ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Celebration of Yediyurappa: ಪಕ್ಷ ಕಟ್ಟಿದ ಧೀಮಂತ ನಾಯಕ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ 10 ಸಾವಿರ ಮಂದಿ : ಸಿ.ಮುನಿರಾಜು

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 50 ವರ್ಷಗಳ ಕಾಲ ರಾಜ್ಯವನ್ನು ಸುತ್ತಿ ದ್ದಾರೆ. ರೈತರ ಪರವಾಗಿ ಹೋರಾಡಿ, ದೀನದಲಿತರಿಗೆ ನ್ಯಾಯ ಒದಗಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ದವರು. ಅವರ ಜೀವನ ಮತ್ತು ಸಾಧನೆ ಸಮಾಜಸೇವೆಯನ್ನು ಜನತೆಯ ಮುಂದಿಡುವ ಸಲುವಾಗಿ ಅಭಿಮಾನೋತ್ಸವ ಆಚರಿಸಲು ತೀರ್ಮಾನಿಸಿದ್ದೇವೆ

ಸುದ್ದಿಗೋಷ್ಟಿಯಲ್ಲಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಮಾತನಾಡಿದರು.

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಶೂನ್ಯದಿಂದ ಪಕ್ಷ ಕಟ್ಟಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕೇಸರಿ ಧ್ವಜ ಹಾರಿಸಿದ ಕೀರ್ತಿಗೆ ಪಾತ್ರವಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Former Chief Minister B.S.Yediyurappa) ಅವರ ಚಿತ್ರದುರ್ಗದ ಅಭಿಮಾನೋತ್ಸವಕ್ಕೆ ಜಿಲ್ಲೆ ಯಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ ಯಾಗುವ ಮೂಲಕ ನೆಚ್ಚಿನ ನಾಯಕನಿಗೆ ಅಭಿಮಾನ ತೋರುವರು ಎಂದು ಬಿಜೆಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 50 ವರ್ಷಗಳ ಕಾಲ ರಾಜ್ಯವನ್ನು ಸುತ್ತಿ ದ್ದಾರೆ. ರೈತರ ಪರವಾಗಿ ಹೋರಾಡಿ, ದೀನದಲಿತರಿಗೆ ನ್ಯಾಯ ಒದಗಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ಅವರ ಜೀವನ ಮತ್ತು ಸಾಧನೆ ಸಮಾಜಸೇವೆಯನ್ನು ಜನತೆಯ ಮುಂದಿಡುವ ಸಲುವಾಗಿ ಅಭಿಮಾನೋತ್ಸವ ಆಚರಿಸಲು ತೀರ್ಮಾನಿಸಿದ್ದೇವೆ ಎಂದರು.

10 ಲಕ್ಷ ಅಭಿಮಾನಿಗಳು ಭಾಗಿ !!
ಮೇ.9 ರಂದು ಈ ಅಭಿಮಾನೋತ್ಸವವು ಚಿತ್ರದುರ್ಗದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾ ಟನೆಯನ್ನು ದೇಶದ ಗೃಹಮಂತ್ರಿ ಅಮಿತ್ ಶಾ ನೆರವೇರಿಸಿ ಯಡಿಯೂರಪ್ಪ ಅವರನ್ನು ಸನ್ಮಾನಿಸ ಲಿದ್ದಾರೆ. ಈ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಭಾಗವಹಿ ಸುವ ನಿರೀಕ್ಷೆ ಇದೆ.

ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲು ತಂಡಗಳನ್ನು ರಚಿಸಲಾಗಿದೆ. ನಾಡಿನ ಎಲ್ಲಾ ಮಠಾ ಧೀಶರು, ಮಾಜಿ ಮುಖ್ಯಮಂತ್ರಿಗಳು, ಸಚಿವರು ಮತ್ತು ಗಣ್ಯಮಾನ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಬಲ್ಲ ಸಾಹಿತಿಗಳು, ಒಡನಾಡಿಗಳು, ಕಲಾವಿದರು ಸೇರಿ ಸಮಾಜದ ಎಲ್ಲ ರಂಗದವರು ಭಾಗವಹಿಸುತ್ತಾರೆ. ಅಲ್ಲದೇ ಸಾರ್ವಜನಿ ಕರು, ರೈತಾಪಿ ವರ್ಗದವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: Chinthamani News: ಶಿಕ್ಷಕರ ಸಂಘದ ಚುನಾವಣೆ: ಅಶೋಕ್ ಕುಮಾರ್ ಬಣದ ಅಭ್ಯರ್ಥಿಗಳ ದಿಗ್ವಿಜಯ

ಇತಿಹಾಸ!!
ಕರ್ನಾಟಕದಲ್ಲಿ ಬಿಜೆಪಿ ಅಂದ್ರೆ ಯಡಿಯೂರಪ್ಪ, ಯಡಿಯೂರಪ್ಪ ಅಂದ್ರೆ ಬಿಜೆಪಿ. ಶೂನ್ಯದಿಂದ ಪಕ್ಷ ಕಟ್ಟಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕೇಸರಿ ಧ್ವಜ ಹಾರಿಸಿದ ಕೀರ್ತಿ ನಮ್ಮ ಯಡಿಯೂ ರಪ್ಪ ಅವರಿಗೆ ಸಲ್ಲಬೇಕು. 2008ರಲ್ಲಿ ಪೂರ್ಣ ಬಹುಮತದ ಸರ್ಕಾರ ತಂದು ಇತಿಹಾಸ ಬರೆದರು.

ಜನಪರ ಮುಖ್ಯಮಂತ್ರಿ!!

ಅವರು ಸಿ.ಎಂ ಕುರ್ಚಿ ಮೇಲೆ ಕೂತ ಮೊದಲ ದಿನವೇ ಹೇಳಿದ್ದು- "ನಾನು ರೈತನ ಮಗ, ರೈತರಿಗಾಗಿ ದುಡಿಯುತ್ತೇನೆ". ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ತೋರಿಸಿದರು. ೦% ಬಡ್ಡಿಯಲ್ಲಿ ಸಾಲ, ಉಚಿತ ವಿದ್ಯುತ್ ಕೊಟ್ಟು ರೈತನ ಕಣ್ಣೀರು ಒರೆಸಿದರು. ಅದಕ್ಕೇ ಇವತ್ತು ಹಳ್ಳಿ ಹಳ್ಳಿಯಲ್ಲೂ "ನಮ್ಮ ರೈತ ನಾಯಕ" ಅಂತಾರೆ. ಭಾಗ್ಯಲಕ್ಷ್ಮಿ ಯೋಜನೆ ಮೂಲಕ ಹೆಣ್ಣು ಮಕ್ಕಳ ಭವಿಷ್ಯ ಭದ್ರ ಮಾಡಿದರು. ಸಂಧ್ಯಾ ಸುರಕ್ಷಾ ಮೂಲಕ ವೃದ್ಧರಿಗೆ ಆಸರೆಯಾದರು. ಅಟಲ್‌ಜಿ ಜನಸ್ನೇಹಿ ಕೇಂದ್ರ ತೆರೆದು ಸರ್ಕಾರ ಜನರ ಮನೆ ಬಾಗಿಲಿಗೆ ಬರುವಂತೆ ಮಾಡಿದರು. ಬೆಂಗಳೂರು ಮೆಟ್ರೋಗೆ ಚಾಲನೆ ಕೊಟ್ಟು ರಾಜ್ಯದ ಮುಖವನ್ನೇ ಬದಲಿಸಿದರು ಎಂದರು.

