲವು ಗಂಟೆಗಳು ಬೇಕಾಗುತ್ತವೆ. ಚಿಕಿತ್ಸೆ ನೀಡುವ ಅವಧಿಯನ್ನು ಸುಮಾರು 7 ನಿಮಿಷಗಳಿಗೆ ಇಳಿಸುವ ಮೂಲಕ Tecentriq SC ಒಂದು ಮಹತ್ವದ ಕ್ರಾಂತಿಕಾರಿ ಹೊಸ ಆವಿಷ್ಕಾರವಾಗಿ ಹೊರಹೊಮ್ಮಿದೆ. ಇದು ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ಅನುಭವವನ್ನು ಗಮನಾರ್ಹ ಮಟ್ಟದಲ್ಲಿ ಸುಧಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಬೆಂಗಳೂರು: ಹೆಸರಾಂತ ಫಾರ್ಮಸಿ ಕಂಪನಿಯಾಗಿರುವ Roche Pharma India ಇಂದು ಭಾರತದಲ್ಲಿ Tecentriq® (atezolizumab) SC ಅನ್ನು ಬಿಡುಗಡೆ ಮಾಡಿದೆ. ಇದು ದೇಶ ದಲ್ಲಿಯೇ ಶ್ವಾಸಕೋಶ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುವ ಮೊಟ್ಟ ಮೊದಲ ಸಬ್ ಕ್ಯುಟೇನಿಯಸ್ (ಚರ್ಮದ ಕೆಳಭಾಗಕ್ಕೆ ನೀಡುವ) ಇಮ್ಯುನೋಥೆರಪಿ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯನ್ನು ಸುಮಾರು 7 ನಿಮಿಷಗಳಲ್ಲಿ ನೀಡಬಹುದಾಗಿದೆ.

ಪರಂಪರಾಗತ IV  ಇನ್ಫೂಶನ್ ಚಿಕಿತ್ಸೆಗೆ ಹಲವು ಗಂಟೆಗಳು ಬೇಕಾಗುತ್ತವೆ. ಚಿಕಿತ್ಸೆ ನೀಡುವ ಅವಧಿಯನ್ನು ಸುಮಾರು 7 ನಿಮಿಷಗಳಿಗೆ ಇಳಿಸುವ ಮೂಲಕ Tecentriq SC   ಒಂದು ಮಹತ್ವದ ಕ್ರಾಂತಿಕಾರಿ ಹೊಸ ಆವಿಷ್ಕಾರವಾಗಿ ಹೊರಹೊಮ್ಮಿದೆ. ಇದು ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ಅನುಭವವನ್ನು ಗಮನಾರ್ಹ ಮಟ್ಟದಲ್ಲಿ ಸುಧಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಅಂದರೆ, ಚಿಕಿತ್ಸಾ ಸಮಯವನ್ನು ಸುಮಾರು ಶೇ.80 ರಷ್ಟು ಕಡಿಮೆ ಮಾಡುತ್ತದೆ, ಪರೋಕ್ಷವಾಗಿ ಚಿಕಿತ್ಸಾ ವೆಚ್ಚಗಳನ್ನು ಕಡಿಮೆ ಮಾಡುತ್ತದೆ, ದೂರ ಪ್ರಯಾಣ ಮಾಡುವ ಅಗತ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ರೋಗಿಗಳು ಮತ್ತು ಅವರನ್ನು ನೋಡಿ ಕೊಳ್ಳುವವರು ಆಸ್ಪತ್ರೆಗಳಲ್ಲಿ ಕಡಿಮೆ ಸಮಯ ಕಳೆಯುವಂತೆ ಮಾಡಿ ತಮ್ಮ ದೈನಂದಿನ ಚಟುವಟಿಕೆಗಳಿಗೆ ಹೆಚ್ಚು ಸಮಯವನ್ನು ನೀಡಲು ಸಹಾಯ ಮಾಡುವುದು ಸೇರಿದಂತೆ ಇನ್ನಿತರ ಪ್ರಮುಖ ಪ್ರಯೋಜನಗಳನ್ನು ನೀಡುತ್ತದೆ.

