Gundlupet News: ವೈದ್ಯರ ಎಡವಟ್ಟು; ಕಿವಿ ಚುಚ್ಚಿಸುವ ವೇಳೆ 6 ತಿಂಗಳ ಮಗು ಸಾವು
Gundlupet News: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿದೆ. ಕಿವಿಗಳಿಗೆ ಅನಸ್ತೇಶಿಯಾ ಕೊಟ್ಟ ನಂತರ ಮಗು ಮೃತಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ.
ಚಾಮರಾಜನಗರ: ಕಿವಿ ಚುಚ್ಚಿಸಲು ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ 6 ತಿಂಗಳ ಮಗು ಮೃತಪಟ್ಟಿರುವುದು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಹಂಗಳ ಗ್ರಾಮದ ಆನಂದ್ ಮತ್ತು ಶುಭಾ ದಂಪತಿಯ 6 ತಿಂಗಳ ಗಂಡು ಶಿಶು ಮೃತಪಟ್ಟಿದೆ. ಶುಭಾ ಬೊಮ್ಮಲಾಪುರ ಸಮೀಪದ ಶೆಟ್ಟಹಳ್ಳಿ ಗ್ರಾಮದರಾಗಿದ್ದು, ಬಾಣಂತನಕ್ಕೆ ತವರಿಗೆ ಬಂದಿದ್ದರು. ಮಗುವಿಗೆ 6 ತಿಂಗಳಾದ ಹಿನ್ನೆಲೆ ಕಿವಿ ಚುಚ್ಚಿಸಲು ಮುಂದಾಗಿದ್ದೆವು. ಈ ವೇಳೆ ಆಸ್ಪತ್ರೆಗೆ ಕರೆತಂದಿದ್ದ ವೇಳೆ ಮಗುವಿನ ಎರಡು ಕಿವಿಗಳಿಗೆ ಅನಸ್ತೇಶಿಯಾ ಕೊಟ್ಟಿದ್ದು, ಚುಚ್ಚುಮದ್ದು ನೀಡಿದ ಸ್ವಲ್ಪಹೊತ್ತಿಗೆ ಬಾಯಲ್ಲಿ ನೊರೆ ಬಂದು ಮಗು ಅಸುನೀಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಈ ಬಗ್ಗೆ ಟಿಎಚ್ಒ ಡಾ. ಅಲೀಂ ಪಾಷಾ ಪ್ರತಿಕ್ರಿಯಿಸಿ, 'ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ವೈದ್ಯರ ನಿರ್ಲಕ್ಷ್ಯ ದೃಢಪಟ್ಟರೆ ಸೂಕ್ತ ಕ್ರಮವನ್ನು ಉನ್ನತಾಧಿಕಾರಿಗಳು ಕೈಗೊಳ್ಳುತ್ತಾರೆ. ಮಗುವಿನ ಸಾವಿಗೆ ನ್ಯಾಯ ಸಿಗಬೇಕು' ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Cyber Crime: ಆನ್‌ಲೈನ್ ಟ್ರೇಡಿಂಗ್ ನಂಬಿ 98 ಲಕ್ಷ ಕಳೆದುಕೊಂಡ ನಿವೃತ್ತ ವೈದ್ಯ!
ರೈಲಿಗೆ ಸಿಲುಕಿ ಯುವಕ ದುರ್ಮರಣ; ತುಂಡು ತುಂಡಾದ ದೇಹ!
ತುಮಕೂರು: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ, ರೈಲಿನಡಿ ಸಿಲುಕಿ ಯುವಕ ದುರ್ಮರಣ ಹೊಂದಿದ ಘಟನೆ ನಗರದ (Tumkur News) ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 4 ರಲ್ಲಿ ಘಟನೆ ಸಂಭವಿಸಿದೆ. ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಗ್ರಾಮದ ಛಾಯಾಂಕ್ (24) ಮೃತ ಯುವಕ.
ಬೆಂಗಳೂರಿನಿಂದ ತುಮಕೂರಿಗೆ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರುತ್ತಿದ್ದ ಯುವಕ ಆಯತಪ್ಪಿ ರೈಲಿನಡಿ ಬಿದ್ದಿದ್ದ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ. ಈತ ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ರೈಲಿಗೆ ಸಿಲುಕಿದ ರಭಸದಲ್ಲಿ ಯುವಕನ ದೇಹ ತುಂಡು ತುಂಡಾಗಿತ್ತು. ತುಮಕೂರು ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.