Bhavana Belagere Interview: ಎರಡನೇ ಹೆಂಡತಿ ಮಗನಿಗೆ ಅನ್ಯಾಯ ಮಾಡ್ಬೇಡಿ ಎಂದು ವಿಲ್ ಬರೆಸಿದ್ರಾ ರವಿ ಬೆಳಗೆರೆ ಪತ್ನಿ?
ರವಿ ಬೆಳಗೆರೆಗೆ ಇಬ್ಬರೂ ಹೆಂಡತಿಯರು, ಅವರ ಮೊದಲ ಪತ್ನಿ ಲಲಿತಾ, ಎರಡನೇ ಪತ್ನಿ ಯಶೋಮತಿ. ಯಶೋಮತಿ 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಸಹೋದ್ಯೋಗಿ ಆಗಿದ್ದವರು. ಇವರ ಮೊದಲ ಪತ್ನಿಗೆ ಮೂರು ಮಕ್ಕಳು ಚೇತನಾ ಬೆಳಗೆರೆ, ಭಾವನಾ ಬೆಳಗೆರೆ, ಕರ್ಣ. ಇವರ ಎರಡನೇ ಪತ್ನಿಯ ಮಗ ಹಿಮವಂತ್. ಇದೀಗ ಅವರ ಪ್ರೀತಿಯ ಪುತ್ರಿ ಭಾವನಾ ಬೆಳಗೆರೆ(Bhavana Belagere) ಅಕ್ಷರ ಮಾಂತ್ರಿಕನ ಬಗ್ಗೆ ನಮಗೆ ನಿಮಗೆ ತಿಳಿಯದ ಎಷ್ಟೋ ವಿಷಯಗಳನ್ನು ಹಂಚಿಕೊಂಡಿದ್ದಾರೆ.


ಬೆಂಗಳೂರು: ರವಿ ಬೆಳಗೆರೆ(Ravi Belagere) ಪ್ರಖ್ಯಾತ ಪತ್ರಕರ್ತರು. 'ಹಾಯ್ ಬೆಂಗಳೂರು, ಓ ಮನಸೆ' ಮ್ಯಾಗಜೀನ್ ಸಂಪಾದಕರು ಅವರು. ಅವರ ಹೆಸರನ್ನು ಕರ್ನಾಟಕದಲ್ಲಿ ಕೇಳದಿರುವವರು ಇಲ್ಲವೇ ಇಲ್ಲ. ಬರವಣಿಗೆ ಮೂಲಕ ಪಾಪಿಗಳ ಎದೆಯಲ್ಲಿ ನಡುಕ ಹುಟ್ಟಿಸಿದವರು. ಎಷ್ಟೋ ಜನರ ಮುಖವಾಡವನ್ನು ಲೇಖನಿ ಮೂಲಕ ಹೊರತಂದ ಡೇರಿಂಗ್ ಜರ್ನಲಿಸ್ಟ್. ಬರವಣಿಗೆಯೊಂದರಿಂದಲೇ ಅನ್ನ ಮತ್ತು ಆತ್ಮ ಸಂತೋಷ ದುಡಿದುಕೊಳ್ಳಲು ತೀರ್ಮಾನಿಸಿದಂತೆ ಬದುಕುತ್ತಿದ್ದವರು ಪತ್ರಕರ್ತ ರವಿ ಬೆಳಗೆರೆಗೆ ಬರವಣಿಗೆ ಬಿಟ್ಟು ಬೇರೇನನ್ನೂ ಮಾಡಲು ತನಗೆ ಬಾರದು ಅಂತ ತೀರ್ಮಾನಿಸಿದ್ದರು. ಬಾಟಮ್ ಐಟಮ್, ಖಾಸ್ ಬಾತ್ ಅಂಕಣಗಳು ಅತ್ಯಂತ ಜನಪ್ರಿಯ. ಹಿಮಾಗ್ನಿ, ನೀನಾ ಪಾಕಿಸ್ತಾನ? ಡಿ ಕಂಪನಿ, ದಂಗೆಯ ದಿನಗಳು ಸೇರಿದಂತೆ ಅನೇಕ ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ. ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ್ದ ರವಿ ಬೆಳೆಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಇದೀಗ ಅವರ ಪ್ರೀತಿಯ ಪುತ್ರಿ ಭಾವನಾ ಬೆಳಗೆರೆ(Bhavana Belagere Interview) ಅಕ್ಷರ ಮಾಂತ್ರಿಕನ ಬಗ್ಗೆ ನಮಗೆ ನಿಮಗೆ ತಿಳಿಯದ ಎಷ್ಟೋ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಬೆಳಗೆರೆಗೆ ಇಬ್ಬರೂ ಹೆಂಡತಿಯರು, ಅವರ ಮೊದಲ ಪತ್ನಿ ಲಲಿತಾ, ಎರಡನೇ ಪತ್ನಿ ಯಶೋಮತಿ. ಯಶೋಮತಿ 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಸಹೋದ್ಯೋಗಿ ಆಗಿದ್ದವರು. ಇವರ ಮೊದಲ ಪತ್ನಿಗೆ ಮೂರು ಮಕ್ಕಳು ಚೇತನಾ ಬೆಳಗೆರೆ, ಭಾವನಾ ಬೆಳಗೆರೆ, ಕರ್ಣ. ಇವರ ಎರಡನೇ ಪತ್ನಿಯ ಮಗ ಹಿಮವಂತ್. ಭಾವನಾ ಬೆಳಗೆರೆ ಕೂಡ ತಂದೆಯ ಕೆಲಸಗಳಿಗೆ ಸಹಾಯ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಈ ಹಿಂದೆ ಭಾವನಾ ಬಿಗ್‌ಬಾಸ್ ಕನ್ನಡ ಸೀಸನ್‌ಗೆ ಎಂಟ್ರಿ ಕೊಟ್ಟಿದ್ದರು. ನಟ ಶ್ರೀನಗರ ಕಿಟ್ಟಿ ಅವರ ಪತ್ನಿ ಭಾವನಾ. ಚೇತನಾ ಬೆಳಗೆರೆ ಕೂಡ ಪತ್ರಕರ್ತೆ. ಇವರು ನಮ್ಮನ್ನು ಅಗಲಿ ಐದು ವರ್ಷ ಕಳೆದರೂ ಅವರ ನೆನಪು, ವರ್ಚಸ್ಸು, ಡೇರ್, ಬರಹದ ಶೈಲಿ ಇಂದಿಗೂ ನಮ್ಮನ್ನು ಕಾಡುತ್ತದೆ.
ಹೌದು, ನಮ್ಮದೇ ಆದ ವಿಶ್ವವಾಣಿ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಭಾವನಾ ಅವರು ಜೀವನ, ಸಾಧನೆ, ಏಳು-ಬೀಳುಗಳ ಹಾದಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ರವಿ ಬೆಳಗೆರೆ ತಾವು ಎರಡನೇ ಮದುವೆ ಆಗಿರುವ ವಿಚಾರವನ್ನು ಹಂಚಿಕೊಂಡ ದಿನದ ನೆನಪನ್ನು ಮೆಲಕು ಹಾಕಿದ್ದಾರೆ. ರವಿ ಬೆಳಗೆರೆ ತಾವು ಎರಡನೇ ಮದುವೆಯಾಗಿರುವ ವಿಷಯವನ್ನು ಮರೆಮಾಚದೆ ಅವರ ನಮ್ಮ ಬಳಿ ಹೇಳಿಕೊಂಡಿದ್ದರು. ನನ್ನ ತಮ್ಮ ಚಿಕ್ಕವನು ಅನ್ನುವ ಕಾರಣಕ್ಕೆ ಅವನನ್ನು ಹೊರಗೆ ಕಳುಹಿಸಿ, ಅಮ್ಮ,ನನ್ನ ಅಕ್ಕ ಹಾಗೂ ನನ್ನ ಮುಂದೆ ತಾವು ಎರಡನೇ ಮದುವೆಯಾಗಿರುವ ಬಗ್ಗೆ ಧೈರ್ಯದಿಂದ ಹೇಳಿಕೊಂಡಿದ್ದರು.
ಭಾವನಾ ಬೆಳಗೆರೆ ಸಂದರ್ಶನದ ವಿಡಿಯೊ ಇಲ್ಲಿದೆ:
ಇದನ್ನು ಕೇಳಿದ ತಕ್ಷಣ ನನಗೂ ಮತ್ತೆ ನಮ್ಮ ಅಕ್ಕನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಜೋರಾಗಿ ಅಪ್ಪ ಎಂದು ಕಿರುಚ್ಚಿದ್ದೆವು. ಅಪ್ಪನ ಮೇಲೆ ರೇಗಿದ್ದೆವು. ಆದ್ರೆ ನಮ್ಮ ಅಮ್ಮ ಮಾತ್ರ ಕಿಂಚಿತ್ತೂ ಕೋಪ ಮಾಡಿಕೊಳ್ಳಲಿಲ್ಲ. ಈ ವಿಷಯ ತಿಳಿದ ಮೇಲೆಯೂ ಬೆಳಗೆರೆ ಅವರೊಂದಿಗೆ ಅಮ್ಮ ಜಗಳ ಆಡಿರಲಿಲ್ಲ. ಕೋಪ ಮಾಡಿಕೊಂಡಿರಲಿಲ್ಲ. ಈ ವಿಷಯದ ಬಗ್ಗೆ ಅವರಿಗೆ ಬೇಜಾರು ಇತ್ತು. ಆದರೆ ಅದನ್ನು ವ್ಯಕ್ತ ಪಡಿಸಿರಲಿಲ್ಲ. ಬದಲಾಗಿ ನಿನ್ನ ನಂಬಿ ಬಂದಿರುವ ಆಕೆಯನ್ನು ಕೈ ಬಿಡಬೇಡಿ, ಅವಳ ಮಗನಿಗೆ ಮೋಸ ಮಾಡಬೇಡಿ ಎಂದಿದ್ದರು. ಆದ್ರೆ ಎಂದಿಗೂ ಅವರಿಬ್ಬರನ್ನು ನನ್ನ ಮುಂದೆ ತಂದು ನಿಲ್ಲಿಸಬೇಡಿ ಎಂದು ಕೇಳಿಕೊಂಡಿದ್ದರು ಎಂದು ಭಾವನಾ ಹೇಳಿದ್ದಾರೆ. ಇನ್ನೂ ನಮ್ಗೂ ಅಷ್ಟೇ ಅವರ ಮೇಲೆ ಬೇಸರ ಇದೇ ಹೊರತು, ದ್ವೇಷ ಇಲ್ಲ, ಒಟ್ಟಿಗೆ ಇದ್ದವರೇ ಹೀಗೆ ಮಾಡಿದ್ದರಲ್ಲ ಎಂಬ ಬೇಜಾರು ಬಿಟ್ಟು ಅವರಿಗೆ ಶಾಪ ಹಾಕುವುದನ್ನು ನಾವು ಮಾಡುವುದಿಲ್ಲ. ಹಿಮವಂತ ನನಗೆ ತಮ್ಮ ಅನುವುದಕ್ಕಿಂತ ಮಗ ಅನ್ನಬಹುದು. ನನ್ನ ಮಗಳಿಗೂ ಅವನಿಗೂ ಒಂದೇ ವರ್ಷ ವ್ಯತ್ಯಾಸ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ‘ಸುಮ್ನೆ ಎಲ್ಲೆಂದ್ರಲ್ಲಿ ತಿರುಗಾಡ್ಬೇಡ..’ – ಅಣ್ಣನಿಗೆ ಪುಟ್ಟ ತಂಗಿಯ ಭಾವನಾತ್ಮಕ ಪತ್ರ
ಅಲ್ಲದೇ ರವಿ ಬೆಳಗೆರೆ ಅವರಿಗೆ ಯಶೋಮತಿ ಜೊತೆ ಎರಡನೇ ಮದುವೆ ಆದರೂ ಮೊದಲನೇ ಹೆಂಡತಿ ಲಲಿತಾ ಅವರ ಮೇಲೆ ಪ್ರೀತಿ ಕಮ್ಮಿ ಆಗಿರಲಿಲ್ಲ ಅಂತೆ. ಒಂದು ದಿನವೂ ಲಲಿತಾ ಅವರ ಜೊತೆ ಜಗಳ ಮಾಡಿರಲ್ಲಿಲ್ಲ ಅಂತೆ. ಇನ್ನೂ ಸಾಯುವ ಮೊದಲು ರವಿ ಬೆಳೆಗೆರೆ ಅವರ ಎರಡನೆಯ ಹೆಂಡತಿ ಮಗ ಹಿಮಾವಂತ ಬೆಳೆಗೆರೆ ಜವಾಬ್ದಾರಿಯನ್ನು ಮೊದಲ ಹೆಂಡತಿಯ ಮೂರು ಮಕ್ಕಳಿಗೆ ವಹಿಸಿದರಂತೆ. ನನ್ನ ಅನುಭವಿಸಿದ್ದನ್ನು ಅವನು ಅನುಭವಿಸಬಾರದು, ಆತನಿಗೆ ತಂದೆಯ ಐಡೆಂಟಿಟಿ ಸಿಗಬೇಕು ಎಂದು ಹೇಳಿದರಂತೆ.
ಇಂದಿಗೂ ತಂದೆಯ ಮಾತನ್ನು ಕಡೆಗಣಿಸದೆ ರವಿ ಬೆಳಗೆರೆ ಮಕ್ಕಳು ಪಾಲಿಸುತ್ತಿದ್ದು, ಲಲಿತಾ ಅವರ ಕೊನೆಯ ಪುತ್ರ ಕರ್ಣ ಹಿಮವಂತ ಬೆಳೆಗೆರೆ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು, ಅವನಿಗೆ ಶಿಕ್ಷಣವನ್ನು ಇವರೇ ಕೊಡಿಸುತ್ತಿದ್ದಾರೆ. ಇನ್ನೂ ಬರವಣಿಗೆಯ ಹೊರತಾಗಿ ನಟ ಕೂಡ ಆಗಿದ್ದ ರವಿ ಬೆಳಗೆರೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರೂ. ಡೆಡ್ಲಿ ಸೋಮ, ಎಂದೂ ಮರೆಯದ ಹಾಡು ಕಾರ್ಯಕ್ರಮದ ನಿರೂಪಕರಾಗಿದ್ದರು . ಗಂಡ ಹೆಂಡತಿ, ಮಾದೇಶ ಸಿನಿಮಾಗಳಲ್ಲಿ, ಮುಕ್ತ..ಮುಕ್ತ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿರುವ ರವಿ ಬೆಳಗೆರೆ ಅಲ್ಲಿ ಬೆಳ್ ಬೆಳಿಗ್ಗೆ ಬೆಳಗೆರೆ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.