ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಜಿಲ್ಲೆಯಲ್ಲಿ 2352 ಕಾರ್ಮಿಕರನ್ನು ಜೀತ ವಿಮುಕ್ತಿಗೊಳಿಸಿ ಪುನರ್ವಸತಿ ಕಲ್ಪಿಸಲಾಗಿದೆ

ಶೇ.85 ರಷ್ಟು ಕುಟುಂಬಗಳು ಇಂದು ಸ್ಮಾರ್ಟ್ ಪೋನ್‌ಗಳನ್ನು ಬಳಸುವ ಬಗ್ಗೆ ಅಂಕಿ ಅಂಶಗಳು ಹೇಳುತ್ತವೆ. ಆದ್ದರಿಂದ ಯಾವುದೇ ಹಳ್ಳಿಯಲ್ಲಾಗಲಿ, ನಗರ ಪ್ರದೇಶದಲ್ಲಿ ಆಗಲಿ ಯಾರಿಗೂ ಗೊತ್ತಿಲ್ಲದ ಹಾಗೆ ಯಾರಿಂದಲೂ ಬಲವಂತದ ಹಾಗೂ ಬಂಧನದ ದುಡಿಮೆ ಮಾಡಿಸಲು ಸಾಧ್ಯವಿಲ್ಲ. ಅಕ್ಕ ಪಕ್ಕದ ವಾಸಿಗಳಿಗೆ ಈ ಮಾಹಿತಿ ಗೊತ್ತಿರುತ್ತದೆ,

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 2352 ಕಾರ್ಮಿಕರನ್ನು ಜೀತ ವಿಮುಕ್ತಿಗೊಳಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಜೀತ ಪದ್ಧತಿಯ ಪ್ರಸಂಗಗಳು ಕಂಡು ಬಂದಲ್ಲಿ ಸಹಾಯವಾಣಿ 1552ಗೆ ಕರೆ ಮಾಡಿ ಮಾಹಿತಿ ನೀಡಿ ಸಾಮಾಜಿಕ ಜವಾಬ್ದಾರಿ ಮೆರೆಯಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಗರ ಹೊರವಲಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ “ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ದಿನಾಚರಣೆ ಹಾಗೂ ಅರಿವು ಕಾರ್ಯಕ್ರಮ”ಕ್ಕೆ ಚಾಲನೆ ನೀಡಿ ಮಾತನಾಡಿದರು.

ಶೇ.85 ರಷ್ಟು ಕುಟುಂಬಗಳು ಇಂದು ಸ್ಮಾರ್ಟ್ ಪೋನ್‌ಗಳನ್ನು ಬಳಸುವ ಬಗ್ಗೆ ಅಂಕಿ ಅಂಶಗಳು ಹೇಳುತ್ತವೆ. ಆದ್ದರಿಂದ ಯಾವುದೇ ಹಳ್ಳಿಯಲ್ಲಾಗಲಿ, ನಗರ ಪ್ರದೇಶದಲ್ಲಿ ಆಗಲಿ ಯಾರಿಗೂ ಗೊತ್ತಿಲ್ಲದ ಹಾಗೆ ಯಾರಿಂದಲೂ ಬಲವಂತದ ಹಾಗೂ ಬಂಧನದ ದುಡಿಮೆ ಮಾಡಿಸಲು ಸಾಧ್ಯವಿಲ್ಲ. ಅಕ್ಕ ಪಕ್ಕದ ವಾಸಿಗಳಿಗೆ ಈ ಮಾಹಿತಿ ಗೊತ್ತಿರುತ್ತದೆ,
ಅಂತಹವರು ದೊಡ್ಡ ಮನಸ್ಸು ಮಾಡಿ ಸಹಾಯವಾಣಿಗೆ ಕರೆ ಮಾಡಿದರೆ ಸಕ್ಷಮ ಪ್ರಾಧಿಕಾರಗಳು ಜೀತ ವಿಮುಕ್ತಿ ಕಾರ್ಯ ಹಾಗೂ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಜೀತ ಪದ್ಧತಿಗೆ ದೂಡಿದ ಹಾಗೂ ಸಹಕಾರ ನೀಡಿದ ಎಲ್ಲರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಲು ಜಿಲ್ಲಾಡಳಿತ ಬದ್ದವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಶ್ರದ್ಧಾಭಕ್ತಿಯಿಂದ ನಡೆದ ಶ್ರೀಭೋಗನಂದೀಶ್ವರ, ಗಿರಿಜಾಂಬ ಸಹಿತ ಗಣಪತಿ ದೇವರ ಐತಿಹಾಸಿಕ ಜೋಡಿ ಬ್ರಹ್ಮರಥೋತ್ಸವ