ಇದನ್ನೂ ಓದಿ: Bangalore News: ಅಂತಾರಾಷ್ಟ್ರೀಯ ಲೆಕ್ಕಪತ್ರ ನಿರ್ವಹಣಾ ದಿನ ಪ್ರಯುಕ್ತ ಕಾರ್ಯತಂತ್ರ ಮತ್ತು ಸುಸ್ಥಿರ ಬೆಳವಣಿಗೆ ಕುರಿತು ಐಸಿಎಂಎಐ ನಿಂದ ಉನ್ನತ ಮಟ್ಟದ ವಿಚಾರ ಸಂಕಿರಣ

ಜಾಗತಿಕ ಅಧ್ಯಯನಗಳೂ ಸಹ ಸಬ್ ಕ್ಯುಟೇನಿಯಸ್ ವಿಧಾನಕ್ಕೆ ರೋಗಿಗಳು ಹೆಚ್ಚು ಆದ್ಯತೆ ನೀಡುತ್ತಿರುವುದನ್ನು ದೃಢಪಡಿಸುತ್ತವೆ:

  • 2024 ರ European Lung Cancer Congress (ELCC)  ನಲ್ಲಿ ಪ್ರಸ್ತುತಪಡಿಸಲಾದ IMscin002 ಅಧ್ಯಯನದ ಫಲಿತಾಂಶಗಳ ಪ್ರಕಾರ, 5 ರಲ್ಲಿ 4 ರೋಗಿಗಳು IV ವಿಧಾನ ಕ್ಕಿಂತ Tecentriq SC ಚಿಕಿತ್ಸೆಯನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.
  • ರೋಗಿಗಳು ಕ್ಲಿನಿಕ್ ನಲ್ಲಿ ಕಡಿಮೆ ಸಮಯ ಕಳೆಯಬೇಕಾಗುವುದು, ಹೆಚ್ಚಿನ ಆರಾಮ ದಾಯಕ ಅನುಭವ ಮತ್ತು ಕಡಿಮೆ ಮಾನಸಿಕ ಒತ್ತಡವನ್ನು ಈ ಆಯ್ಕೆಯ ಪ್ರಮುಖ ಕಾರಣಗಳೆಂದು ಉಲ್ಲೇಖಿಸಿದ್ದಾರೆ.
  • ಅಧ್ಯಯನಗಳು ಸಬ್ ಕ್ಯುಟೇನಿಯಸ್ ವಿಧಾನವು IV ಚಿಕಿತ್ಸೆಯೊಂದಿಗೆ ಹೋಲಿಸಿದರೆ ಕಡಿಮೆ ಅಸ್ವಸ್ಥತೆ, ನೋವು ಮತ್ತು ಚರ್ಮದ ತುರಿಕೆಗೆ ಕಾರಣವಾಗುತ್ತದೆ ಎಂಬು ದನ್ನೂ ತೋರಿಸಿವೆ.
  • 2024 ರ European Lung Cancer Congress (ELCC)  ನಲ್ಲಿ ಪ್ರಸ್ತುತಪಡಿಸಲಾದ IMscin001 ಅಧ್ಯಯನದಲ್ಲಿ ಶೇ.90 ರಷ್ಟು ಆರೋಗ್ಯ ವೃತ್ತಿಪರರು SC ರೂಪವನ್ನು ನೀಡುವುದು ಸುಲಭ ಎಂಬುದನ್ನು ಒಪ್ಪಿಕೊಂಡಿದ್ದು, ಶೇ.75 ರಷ್ಟು ಜನರು ಇದು ಆರೋಗ್ಯ ಸೇವಾ ತಂಡಗಳ ಸಮಯವನ್ನು ಉಳಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮೇದಾಂತ ಸಂಸ್ಥೆಯ ಮೆಡಿಕಲ್ ಅಂಕಾಲಜಿ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥರಾದ ಡಾ.ಸಜ್ಜನ್ ರಾಜ್ ಪುರೋಹಿತ್ ಅವರು ಮಾತನಾಡಿ, ``ಇಮ್ಯುನೋ ಥೆರಪಿ ಕ್ಯಾನ್ಸರ್ ನೊಂದಿಗೆ ಬದುಕುತ್ತಿರುವ ಜನರ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆಯನ್ನು ತಂದಿದೆ. ಆದರೆ, ಪರಂಪರಾಗತ IV ವಿಧಾನವು ರೋಗಿಗಳಿಗೆ ದೀರ್ಘ ಮತ್ತು ಕಷ್ಟಕರ ಅನುಭವವಾಗುವುದರ ಜೊತೆಗೆ ತೃತೀಯ ದರ್ಜೆಯ ಆಸ್ಪತ್ರೆಗಳ ಮೇಲೂ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಅದೇ ರೀತಿ ಪದೇಪದೆ ಆಸ್ಪತ್ರೆಗೆ ಹೋಗುವುದು ಮತ್ತು ದೀರ್ಘ ಚಿಕಿತ್ಸಾ ಅವಧಿಗಳು ಕ್ಯಾನ್ಸರ್ ಚಿಕಿತ್ಸೆಯ ಮಾನಸಿಕ ಹಾಗೂ ದೈಹಿಕ ಭಾರವನ್ನು ಹೆಚ್ಚಿಸುತ್ತವೆ. ಸಬ್ ಕ್ಯುಟೇನಿಯಸ್ ವಿಧಾನವು ರೋಗಿಗಳಿಗೆ ಹೆಚ್ಚು ವೇಗವಾಗಿ ಮತ್ತು ಸುಲಭವಾಗಿ ಚಿಕಿತ್ಸೆ ಪಡೆಯಲು ಅವಕಾಶ ನೀಡುತ್ತದೆ. ಇದರಿಂದ ಅವರ ಒಟ್ಟಾರೆ ಚಿಕಿತ್ಸಾ ಅನುಭವ ಸುಧಾರಿಸುವುದರ ಜೊತೆಗೆ ಕಾಯುವ ಸಮಯ ಮತ್ತು ಚಿಕಿತ್ಸಾ ವಿಳಂಬಗಳೂ ಕಡಿಮೆಯಾಗುತ್ತವೆ’’ ಎಂದು ಹೇಳಿದರು.

Roche Pharma India ದ ವ್ಯವಸ್ಥಾಪಕ ನಿರ್ದೇಶಕ & ಸಿಇಒ ರಾಜ್ವಿಂದರ್ (ರಜ್ಜಿ) ಮೆಹ್ದ್ವಾನ್ ಅವರು ಮಾತನಾಡಿ. `` Roche ನಲ್ಲಿ ನಾವು ಭಾರತಕ್ಕೆ ಹೊಸ ಆವಿಷ್ಕಾರ ಗಳನ್ನು ತರುವುದಕ್ಕೆ ಬದ್ಧರಾಗಿದ್ದೇವೆ. ಇವು ಕೇವಲ ಕ್ಲಿನಿಕಲ್ ಫಲಿತಾಂಶಗಳನ್ನು ಮಾತ್ರವಲ್ಲದೇ, ಚಿಕಿತ್ಸೆಯ ಸಮಯದಲ್ಲಿ ರೋಗಿಗಳು ಎದುರಿಸುವ ವಾಸ್ತವಿಕ ಸವಾಲು ಗಳು ಮತ್ತು ಅಗತ್ಯಗಳನ್ನು ಸಹ ಗಮನದಲ್ಲಿಟ್ಟುಕೊಳ್ಳುತ್ತವೆ. ಟೆಸೆಂಟ್ರಿಕ್ ಎಸ್ ಸಿ ಬಿಡುಗಡೆ ನಮ್ಮ ಮುಂದುವರಿದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ವೇಗವಾದ, ಹೆಚ್ಚು ಅನುಕೂಲಕರವಾದ ಮತ್ತು ರೋಗಿ-ಕೇಂದ್ರಿತ ಚಿಕಿತ್ಸಾ ಪರಿಹಾರಗಳ ಮೂಲಕ ಸುಧಾರಿತ ಕ್ಯಾನ್ಸರ್ ಆರೈಕೆಗೆ ಹೆಚ್ಚಿನ ಪ್ರವೇಶವನ್ನು ಒದಗಿಸುವುದರ ಜೊತೆಗೆ ಆರೋಗ್ಯ ವ್ಯವಸ್ಥೆಗಳು ಹೆಚ್ಚು ಪರಿಣಾಮಕಾರಿ ಮತ್ತು ಸಮರ್ಥವಾಗಿ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡಲು ಸಹ ನೆರವಾಗುತ್ತದೆ’’ ಎಂದು ತಿಳಿಸಿದರು.