8c.muniraju

100 ಬಸ್ 10 ಸಾವಿರ ಮಂದಿ!!
ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ ಯಡಿಯೂರಪ್ಪ ಅವರ ಅಭಿಮಾನೋತ್ಸವ ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ 8 ತಾಲೂಕು 5 ವಿಧಾನಸಭಾ ಕ್ಷೇತ್ರಗಳಿಂದ 10 ಸಾವಿರ ಮಂದಿ ಭಾಗಿಯಾಗುವ ಹಾಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. 100ಕ್ಕೂ ಹೆಚ್ಚು ಬಸ್‌ಗಳು ಅಷ್ಟೇ ಸಂಖ್ಯೆ ಯ ಕಾರುಗಳಲ್ಲಿ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಹೋಗುತ್ತಿದ್ದೇವೆ. ಜಿಲ್ಲೆಯ ಎಲ್ಲಾ ಯಡಿಯೂರಪ್ಪ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಬಸ್ ವ್ಯವಸ್ಥೆಯಿದೆ!!
ಬಿಜೆಪಿ ಮುಖಂಡ ಚಿಂತಾಮಣಿಯ ವೇಣುಗೋಪಾಲ್ ಮಾತನಾಡಿ, ಯಡಿಯೂರಪ್ಪ ಅವರು ಜನನಾಯಕರು. ಪುರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ 1983 ರಿಂದ ಶಾಸಕರಾಗಿ, ಉಪಮುಖ್ಯಮಂತ್ರಿ ಯಾಗಿ, ನಾಲ್ಕು ಬಾರಿ ಮುಖ್ಯ ಮಂತ್ರಿಗಳಾಗಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರು. ಜನತಾ ದಳದಿಂದ ಕಾಂಗ್ರೆಸ್ಸಿಗೆ ಬಂದ ಸಿದ್ದರಾಮಯ್ಯನವರು ಬೇರೆಯವರ ಹೆಗಲ ಮೇಲೆ ಕುಳಿತು ಕಾರ್ಯಕ್ರಮ ಮಾಡಿಸಿಕೊಂಡಿದ್ದಾರೆ. ನಮ್ಮದು ಹಾಗಲ್ಲ, ಯಡಿಯೂರಪ್ಪನವರೇ ಕಟ್ಟಿ ಬೆಳೆಸಿದ ಪಕ್ಷ ಇದು. ಜನರ ಉತ್ಸವ ನಮ್ಮದು. ಕಾರ್ಯಕ್ರಮಕ್ಕೆ ಬರಲಿಚ್ಚಿಸುವವರು ಯಾರೇ ಆಗಲಿ. ಪಕ್ಷದ ಮುಖಂಡರುಗಳನ್ನು ಸಂಪರ್ಕಿಸಿದಲ್ಲಿ ವಾಹನ ವ್ಯವಸ್ಥೆ ಮಾಡಲಾಗುವುದು  ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್.ಮುರಳೀಧರ್, ಮಧು ಸೂರ್ಯನಾರಾಯಣರೆಡ್ಡಿ, ಮಾಧ್ಯಮ ವಕ್ತಾರ ಮಧುಚಂದ್ರ, ಕಾರ್ಯದರ್ಶಿ ಆರ್.ಹೆಚ್.ಎನ್.ಅಶೋಕ್ ಕುಮಾರ್, ಮುಖಂಡರಾದ ಸೀಕಲ್ ಆನಂದಗೌಡ, ಲಕ್ಷ್ಮೀ ನಾರಾಯಣಗುಪ್ತ, ಎ.ವಿ.ಬೈರೇಗೌಡ, ಸುಮಿತ್ರಮ್ಮ,ಪ್ರಭಾಕರರೆಡ್ಡಿ, ದೇವಸ್ಥಾನದ ಹೊಸಹಳ್ಳಿ ರಾಮಣ್ಣ,ತೇಜೆಂದ್ರಪಾಪು, ಕೋಡಿರ್ಲಪ್ಪ, ನರಸಿಂಹರಾಜು, ವೇಣುಮಾಧವ್, ಶಶಿಧರ್, ನರಸಪ್ಪ, ನಂದಿ ಮುನಿಸ್ವಾಮಿ ಮತ್ತಿತರರು ಇದ್ದರು.