ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Viral Video: ಪಾತ್ರೆಗೆ ತಲೆ ಸಿಲುಕಿಸಿಕೊಂಡ ನಾಯಿಯ ಅವಾಂತರ: ವಿಡಿಯೊ ಫುಲ್ ವೈರಲ್!

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಾಯಿಯ ವಿಡಿಯೊವೊಂದು ಎಲ್ಲರನ್ನು ಭಯಬೀತರನ್ನಾಗಿ ಮಾಡಿದೆ. ಪಾತ್ರೆಯೊಂದಕ್ಕೆ ತಲೆ ಸಿಕ್ಕಿಹಾಕಿಕೊಂಡ ನಾಯಿಯೊಂದು ಭಯದಿಂದ ದಿಕ್ಕಾಪಾಲಾಗಿ ಓಡಿ ಅವಾಂತರ ಸೃಷಿ ಮಾಡಿರುವ ದೃಶ್ಯ ಈ ವಿಡಿಯೋದಲ್ಲಿದೆ.ಅಡ್ಡ ಬಂದ ದೊಡ್ಡ ಗಾಜಿನ ಬಾಗಿಲನ್ನು ನಾಯಿ ಜೋರಾಗಿ ಗುದ್ದಿದಾಗ ಅದು ಪುಡಿಪುಡಿಯಾಗುತ್ತದೆ.

ಪಾತ್ರೆಯಲ್ಲಿ ತಲೆ ಸಿಲುಕಿಕೊಂಡು ದಿಕ್ಕು ಪಾಲಾಗಿ ಓಡಿದ ನಾಯಿ: ವಿಡಿಯೊ ನೋಡಿ

ಪಾತ್ರೆಗೆ ತಲೆ ಸಿಲುಕಿಸಿಕೊಂಡ ನಾಯಿಯ ಅವಾಂತರ -

Profile
Pushpa Kumari Jan 11, 2026 4:37 PM

ನವದೆಹಲಿ,ಡಿ.11: ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೊ ಗಳು ವೈರಲ್ ಆಗುತ್ತವೆ. ಮನುಷ್ಯರೊಂದಿಗೆ ಅವುಗಳ ಅನ್ಯೋನ್ಯತೆ ತೋರಿಸುವ ದೃಶ್ಯ, ಪ್ರಾಣಿಗಳ ಕುಚೇಷ್ಟೆ ಮಾಡುವ ವಿಡಿಯೊ, ಪ್ರಾಣಿಗಳ ‌ನಡುವಿನ ರೋಚಕ ಕ್ಷಣಗಳು ಹೀಗೆ ಹಲವು ವಿಡಿಯೊಗಳು ಗಮನ ಸೆಳೆಯುತ್ತವೆ. ಅಂತೆಯೇ ‌ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಾಯಿಯ ವಿಡಿಯೊವೊಂದು (Viral Video) ಎಲ್ಲರನ್ನು ಭಯಬೀತರನ್ನಾಗಿ ಮಾಡಿದೆ. ಪಾತ್ರೆಯೊಂದಕ್ಕೆ ತಲೆ ಸಿಕ್ಕಿ ಹಾಕಿಕೊಂಡ ನಾಯಿಯೊಂದು ಭಯದಿಂದ ದಿಕ್ಕಾಪಾಲಾಗಿ ಓಡಿ ಅವಾಂತರ ಸೃಷಿ ಮಾಡಿರುವ ದೃಶ್ಯ ಈ ವಿಡಿಯೋದಲ್ಲಿದೆ.

ನಾಯಿಯ ತಲೆಯೊಂದು ಪಾತ್ರೆಯೊಳಗೆ ಸಿಲುಕಿಕೊಂಡಿದ್ದು ನಂತರ ಅದು ದಿಕ್ಕುಪಲಾಗಿ ಓಡಿದೆ. ವೈರಲ್ ಕ್ಲಿಪ್‌ನಲ್ಲಿ ನಾಯಿಯ ತಲೆ ಪಾತ್ರೆಯೊಳಗೆ ಸಿಲುಕಿಕೊಂಡ ನಂತರ ಹುಚ್ಚುಚ್ಚಾಗಿ ಓಡುತ್ತಿರುವುದನ್ನು ತೋರಿಸುತ್ತದೆ. ಅದು ಬಿಡಿಸಿಕೊಳ್ಳಲು ಗಾಬರಿಯಿಂದ ವೇಗವಾಗಿ ಓಡಲು ಶುರು ಮಾಡುತ್ತದೆ. ‌

ವಿಡಿಯೋ ನೋಡಿ:



ತೊಂದರೆಗೀಡಾದ ನಾಯಿ ಅನಿಯಂತ್ರಿತವಾಗಿ ಓಡುವುದನ್ನು ವಿಡಿಯೊದಲ್ಲಿ ಕಾಣಬಹುದು, ಪಾತ್ರೆಯಿಂದ ಆವೃತವಾದ ತಲೆಯನ್ನು ಅದರ ಹಾದಿಯಲ್ಲಿರುವ ಎಲ್ಲದಕ್ಕೂ ಡಿಕ್ಕಿ ಹೊಡೆಯುವ ದೃಶ್ಯ ನೋಡಬಹುದು. ಅಡ್ಡ ಬಂದ ದೊಡ್ಡ ಗಾಜಿನ ಬಾಗಿಲನ್ನು ನಾಯಿ ಜೋರಾಗಿ ಗುದ್ದಿದಾಗ ಅದು ಪುಡಿಪುಡಿಯಾಗುತ್ತದೆ. ಅಷ್ಟಕ್ಕೇ ನಿಲ್ಲದೆ, ಮುಂದೆ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಾಗ ಆ ಬೈಕ್ ನೆಲಕ್ಕೆ ಉರುಳಿ ಬೀಳುತ್ತದೆ.

Viral Video: ಬೆಂಗಳೂರಿನ ಹೆವೀ ಟ್ರಾಫಿಕ್ ನಡುವೆಯೇ ಹೆಲ್ಮೆಟ್‌ನಿಂದ ಹೊಡೆದಾಡಿದ ಬೈಕ್ ಸವಾರರು: ವಿಡಿಯೋ ವೈರಲ್

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ನಾಯಿಗೆ ‘ಡೋಗೇಶ್ ಭಾಯಿ’ ಎಂದು ಹೆಸರಿಟ್ಟಿದ್ದು 5ಜೀ ಹೆಲ್ಮೆಟ್ ಸಿಕ್ಕಿದೆ, ಇನ್ನು ಇವನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಬರೆದು ಕೊಂಡಿದ್ದಾರೆ. ಈ ವಿಡಿಯೋ ನೋಡಲು ನೈಜವಾಗಿ ಕಂಡರೂ ಅನೇಕರು ಇದು ಎಐ ಮೂಲಕ ಸೃಷ್ಟಿಸಿದ ವಿಡಿಯೋ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.