Tecentriq SC  ಜಾಗತಿಕವಾಗಿ ಬಹು ವಿಧದ ಕ್ಯಾನ್ಸರ್ ಗಳಿಗೆ ಇಂಟ್ರಾವೀನಸ್ (IV) ಮತ್ತು ಸಬ್ ಕ್ಯುಟೇನಿಯಸ್ (SC) ಎರಡೂ ರೂಪಗಳಲ್ಲಿ ಲಭ್ಯವಿರುವ ಮೊದಲ ಮತ್ತು ಏಕೈಕ PD-(L)1 ನಿರೋಧಕವಾಗಿದೆ. ಇದಕ್ಕೆ ಮೊದಲು 2023 ರಲ್ಲಿ MHRA ಅನುಮೋದನೆ ನೀಡಿದ್ದು, ನಂತರ 2024 ರಲ್ಲಿ USFDA ಅನುಮೋದನೆ ನೀಡಿತು. ಪ್ರಸ್ತುರ ಟೆಸೆಂಟ್ರಿಕ್ ಎಸ್ ಸಿಗೆ 85 ಕ್ಕೂ ಹೆಚ್ಚು ದೇಶಗಳಲ್ಲಿ ಅನುಮೋದನೆ ದೊರೆತಿದ್ದು, ಜಾಗತಿಕವಾಗಿ 10,000 ಕ್ಕೂ ಹೆಚ್ಚು ರೋಗಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಕ್ಲಿನಿಕಲ್ ಅಧ್ಯಯನಗಳು ಟೆಸೆಂಟ್ರಿಕ್ IV ಗೆ ಸಮಾನವಾದ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಟೆಸೆಂಟ್ರಿಕ್ ಎಸ್ ಸಿ ಕೂಡ ಒದಗಿಸುತ್ತದೆ ಎಂದು ತೋರಿಸಿವೆ. ಜೊತೆಗೆ ಇದು ಗಮನಾರ್ಹವಾಗಿ ವೇಗವಾದ ಮತ್ತು ಹೆಚ್ಚು ಅನುಕೂಲಕರ ಚಿಕಿತ್ಸಾ ಅನುಭವವನ್ನು ನೀಡುತ್ತದೆ.

ಟೆಸೆಂಟ್ರಿಕ್ ಎಸ್ ಸಿ ಅನ್ನು Halozyme Therapeutics’ ಸಂಸ್ಥೆಯ Enhanze® ಔಷಧ ವಿತರಣೆ ತಂತ್ರಜ್ಞಾನದೊಂದಿಗೆ ಸಂಯೋಜನೆ ಮಾಡಲಾಗಿದೆ. ಈ ತಂತ್ರಜ್ಞಾನದಲ್ಲಿ recombinant human hyaluronidase PH20 (rHuPH20) ಎಂಬ ಎಂಜೈಮ್ ಬಳಸ ಲಾಗುತ್ತದೆ. ಇದು ಸಬ್ ಕ್ಯುಟೇನಿಯಸ್ ಭಾಗದಲ್ಲಿ ತಾತ್ಕಾಲಿಕವಾಗಿ ಪರ್ಮಿಯೆ ಬಿಲಿಟಿಯನ್ನು (ಔಷಧ ಹರಡುವ ಸಾಮರ್ಥ್ಯವನ್ನು) ಹೆಚ್ಚಿಸಿ ಔಷಧವು ವೇಗವಾಗಿ ಹರಡಿ ರಕ್ತ ಚಲನೆಯಲ್ಲಿ ಶೀಘ್ರವಾಗಿ ಹರಡಲು ಸಹಕಾರಿಯಾಗಿದೆ.

