ಪಿ.ಟಿ. ಉಷಾ ಪತಿ ಶ್ರೀನಿವಾಸನ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
PT Usha's husband V Srinivasan dies: ಪ್ರಧಾನಿ ನರೇಂದ್ರ ಮೋದಿ ಅವರು ಐಒಎ ಅಧ್ಯಕ್ಷೆ ಪಿಟಿ ಉಷಾ ಅವರಿಗೆ ತಕ್ಷಣ ಕರೆ ಮಾಡಿ ಅವರ ಪತಿಯ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದರು. ಮಾಜಿ ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದ ಶ್ರೀನಿವಾಸನ್, ಉಷಾ ಅವರ ಅತ್ಯುತ್ತಮ ಕ್ರೀಡಾ ಜೀವನದುದ್ದಕ್ಕೂ ಅವರಿಗೆ ಬೆಂಬಲವಾಗಿ ನಿಂತಿದ್ದರು.
PT Usha's husband V Srinivasan -
ನವದೆಹಲಿ, ಜ.30: ಭಾರತದ ದಿಗ್ಗಜ ಅಥ್ಲೀಟ್, ರಾಜ್ಯಸಭಾ ಸಂಸದೆ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ ಅವರು ಶುಕ್ರವಾರ (ಜನವರಿ 30) ಮುಂಜಾನೆ 67 ನೇ ವಯಸ್ಸಿನಲ್ಲಿ ನಿಧನರಾದರು. ಶ್ರೀನಿವಾಸನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಜನವರಿ 30 ರ ಬೆಳಗಿನ ಜಾವ ವಿ. ಶ್ರೀನಿವಾಸನ್ ಅವರು ಕುಟುಂಬದ ನಿವಾಸದಲ್ಲಿ ಅನಿರೀಕ್ಷಿತವಾಗಿ ಕುಸಿದು ಬಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ತಕ್ಷಣದ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕುಟುಂಬ ಮೂಲಗಳು ದೃಢಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಐಒಎ ಅಧ್ಯಕ್ಷೆ ಪಿಟಿ ಉಷಾ ಅವರಿಗೆ ತಕ್ಷಣ ಕರೆ ಮಾಡಿ ಅವರ ಪತಿಯ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದರು. ಮಾಜಿ ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದ ಶ್ರೀನಿವಾಸನ್, ಉಷಾ ಅವರ ಅತ್ಯುತ್ತಮ ಕ್ರೀಡಾ ಜೀವನದುದ್ದಕ್ಕೂ ಅವರಿಗೆ ಬೆಂಬಲವಾಗಿ ನಿಂತಿದ್ದರು.
PM Modi spoke to Rajya Sabha MP & President of the Indian Olympic Association, PT Usha, and expressed his condolences on the passing away of her husband, V Srinivasan.
— ANI (@ANI) January 30, 2026
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಪಿ.ಟಿ. ಉಷಾ, 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನ 400 ಮೀ. ಹರ್ಡಲ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ಎರಡು ದಶಕಗಳ ಕಾಲ ಭಾರತ ಮತ್ತು ಏಷ್ಯಾ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ್ದ ಅವರು 2000ನೇ ಇಸ್ವಿಯಲ್ಲಿ ಹಲವು ಪದಕಗಳೊಂದಿಗೆ ನಿವೃತ್ತರಾಗಿದ್ದರು.
‘ಪಯ್ಯೋಳಿ ಎಕ್ಸ್‌ಪ್ರೆಸ್‘ ಖ್ಯಾತಿಯ ಕೇರಳದ ಉಷಾ ಅವರನ್ನು ಭಾರತೀಯ ಜನತಾ ಪಕ್ಷವು 2022ರಲ್ಲಿ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿತ್ತು.