ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chimul Election: ಜಿಲ್ಲಾ ಹಾಲು ಸಹಕಾರ ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ 44 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ

ಒಕ್ಕೂಟದ 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಮುಂಬರುವ ಐದು ವರ್ಷಗಳ ಆಡಳಿತ ಸಮಿತಿಗೆ ಆಯ್ಕೆಗೆ ಜ.22 ರಂದು ಉಮೇದುವಾರಿಕೆ ಸಲ್ಲಿಕೆಗೆ ಕೊನೆ ದಿನವಾಗಿದ್ದು ಅಪಾರ ಬೆಂಬಲಿಗರೊಂದಿಗೆ ಪೈಪೋಟಿಯಲ್ಲಿ ಗುರುವಾರ ಮೆರವಣಿಗೆ ಬಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಿಯಮಾನುಸಾರ ಶುಕ್ರವಾರ ಉಮೇದುವಾರಿಕೆಯ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ

ಚಿಕ್ಕಬಳ್ಳಾಪುರ: ಜಿಲ್ಲಾ ಹಾಲು ಸಹಕಾರ ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ 44 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಒಕ್ಕೂಟದ 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಮುಂಬರುವ ಐದು ವರ್ಷಗಳ ಆಡಳಿತ ಸಮಿತಿಗೆ ಆಯ್ಕೆಗೆ ಜ.22 ರಂದು ಉಮೇದುವಾರಿಕೆ ಸಲ್ಲಿಕೆಗೆ ಕೊನೆ ದಿನ ವಾಗಿದ್ದು ಅಪಾರ ಬೆಂಬಲಿಗರೊಂದಿಗೆ ಪೈಪೋಟಿಯಲ್ಲಿ ಗುರುವಾರ ಮೆರವಣಿಗೆ ಬಂದು ಅಭ್ಯರ್ಥಿ ಗಳು ನಾಮಪತ್ರ ಸಲ್ಲಿಸಿದರು. ನಿಯಮಾನುಸಾರ ಶುಕ್ರವಾರ ಉಮೇದುವಾರಿಕೆಯ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ: Chimul Election: ಚಿಮುಲ್ ಚುನಾವಣೆ: ಪೆರೇಸಂದ್ರ ಕ್ಷೇತ್ರದಲ್ಲಿ ಕೆ.ವಿ. ನಾಗರಾಜ್ ಎನ್‌ಡಿಎ ಅಭ್ಯರ್ಥಿ; ಒಗ್ಗಟ್ಟಿನ ಮಂತ್ರ ಜಪಿಸಿದ ಸಂಸದ ಡಾ.ಕೆ.ಸುಧಾಕರ್

44 ಅಭ್ಯರ್ಥಿಗಳು ಕಣಕ್ಕೆ

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ 4, ಪೆರೇಸಂದ್ರ ಕ್ಷೇತ್ರಕ್ಕೆ 3, ಮಂಚೇನಹಳ್ಳಿ ಕ್ಷೇತ್ರಕ್ಕೆ 3, ಗೌರಿಬಿದನೂರು ಕ್ಷೇತ್ರಕ್ಕೆ 3, ಗುಡಿಬಂಡೆ ಕ್ಷೇತ್ರ 5, ಕೈವಾರ ಕ್ಷೇತ್ರ 3, ಚಿಂತಾಮಣಿ (ಕಸಬಾ) 3, ಚೇಳೂರು 4, ಬಾಗೇ ಪಲ್ಲಿ ಕ್ಷೇತ್ರಕ್ಕೆ 3, ಶಿಡ್ಲಘಟ್ಟ ಕ್ಷೇತ್ರ 5, ಜಂಗಮಕೋಟೆ ಕ್ಷೇತ್ರಕ್ಕೆ 3, ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರ 3, ಚಿಂತಾಮಣಿ ಮಹಿಳಾ ಕ್ಷೇತ್ರಕ್ಕೆ 2 ಅಭ್ಯರ್ಥಿಗಳು ಸೇರಿದಂತೆ 54 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

Umedu 2

ಅಖಾಡಕ್ಕಿಳಿದ ಅಭ್ಯರ್ಥಿಗಳು

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೋಚಿಮುಲ್‌ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್‌ ಬೆಂಬಲಿಗರೊಂದಿಗೆ ಉಮೇದುವಾರಿಕೆ ಸಲ್ಲಿಸಿದರು.

Umeduvarike

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್‌ ರಾಮಚಂದ್ರ ಗೌಡ, ಬಿಎಂಟಿಸಿ ಮಾಜಿ ಉಪಾ ಧ್ಯಕ್ಷ ಕೆ.ವಿ.ನವೀನ್‌ ಕಿರಣ್‌, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವ ರೆಡ್ಡಿ ಮತ್ತಿತರರು ಇದ್ದರು. ಇನ್ನೂ ಶಾಸಕ ಪ್ರದೀಪ್‌ ಈಶ್ವರ್‌ ಬೆಂಬಲದ ಹಿನ್ನೆಲೆಯಲ್ಲಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್‌ ಬೆಂಬಲದಲ್ಲಿ ಕೋಚಿಮುಲ್‌ ಮಾಜಿ ನಿರ್ದೇಶಕ ಎನ್.ಸಿ.ವೆಂಕಟೇಶ್‌ ಸ್ಪರ್ಧಿಸಿದ್ದು ಕಾಂಗ್ರೆಸ್‌ ಪಾಳಯದಲ್ಲಿ ಭಿನ್ನಮತದ ಬಂಡಾಯ ಬಿಸಿ ತಟ್ಟಿದೆ.