Roche Pharma India ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಸಿವಬಾಲನ್ ಸಿವನೇಸನ್ ಅವರು ಮಾತನಾಡಿ, ``ಕ್ಯಾನ್ಸರ್ ಆರೈಕೆ ಈಗ ಕೇವಲ ಬದುಕುಳಿಯುವ ಫಲಿತಾಂಶಗಳಿಗೆ ಮಾತ್ರ ಸೀಮಿತವಾಗಿಲ್ಲ. ರೋಗಿಗಳ ಅನುಭವ, ಅನುಕೂಲತೆ ಹಾಗೂ ಜೀವನದ ಗುಣ ಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡುವ ದಿಕ್ಕಿನಲ್ಲಿ ಅಭಿವೃದ್ಧಿಯಾಗುತ್ತಿದೆ. ಟಸೆಂಟ್ರಿಕ್ ಎಸ್ ಸಿ ಮೂಲಕ ನಾವು ಚಿಕಿತ್ಸೆಯ ಅವಧಿಯನ್ನು ಅರ್ಥಪೂರ್ಣವಾಗಿ ಕಡಿಮೆ ಮಾಡುವ ಜೊತೆಗೆ ಟೆಸೆಂಟ್ರಿಕ್ ನಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ಪರಿಣಾಮಕಾರಿ ಮತ್ತು ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳುವಂತಹ ಹೊಸ ಆವಿಷ್ಕಾರವನ್ನು ಪರಿಚಯಿಸು ತ್ತಿದ್ದೇವೆ. ಇಂತಹ ಪ್ರಗತಿಗಳು ಭಾರತದಲ್ಲಿ ಹೆಚ್ಚು ರೋಗಿ-ಕೇಂದ್ರಿತ ಹಾಗೂ ಭವಿಷ್ಯಕ್ಕೆ ಸಿದ್ಧವಾದ ಕ್ಯಾನ್ಸರ್ ಆರೈಕೆ ವ್ಯವಸ್ಥೆಯನ್ನು ನಿರ್ಮಿಸಲು ಮಹತ್ವದ ಪಾತ್ರ ವಹಿಸ ಬಹುದು ಎಂದು ನಾವು ನಂಬಿದ್ದೇವೆ’’ ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿ ವಿಕೇಂದ್ರೀಕೃತ ಕ್ಯಾನ್ಸರ್ ಆರೈಕೆಗೆ ಉತ್ತೇಜನ

ಕ್ಯಾನ್ಸರ್ ನೊಂದಿಗೆ ಬದುಕುತ್ತಿರುವ ಜನರಿಗೆ ಚಿಕಿತ್ಸೆ ಕೇವಲ ಒಂದು ರೋಗದ ವಿರುದ್ಧದ ಹೋರಾಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ತೃತೀಯ ದರ್ಜೆಯ ಆಸ್ಪತ್ರೆಗಳಿಗೆ ಪದೇ ಪದೆ ಹೋಗುವುದು, ದೀರ್ಘಕಾಲ ಕಾಯುವುದು, ಹೆಚ್ಚಿನ ಅವಧಿಯ ಇನ್ಫೂಶನ್ ಚಿಕಿತ್ಸೆ, ಆಸ್ಪತ್ರೆ ವೆಚ್ಚಗಳು ಕಡಿಮೆಯಾಗುವುದು ಮತ್ತು ಮಾನಸಿಕ ದಣಿವನ್ನು ಉಂಟು ಮಾಡು ತ್ತವೆ. ರೋಗಿಗಳು ಮತ್ತು ಅವರನ್ನು ಆರೈಕೆ ಮಾಡುವವರ ಮೇಲಿನ ದೈಹಿಕ ಮತ್ತು ಮಾನಸಿಕ ಹಾಗೂ ಆರ್ಥಿಕ ಒತ್ತಡವನ್ನು ಉಂಟುಮಾಡುತ್ತವೆ. ಭಾರತದಲ್ಲಿ ವಿಶೇಷವಾಗಿ ಸಣ್ಣ ಪಟ್ಟಣಗಳಿಂದ ಮಹಾನಗರಗಳ ಕ್ಯಾನ್ಸರ್ ಕೇಂದ್ರಗಳಿಗೆ ದೂರ ಪ್ರಯಾಣಿಸುವ ಅನೇಕ ರೋಗಿಗಳಿಗಾಗಿ ಚಿಕಿತ್ಸೆ ಪಡೆಯುವ ಒಂದು ದಿನ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿರುತ್ತದೆ.

