ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nagarjuna College of Engineering and Technology: ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿಗೆ ₹25 ಲಕ್ಷ ಸಂಶೋಧನಾ ಅನುದಾನ

ಮೂರು ವರ್ಷಗಳ ಅವಧಿಯಲ್ಲಿ ಸೂಪರ್ ಎಲಾಸ್ಟಿಸಿಟಿ ಮತ್ತು ಅದರ ಇಂಜಿನಿಯರಿಂಗ್ ಕ್ಷೇತ್ರದಲ್ಲಿನ ಅನ್ವಯಗಳ ಕುರಿತು ಸಂಶೋಧನೆ ಕೈಗೊಳ್ಳಲು ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ. ಕೈಗಾರಿಕಾ ಸಹಭಾಗಿತ್ವದೊಂದಿಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಇದು ನೆರವಾಗಲಿದೆ ಎಂದು ಡಾ. ಮಹೇಶ್ ಕೆ.ಕೆ. ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ: ನಗರದ ಹೊರವಲಯದ ನಾಗಾರ್ಜುನ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ(Nagarjuna College of Engineering and Technology) ಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಸಂಶೋಧನಾ ಪ್ರೋತ್ಸಾಹ ಯೋಜನೆಯಡಿ ₹25 ಲಕ್ಷ ಸಂಶೋಧನಾ ಅನುದಾನ ಮಂಜೂರಾಗಿದೆ.

ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯ ಸಂಶೋಧಕರಾದ ಡಾ. ಮಹೇಶ್ ಕೆ.ಕೆ. ಅವರು ಕೈಗಾರಿಕಾ ಸಹಯೋಗದೊಂದಿಗೆ ಸಿದ್ಧಪಡಿಸಿ ಸಲ್ಲಿಸಿದ್ದ ಸೂಪರ್ ಎಲಾ ಸ್ಟಿಸಿಟಿ ಕುರಿತ ಸಂಶೋಧನಾ ಪ್ರಸ್ತಾವನೆಗೆ ಈ ಅನುದಾನ ಲಭಿಸಿದೆ. ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಹೇಶ್ ಶಾಸ್ತ್ರಿ ಅವರು ಉಪ ಮುಖ್ಯ ಸಂಶೋಧಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇದನ್ನೂ ಓದಿ: Chikkaballapur News: ಒಂದೇ ಕಂತಿನಲ್ಲಿ ಭೂ ಪರಿಹಾರ ಬಿಡುಗಡೆ ಬಳಿಕ 135 ದಿನಗಳ ಧರಣಿ ಹಿಂಪಡೆದ ರೈತಸಂಘ

ಮೂರು ವರ್ಷಗಳ ಅವಧಿಯಲ್ಲಿ ಸೂಪರ್ ಎಲಾಸ್ಟಿಸಿಟಿ ಮತ್ತು ಅದರ ಇಂಜಿನಿಯರಿಂಗ್ ಕ್ಷೇತ್ರ ದಲ್ಲಿನ ಅನ್ವಯಗಳ ಕುರಿತು ಸಂಶೋಧನೆ ಕೈಗೊಳ್ಳಲು ಈ ಅನುದಾನವನ್ನು ಬಳಸಿಕೊಳ್ಳ ಲಾಗುತ್ತದೆ. ಕೈಗಾರಿಕಾ ಸಹಭಾಗಿತ್ವದೊಂದಿಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಇದು ನೆರವಾಗಲಿದೆ ಎಂದು ಡಾ. ಮಹೇಶ್ ಕೆ.ಕೆ. ತಿಳಿಸಿದ್ದಾರೆ.

ಎಐಸಿಟಿಇಯ ಸಂಶೋಧನಾ ಪ್ರೋತ್ಸಾಹ ಯೋಜನೆಯು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ನವೀನ ಸಂಶೋಧನೆಗೆ ಉತ್ತೇಜನ ಹಾಗೂ ಆರ್ಥಿಕ ಬೆಂಬಲ ನೀಡುವ ಉದ್ದೇಶ ಹೊಂದಿದೆ. ಈ ಯೋಜನೆ ಯಡಿ ಕಾಲೇಜಿಗೆ ಅನುದಾನ ದೊರೆತಿರುವುದು ಸಂಸ್ಥೆಯ ಸಂಶೋಧನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ ಜಿ. ಸಂತಸ ವ್ಯಕ್ತಪಡಿಸಿದ್ದಾರೆ.