ಸ್ವಾತಂತ್ರ‍್ಯ ಪೂರ್ವದಲ್ಲಿ ಅದರಲ್ಲೂ 1800 ರ ಕಾಲಘಟ್ಟದಲ್ಲಿ ಜಮೀನ್ದಾರಿ ಪದ್ಧತಿ, ಜಾಜ್ ಮಾನಿ ಪದ್ಧತಿಗಳಿಂದ ಜೀತ ಪದ್ಧತಿ ಆರಂಭವಾಯಿತು. ಯಾವುದೋ ಅನಿವಾರ್ಯ
ಸಂದರ್ಭಗಳಲ್ಲಿ ಸಾಮಾಜಿಕ ಅಸಮಾನತೆ ಹಾಗೂ ಬಡತನದ ಕಾರಣದಿಂದ ಸಾಲ ಪಡೆದು ಸಾಲಕ್ಕೆ ಪ್ರತಿಯಾಗಿ ಬಲವಂತದ ದುಡಿಮೆಗೆ ಸಿಲುಕಿಕೊಂಡ ಪ್ರಕರಣಗಳು ಸಾಕಷ್ಟು ನಡೆದಿವೆ. ಇಂತಹ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು 1975ರಲ್ಲಿ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ ಬಂದ ಮೇಲೆ ಈ ಪದ್ಧತಿಯ ತಡೆಗೆ ಬಹುದೊಡ್ಡ ಶಾಶ್ವತ ಕ್ರಮ ಆಯಿತು ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈವರೆಗೆ 2352 ಕಾರ್ಮಿಕರನ್ನು ಜೀತ ವಿಮುಕ್ತಿಗೊಳಿಸಿ ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಮಾಡಲಾಗಿದೆ. ಜೀತ ವಿಮೋಚನೆಗಾಗಿ ಜಿಲ್ಲೆಯಲ್ಲಿ ಪ್ರಯತ್ನ ಮಾಡುತ್ತಿರುವ ಕೆಲವು ಸಂಘಟನೆಗಳು ಜೀತ ವಿಮುಕ್ತಿ ಪ್ರಕ್ರಿಯೆಯನ್ನು ನಡೆಸುವ ಪ್ರಸ್ತುತ ಚಾಲನೆಯಲ್ಲಿ ಮಾರ್ಗಸೂಚಿಯಲ್ಲಿ ಹಲವು ಸುಧಾರಣೆಗಳನ್ನು ತರಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ರಾಜ್ಯ ಮಟ್ಟಕ್ಕೆ ಸಲ್ಲಿಸಲು ಕ್ರಮ ವಹಿಸುವು ದಾಗಿ ತಿಳಿಸಿದರು.

cbpm1o

ಜಿಲ್ಲೆಯಲ್ಲಿರುವ ಇಟ್ಟಿಗೆ ಪ್ಯಾಕ್ಟರಿಗಳಲ್ಲಿ, ಕೋಳಿ ಫಾರಂಗಳಲ್ಲಿ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಮಾಹಿತಿಯನ್ನು ತೆಗೆದುಕೊಂಡು ಯಾರೊಬ್ಬರು ಜೀತ ಪದ್ಧತಿಗೆ ಸಿಲುಕಿಕೊಳ್ಳದಂತೆ ಕ್ರಮವಹಿಸಲಾಗುವುದು ಹಾಗೂ ಅರಿವು ಮೂಡಿಸ ಲಾಗುವುದು ಇನ್ನೂ ಮುಂದೆ ಇಂತಹ ದುಡಿಮೆಗೆ ಯಾರೋಬ್ಬರೂ ಮುಂದಾಗಬಾರದು ಎಂದು ಮನವಿ ಮಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಜೀತ ಪದ್ಧತಿ ಇನ್ನೂ ಜೀವಂತ ಇದೆ ಎಂದರೆ ಎಲ್ಲರೂ ನಾಚಿಕೆ ಪಟ್ಟುಕೊಳ್ಳಬೇಕು. ಉಳ್ಳವರಿಂದ ಸಾಲ ಪಡೆದು, ಸಾಲ ಪಡೆದವರ ಮಕ್ಕಳು, ಮೊಮ್ಮಕ್ಕಳು ಉಳ್ಳವರ ಮನೆಯಲ್ಲಿ ಕೆಲಸ ಮಾಡು ವಂತದ್ದನ್ನು ನಾವು ಕೇಳಿದ್ದೇವೆ ಅಲ್ಲಲ್ಲಿ ಕಂಡಿದ್ದೇವೆ ಆದರೆ ಇಂದಿನ ಕಾಲಘಟ್ಟದಲ್ಲಿ ಜೀತ ಪದ್ಧತಿಯು ಬೇರೆ ರೂಪವನ್ನು ಪಡೆಯುತ್ತಿದೆ. ನಗರ ಪ್ರದೇಶದಲ್ಲಿ ಮನೆ ಕೆಲಸ, ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಹಾಗೂ ಮಕ್ಕಳನ್ನು ನೋಡಿಕೊಳ್ಳಲು ಬಲವಂತದ ದುಡಿಮೆ ಮಾಡಿಸುತ್ತಿರುವುದು ಇನ್ನೂ ಜೀವಂತವಾಗಿದೆ. ಅಂತಹ ಪ್ರಸಂಗಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿ ತಡೆಗಟ್ಟಬೇಕು ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿ, ಊಳಿಗಮಾನ್ಯ ಪದ್ಧತಿ ಯಿಂದ ಆರಂಭವಾದ ಜೀತಪದ್ಧತಿ ಇಂದು ಬೇರೆ ಬೇರೆ ಆಯಾಮಗಳನ್ನು ಪಡೆದು ಕೊಂಡು ಸಮಾಜದಲ್ಲಿ ಅಲ್ಲಲ್ಲಿ ಕಂಡು ಬರುತ್ತಿದೆ. ಕಾರ್ಪೋರೇಟ್ ಜಗತ್ತಿನಲ್ಲೂ ಜೀತ ಪದ್ಧತಿ ಕಾಣಿಸಿಕೊಳ್ಳುತ್ತಿದೆ. ರೂಪಾಂತರಗೊAಡಿರುವ ಜೀತಪದ್ಧತಿಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಆಡಳಿತವರ್ಗ ಕಾರ್ಯೋನ್ಮುಖವಾಗಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್ ಅವರು ಜೀತ ವಿಮುಕ್ತಿಯ ಬಗ್ಗೆ ಅರಿವು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ, ಉಪವಿಭಾ ಗಾಧಿಕಾರಿ ಡಿ.ಹೆಚ್.ಅಶ್ವಿನ್, ಜೀತ ವಿಮುಕ್ತಿಗೆ ಪ್ರಯತ್ನ ಮಾಡುತ್ತಿರುವ ಮುಖಂಡರಾದ
ಕಿರಣ್ ಕಮಲ್ ಪ್ರಸಾದ್, ನಾರಾಯಸ್ವಾಮಿ, ರತ್ನಮ್ಮ, ಗಂಗಾಧರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಜೀತ ವಿಮುಕ್ತಿಗೊಂಡವರು ಉಪಸ್ಥಿತರಿದ್ದರು.