ಟೆಸೆಂಟ್ರಿಕ್ ಎಸ್ ಸಿ ಬಿಡುಗಡೆ ಭಾರತದಲ್ಲಿ ವಿಕೇಂದ್ರೀಕೃತ ಕ್ಯಾನ್ಸರ್ ಆರೈಕೆಯತ್ತ ನಡೆಯುತ್ತಿರುವ ವ್ಯಾಪಕ ಬದಲಾವಣೆಯೊಂದಿಗೂ ಹೊಂದಿಕೊಳ್ಳುತ್ತದೆ. ಕಡಿಮೆ ಅವಧಿಯ ಚಿಕಿತ್ಸಾ ವಿಧಾನಗಳು ಆಸ್ಪತ್ರೆಗಳ ಹಾಸಿಗೆಗಳ ಬಳಕೆಯನ್ನು ಸುಧಾರಿಸಲು, ಆರೋಗ್ಯ ಸಿಬ್ಬಂದಿಯ ಸಮಯವನ್ನು ಉಳಿಸಲು ಹಾಗೂ ತೃತೀಯ ದರ್ಜೆಯ ಕ್ಯಾನ್ಸರ್ ಕೇಂದ್ರಗಳ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡಬಹುದು. ಜೊತೆಗೆ ಇದು ಚಿಕಿತ್ಸೆ ಸೇವೆಗಳನ್ನು ಡೇಕೇರ್ ಕೇಂದ್ರಗಳಿಗೆ ಹಾಗೂ ಸಾಂಪ್ರದಾಯಿಕ ತೃತೀಯ ದರ್ಜೆಯ ಆಸ್ಪತ್ರೆಗಳ ಹೊರಗೂ ವಿಸ್ತರಿಸಲು ನೆರವಾಗಿ, ಆರೋಗ್ಯ ವ್ಯವಸ್ಥೆಗಳು ಹೆಚ್ಚು ರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಜಾಗತಿಕ ಮೌಲ್ಯಮಾಪನಗಳ ಪ್ರಕಾರ, ಇಂಟ್ರಾವೀನಸ್ (IV) ಇನ್ಫೂ ಷನ್ ಮೂಲಕ ಒಬ್ಬ ರೋಗಿಗೆ ಚಿಕಿತ್ಸೆ ನೀಡುವ ಸಮಯದಲ್ಲೇ ಸಬ್ ಕ್ಯುಟೇನಿಯಸ್ ವಿಧಾನ ಬಳಸಿ ಗರಿಷ್ಠ 5 ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಧ್ಯತೆ ಇದೆ. ಇದರಿಂದ ಆರೋಗ್ಯ ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ಉತ್ತಮ ಬಳಕೆ ಸಾಧ್ಯವಾಗುತ್ತದೆ.

