Self Harming: ಬೋಳು ತಲೆಯವ ಎಂದು ಹೆಂಡ್ತಿ ಅಪಹಾಸ್ಯ; ಮನನೊಂದು ಪತಿ ಆತ್ಮಹತ್ಯೆ
Self Harming: ಚಾಮರಾಜನಗರ ತಾಲೂಕಿನ ಗುಡಿಗಾಲದಲ್ಲಿ ಘಟನೆ ನಡೆದಿದೆ. ನಿನಗೆ ತಲೆ ಕೂದಲು ಉದುರಿದೆ, ಹೊರಗೆ ಹೋದರೆ ನನಗೆ ನಾಚಿಕೆ ಆಗುತ್ತದೆ. ಎಲ್ಲರೂ ಅಪಹಾಸ್ಯ ಮಾಡುತ್ತಾರೆ ಎಂದು ಪತ್ನಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.


ಚಾಮರಾಜನಗರ: ಇತ್ತೀಚೆಗೆ ಪತ್ನಿಯರ ಕಿರುಕುಳಕ್ಕೆ ಗಂಡಂದಿರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ತಲೆಯಲ್ಲಿ ಕೂದಲಿಲ್ಲ, ಬೋಳು ತಲೆಯವ ಎಂದು ಪತ್ನಿ ಅಪಹಾಸ್ಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಗುಡಿಗಾಲದಲ್ಲಿ ಘಟನೆ ನಡೆದಿದೆ. ಪರಶಿವಮೂರ್ತಿ (30) ಆತ್ಮಹತ್ಯೆ ಮಾಡಿಕೊಂಡವರು. ಹೊರಗೆ ಹೋದರೆ ನನಗೆ ನಾಚಿಕೆ ಆಗುತ್ತದೆ, ಎಲ್ಲರೂ ಅಪಹಾಸ್ಯ ಮಾಡುತ್ತಾರೆ, ನನ್ನ ಗಂಡ ಅಂತ ಹೇಳೋಕೆ ಮುಜುಗರ ಆಗುತ್ತದೆ ಎಂದು ಪತ್ನಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಎರಡು ವರ್ಷದ ಹಿಂದೆ ಕಳಕಿಪುರದ ಮಮತಾ ಜತೆಗೆ ಯುವಕನಿಗೆ ಮದುವೆ ಆಗಿತ್ತು. ವಿವಾಹದ ಬಳಿಕ ಪರಶಿವಮೂರ್ತಿಗೆ ತಲೆ ಕೂದಲು ಉದುರಿತ್ತು. ತಲೆಯಲ್ಲಿ ಕೂದಲಿಲ್ಲ, ಬೋಳು ತಲೆಯವ ಎಂದು ಪತ್ನಿ ಅಪಹಾಸ್ಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪರಶಿವಮೂರ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೂ ಮೊದಲು ಪತ್ನಿ ಮಮತಾ, ಪತಿ ವಿರುದ್ಧ ವರದಕ್ಷಿಣೆ ಕಿರುಕುಳದ ಕೇಸ್ ಹಾಕಿದ್ದಳು. ಈ ಪ್ರಕರಣದಲ್ಲಿ ಪರಶಿವಮೂರ್ತಿ ಒಮ್ಮೆ ಜೈಲಿಗೆ ಹೋಗಿದ್ದ. ಸುಳ್ಳು ಕೇಸ್ ದಾಖಲಿಸಿ ಪತಿಯನ್ನು ಜೈಲಿಗೆ ಕಳಿಸಿದ್ದಲ್ಲದೇ ಈ ವಿಚಾರವನ್ನು ವಾಟ್ಸ್ ಸ್ಟೇಟಸ್ ಹಾಕುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಪದೇಪದೇ ಜಗಳ ಆಗುತ್ತಿತ್ತು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ | Drug mafia: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆ; 75 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ
ಹಳೇ ವೈಷಮ್ಯ; ದಲಿತ ಮುಖಂಡ ಸೇರಿ ಇಬ್ಬರ ಬರ್ಬರ ಕೊಲೆ
ಯಾದಗಿರಿ: ಹಳೇ ವೈಷಮ್ಯದ ಹಿನ್ನೆಲೆ ದಲಿತ ಮುಖಂಡ ಸೇರಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ (Murder Case) ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಾಪುರದ ಬಳಿ ನಡೆದಿದೆ. ದಲಿತ ಮುಖಂಡ ಮಾಪ್ಪಣ್ಣ ಮದ್ರಕ್ಕಿ(48) ಅಲಿಸಾಬ್ (50) ಹತ್ಯೆಯಾದವರು. ಭಾನುವಾರ ಬೆಳಗ್ಗೆ ಘಟನೆ ನಡೆದಿದ್ದು, ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ದಲಿತ ಮುಖಂಡ ಮಾಪ್ಪಣ್ಣ ಮತ್ತು ಆತನ ಜತೆಗಿದ್ದ ಅಲಿಸಾಬ್‌ನ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ತರಕಾರಿ ತರಲು ಊರಿನಿಂದ ಬೈಕ್‌ನಲ್ಲಿ ಹೊರಟ್ಟಿದ್ದ ಇಬ್ಬರನ್ನು ಸಾದ್ಯಾಪುರ ಸಮೀಪದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Assault Case: ಬೆಂಗಳೂರಲ್ಲಿ ಅಮಾನವೀಯ ಘಟನೆ; ವ್ಯಕ್ತಿಗೆ ಸನ್ಮಾನ ಮಾಡಿ, ಮನಸೋ ಇಚ್ಛೆ ಹಲ್ಲೆ
ಸ್ಥಳಕ್ಕೆ ಭೀಮರಾಯನ ಗುಡಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಮೃತ ದೇಹಗಳನ್ನು ಶಹಾಪುರ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ . ಮೃತರ ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ.