ಚಿಕ್ಕಬಳ್ಳಾಪುರ: ಯಲುವಹಳ್ಳಿ ಎನ್.ರಮೇಶ್ ಅವರ ನೇತೃತ್ವದಲ್ಲಿ ಯಲುವಹಳ್ಳಿ ರಮೇಶ್ ಅಭಿಮಾನಿ ಬಳಗದ ವತಿಯಿಂದ 12ನೇ ವರ್ಷದ ಸಾಮೂಹಿಕ ಸೀಮಂತ ಹಾಗೂ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸೆ.6ರಂದು ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎನ್.ರಮೇಶ್, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಗರ್ಭಿಣಿಯರು ಸೆ.3ರೊಳಗೆ ನಗರದ ಬಿಬಿ ರಸ್ತೆಯಲ್ಲಿರುವ ಸಮಾನ ಮನಸ್ಕರ ಸೇವಾ ಸಂಸ್ಥೆಯ ಕಚೇರಿಯಲ್ಲಿ ಹೆಸರು ನೋಂದಾಯಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಯಾದವ ಸಮುದಾಯದ ಸಂಘಟನೆ, ಏಳಿಗೆಗೆ ಒಗ್ಗಟ್ಟು ಅಗತ್ಯ: ಡಿ.ಟಿ.ಶ್ರೀನಿವಾಸ್
2015ರಲ್ಲಿ ತಮ್ಮ ಸೊಸೆ ಗರ್ಭಿಣಿಯಾದ ಸಂದರ್ಭದಲ್ಲಿ ಬಡ ಗರ್ಭಿಣಿಯರಿಗೂ ಸೀಮಂತ ಕಾರ್ಯ ಕ್ರಮ ನಡೆಸಬೇಕೆಂಬ ಆಲೋಚನೆ ಮೂಡಿತ್ತು. ಸೊಸೆಯೊಂದಿಗೆ ಚರ್ಚಿಸಿ ಅಂದಿನಿಂದ ಪ್ರತಿವರ್ಷ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಇದುವರೆಗೆ ಸುಮಾರು 2,000 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ನೆರವೇರಿಸಲಾಗಿದ್ದು, ಪ್ರತಿವರ್ಷ ಭಾಗವಹಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹಿಂದೂ ಮಹಿಳೆಯರೊಂದಿಗೆ ಇತರ ಧರ್ಮಗಳ ಗರ್ಭಿಣಿಯರೂ ಕಾರ್ಯಕ್ರಮದಲ್ಲಿ ಭಾಗವಹಿಸು ತ್ತಿದ್ದಾರೆ ಎಂದರು.
ರಮೇಶ್ ಅವರ ಸೊಸೆ ಎ.ಆರ್.ಹೇಮಲತಾ ಜನಾರ್ಧನ್ ಮಾತನಾಡಿ, ಸೆ.3ರೊಳಗೆ ನೋಂದಾ ಯಿಸಿಕೊಳ್ಳುವ ನಾಲ್ಕು ತಿಂಗಳ ಮೇಲ್ಪಟ್ಟ ಗರ್ಭಿಣಿಯರಿಗೆ ಕೆಂಪೇಗೌಡ ಆಸ್ಪತ್ರೆಯ ನುರಿತ ಪ್ರಸೂತಿ ತಜ್ಞರ ತಂಡದಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸಲಹೆ ನೀಡಲಾಗು ವುದು. ಆಹಾರ ಕ್ರಮ ಮತ್ತು ವ್ಯಾಯಾಮದ ಕುರಿತು ಆಹಾರ ತಜ್ಞರಿಂದಲೂ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ತಪಾಸಣೆಯ ಬಳಿಕ ಶಾಸ್ತ್ರೋಕ್ತವಾಗಿ ಸಾಮೂಹಿಕ ಸೀಮಂತ ನೆರವೇರಿಸಲಾಗುವುದು. ಭಾಗವಹಿ ಸುವ ಎಲ್ಲ ಗರ್ಭಿಣಿಯರಿಗೆ ಉಚಿತ ಸೀರೆ, ಕುಪ್ಪಸ, ಅರಿಶಿನ, ಕುಂಕುಮ, ಹಸಿರು ಬಳೆ, ಹಣ್ಣು ಹಾಗೂ ಸಿಹಿತಿಂಡಿಗಳನ್ನು ನೀಡಿ ಮಡಿಲು ತುಂಬಿಸಲಾಗುವುದು ಎಂದರು.
ಹೆಚ್ಚಿನ ಮಾಹಿತಿಗಾಗಿ ಯಲುವಹಳ್ಳಿ ಎನ್.ರಮೇಶ್–9845221343, ಕೆ.ಎಸ್. ಶಿವರಾಂ–9141132416, ಯಲುವಹಳ್ಳಿ ಜನಾರ್ಧನ್–9632681616 ಹಾಗೂ ಹೇಮಲತಾ ಜನಾರ್ಧನ್–7026998666 ಅವರನ್ನು ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡ ಯಲುವಹಳ್ಳಿ ಜನಾರ್ಧನ್, ಜಿ.ಪಂ. ಮಾಜಿ ಸದಸ್ಯೆ ಮುಸ್ಟೂರು ನಾರಾಯಣಮ್ಮ, ಎಸ್.ಶಿವರಾಂ, ಮಾಜಿ ನಗರಸಭಾ ಸದಸ್ಯ ಲಕ್ಷ್ಮಣ್, ಕಳವಾರ ಶ್ರೀಧರ್, ನಾಯನಹಳ್ಳಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.