ಬೆಂಗಳೂರಿನ ಮಣಿಪಾಲ್ ಹಾಸ್ಪಿಟಲ್ ನ ಮೆಡಿಕಲ್ ಆಂಕಾಲಾಜಿ ವಿಭಾಗದ  ಕನ್ಸಲ್ಟೆಂಟ್ ಅಂಡ್ ಎಚ್ಒಡಿ ಡಾ.ಅಮಿತ್ ರೌಥಾನ್ ಅವರು ಮಾತನಾಡಿ, ``ಭಾರತದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಭಾರವು ಕ್ಯಾನ್ಸರ್ ಆರೈಕೆಯನ್ನು ನೀಡುವ ರೀತಿಯನ್ನು ನಾವು ಮರುಪರಿಶೀಲಿಸುವ ಅಗತ್ಯವನ್ನು ಉಂಟು ಮಾಡಿದೆ. ಸಬ್ ಕ್ಯುಟೇನಿಯಸ್ ಇಮ್ಯುನೋಥೆರಪಿಯಂತಹ ಆವಿಷ್ಕಾರಗಳು ಚಿಕಿತ್ಸೆ ನೀಡುವ ಪ್ರಕ್ರಿಯೆ ಯನ್ನು ಸರಳಗೊಳಿಸಲು ಆಸ್ಪತ್ರೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೊಡ್ಡ ಮಹಾನಗರ ಆಸ್ಪತ್ರೆಗಳ ಹೊರಗೂ ವಿಕೇಂದ್ರೀಕೃತ ಆರೈಕೆ ಮಾದರಿಗಳನ್ನು ಬೆಂಬಲಿಸಲು ಸಾಧ್ಯತೆಗಳನ್ನು ಹೊಂದಿವೆ. ಕಡಿಮೆ ಅವಧಿಯ ಚಿಕಿತ್ಸಾ ವಿಧಾನಗಳು ರೋಗಿಗಳಿಗೂ ಹಾಗೂ ಆರೋಗ್ಯ ವ್ಯವಸ್ಥೆಗೂ ಕ್ಯಾನ್ಸರ್ ಆರೈಕೆಯನ್ನು ಹೆಚ್ಚು ಸುಲಭವಾಗಿ ಹಾಗೂ ಅನುಕೂಲಕರವಾಗಿ ಮಾಡಲು ಸಹಾಯ ಮಾಡಬಹುದು’’ ಎಂದರು.

*

7 ನಿಮಿಷಗಳ ಚಿಕಿತ್ಸೆಯು ಸಮಯವನ್ನು ಶೇ.80 ರಷ್ಟು ಕಡಿಮೆ ಮಾಡುತ್ತದೆ

ರೋಗಿಗಳು ಆಸ್ಪತ್ರೆಗಳಲ್ಲಿ ದಾಖಲಾಗುವ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ತಮಗಿಷ್ಟವಾದ ಚಟುವಟಿಕೆಗಳಲ್ಲಿ ಹೆಚ್ಚು ಸಮಯವನ್ನು ವ್ಯಯಿಸಲು ಸಹಾಯ ಮಾಡುತ್ತದೆ

  • ಇಂಟ್ರಾವೆನಸ್ ಇನ್ಫೂಷನ್ ನಲ್ಲಿ ಒಬ್ಬ ರೋಗಿಗೆ ಚಿಕಿತ್ಸೆ ನೀಡಲು ತೆಗೆದುಕೊಳ್ಳವು ಸಮಯದಲ್ಲಿ 5 ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ, ಆರೋಗ್ಯ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ
  • 85 ದೇಶಗಳಲ್ಲಿ ಇದನ್ನು ಅನುಮೋದಿಸಲಾಗಿದೆ. 10,000+ ರೋಗಿಗಳು ಜಾಗತಿಕವಾಗಿ ಪ್ರಯೋಜನ ಪಡೆದಿದ್ದಾರೆ
  • ಸಹಾಯಕ ಮತ್ತು ಮೆಟಾಸ್ಟಾಟಿಕ್ ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್ ಹೊಂದಿರುವ ಅರ್ಹ ವಯಸ್ಕರಲ್ಲಿ ಮೊನೊಥೆರಪಿಯಾಗಿ (ಕಿಮೋ ಥೆರಪಿ-ಮುಕ್ತ) ಬಳಸಬಹುದು