Bidar Accident: ಬೀದರ್‌ನಲ್ಲಿ ಬೈಕ್-ಕಾರು ನಡುವೆ ಭೀಕರ ಅಪಘಾತ; ಬಾಲಕ ಸೇರಿ ಮೂವರ ದುರ್ಮರಣ
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಮಡೋಳಪ್ಪ, ಸಿಪಿಐ ಅಮೋಲ್ ಕಾಳೆ ಹಾಗೂ ಪಿಎಸ್‌ಐ ಅಂಬರೀಶ್ ವಾಗೋಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
-
Prabhakara R
Nov 24, 2026 5:47 PM
ಬೀದರ್: ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಬಾಲಕ ಸೇರಿ ಮೂವರು ದುರ್ಮರಣ ಹೊಂದಿರುವ ಘಟನೆ (Bidar Accident) ಜಿಲ್ಲೆಯ ಹುಲಸೂರು ತಾಲೂಕಿನ ಮುಚಳಂಬ ಗ್ರಾಮದ ಸಮೀಪ ನಡೆದಿದೆ. ಬಸವಕಲ್ಯಾಣ ನಗರದ ಲಾಲ್ ತಲಾಬ್ ನಿವಾಸಿ ಬಾಬಾ (26), ಶಹಾಪುರ ಗಲ್ಲಿಯ ಸಮೀರ್ (22) ಹಾಗೂ ಶಾಹುಸೇನ್ ಗಲ್ಲಿಯ ರೆಹಾನ್ (12) ಮೃತರು.
ಮುಚಳಂಬ ಗ್ರಾಮದಲ್ಲಿ ನಡೆಯುತ್ತಿರುವ ಯಲ್ಲಾಲಿಂಗ ಮಠದ ಜಾತ್ರೆಯಲ್ಲಿ ಭಾಗವಹಿಸಿ, ಒಂದೇ ಬೈಕ್‌ನಲ್ಲಿ ಮೂವರು ಸೋಮವಾರ ತಡರಾತ್ರಿ ಬಸವಕಲ್ಯಾಣಕ್ಕೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.