ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಿಲ್ಲಿಸಿದ್ದ ಸ್ಕೂಟರ್ ಆಕ್ಸಿಲರೇಟರ್ ತಿರುಗಿಸಿದ ಬಾಲಕ; ಶಾಲೆಯ ಮುಂದೆ ಭೀಕರ ಅಪಘಾತದ ದೃಶ್ಯ ವೈರಲ್!

Viral Video: ಜೋಧ್ ಪುರದ ವ್ಯಕ್ತಿಯೊಬ್ಬರು ತಮ್ಮ ಮಕ್ಕಳನ್ನು ಶಾಲೆಗೆ ಬೀಡಲು ಸ್ಕೂಟರ್ ನಲ್ಲಿ ತೆರಳಿದ್ದುಈ ಸಂದರ್ಭದಲ್ಲಿ ಬಾಲಕನೊಬ್ಬ ಸ್ಕೂಟರ್‌ನ ಆಕ್ಸಿಲರೇಟರ್ ವೇಗಗೊಳಿಸಿದ್ದರಿಂದ ಆಯ ತಪ್ಪಿ ಬಿದ್ದಿರುವ ಘಟನೆ ನಡೆದಿದೆ. ಸದ್ಯ ಈ ಭಯಾನಕ ವಿಡಿಯೊ‌ ವೈರಲ್ ಆಗಿದೆ.

ಸ್ಕೂಟರ್ ಆಕ್ಸಿಲರೇಟರ್ ತಿರುಗಿಸಿದ ಬಾಲಕ

ಜೋಧ್‌ಪುರ,ಡಿ.12: ಮಕ್ಕಳ ಬಗ್ಗೆ ಪೋಷಕರು ಎಷ್ಟು ಜಾಗೃತಿ ವಹಿಸಿದರೂ ಕಡಿಮೆಯೇ.‌ ಅದರಲ್ಲೂ ಮಕ್ಕಳನ್ನು ಶಾಲೆಗೆ ಕಳುಹಿಸುವ ಸಂದರ್ಭದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ‌. ಜೋಧ್ ಪುರದ (Viral Video) ವ್ಯಕ್ತಿಯೊಬ್ಬರು ತಮ್ಮ ಮಕ್ಕಳನ್ನು ಶಾಲೆಗೆ ಬೀಡಲು ಸ್ಕೂಟರ್ ನಲ್ಲಿ ತೆರಳಿದ್ದು ಈ ಸಂದರ್ಭದಲ್ಲಿ ಬಾಲಕನೊಬ್ಬ ಸ್ಕೂಟರ್‌ನ ಆಕ್ಸಿಲರೇಟರ್ ವೇಗಗೊಳಿಸಿದ್ದರಿಂದ ಆಯತಪ್ಪಿ ಬಿದ್ದಿರುವ ಘಟನೆ ನಡೆದಿದೆ. ಸದ್ಯ ಈ ಭಯಾನಕ ವಿಡಿಯೊ‌ ವೈರಲ್ಆಗಿದೆ.

ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ವ್ಯಕ್ತಿಯೊಬ್ಬರ ಸಣ್ಣ ನಿರ್ಲಕ್ಷ್ಯ ದಿಂದಾಗಿ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದಿರುವ ಘಟನೆ ನಡೆದಿದೆ. ಜೋಧ್‌ಪುರದ ಅಕಾಡೆಮಿ ಶಾಲೆಯ ಮುಂದೆ ಈ ದೃಶ್ಯ ನಡೆದಿದ್ದು ವ್ಯಕ್ತಿಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಸ್ಕೂಟರ್‌ನಲ್ಲಿ ಶಾಲೆಗೆ ಬಿಡಲು ಬಂದಿದ್ದರು.‌ ಶಾಲೆಯ ಗೇಟ್ ಬಂದ ತಕ್ಷಣ, ಅವರು ಹಿರಿಯ ಮಗುವನ್ನು ಕೆಳಗೆ ಇಳಿಸಲು ಮುಂದಾಗುತ್ತಾರೆ. ಆದರೆ, ಈ ವೇಳೆ ಅವರು ವಾಹನದ ಎಂಜಿನ್ ಆಫ್ ಮಾಡಿರಲಿಲ್ಲ. ತಂದೆ ಹಿರಿಯ ಮಗುವನ್ನು ಇಳಿಸುತ್ತಿದ್ದಂತೆ ಸ್ಕೂಟರ್ ಮೇಲೆ ಕುಳಿತಿದ್ದ ಕಿರಿಯ ಮಗ ಆಕಸ್ಮಿಕವಾಗಿ ಸ್ಕೂಟರ್‌ನ ಆಕ್ಸಿಲರೇಟರ್ ಅನ್ನು ತಿರುಗಿಸಿದೆ.

ವಿಡಿಯೋ ನೋಡಿ:



ವಿಡಿಯೊದಲ್ಲಿ ಕಿರಿಯ ಮಗು ಆಕಸ್ಮಿಕವಾಗಿ ಆಕ್ಸಿಲರೇಟರ್ ಅನ್ನು ತಿರುಗಿಸುವುದನ್ನು ಕಾಣ ಬಹುದು. ಕೆಲವೇ ಸೆಕೆಂಡುಗಳಲ್ಲಿ, ಸ್ಕೂಟಿ ಮುಂದಕ್ಕೆ ಚಲಿಸುತ್ತದೆ, ಎಂಜಿನ್ ಆನ್ ನಲ್ಲಿ ಇದ್ದ ಕಾರಣ, ಸ್ಕೂಟರ್ ವೇಗವಾಗಿ ಮುಂದಕ್ಕೆ ಹೋಗಿದೆ. ಇದರಿಂದ ಸ್ಕೂಟರ್ ಹಿಡಿದಿದ್ದ ತಂದೆ ಏನು ಮಾಡಲು ತೋಚದೆ ‌ ಆಯತಪ್ಪಿ ಬಿದ್ದಿದ್ದಾರೆ. ಮಕ್ಕಳೂ ಸಹ ಅವರ ಜೊತೆ ಕೆಳಕ್ಕೆ ಬಿದ್ದಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ಶಾಲೆಯ ಸಿಬ್ಬಂದಿ ತಕ್ಷಣವೇ ಓಡಿ ಬಂದು ಸಹಾಯ ಮಾಡಿದ್ದಾರೆ.

ನನ್ನ ಸಂಬಳ ನನಗೆ ಸಾಕು; ಸರ್ಕಾರಿ ಕಚೇರಿ ಎದುರಲ್ಲಿ "ಲಂಚ ಬೇಡ" ಬೋರ್ಡ್‌ ಹಾಕಿದ ದಕ್ಷ ಅಧಿಕಾರಿ

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, "ಇದಕ್ಕಾಗಿಯೇ ನೀವು ಮಗುವನ್ನು ಸ್ಕೂಟಿಯಲ್ಲಿ ಐದು ಸೆಕೆಂಡುಗಳ ಕಾಲವೂ ಒಂಟಿಯಾಗಿ ಬಿಡಬಾರದು" ಎಂದು ಬರೆದಿದ್ದಾರೆ. ಮತ್ತೊಬ್ಬರು ಇದು ಇನ್ನೂ ಕೆಟ್ಟದಾಗಿ ಕೊನೆಗೊಳ್ಳಬಹುದಿತ್ತು ಪುಣ್ಯ ಯಾವುದೆ ಅಪಾಯ ಆಗಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.‌