ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಅಶಕ್ತ ಕುಟುಂಬಗಳ ಶವಸಂಸ್ಕಾರಕ್ಕೆ 5 ಸಾವಿರ ನೆರವು ಘೋಷಣೆ; ಕ್ಷೇತ್ರದ ಜನರ ಕ್ಷೇಮಕ್ಕಾಗಿ ಭೋಗ ನಂದೀಶ್ವರನಿಗೆ ವಿಶೇಷ ಪೂಜೆ

ನಂದಿ ಗ್ರಾಮದ ಐತಿಹಾಸಿಕ ಶ್ರೀ ಭೋಗ ನಂದೀಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, "ಮನುಷ್ಯನು ಹುಟ್ಟುವಾಗ ಈಶ್ವರನ ವರದಾನವಾಗಿ ಬರುತ್ತಾನೆ; ಹೋಗುವಾಗ ನಶ್ವರನಾಗಿ ಮರಳುತ್ತಾನೆ. ಬದುಕಿನ ಕೊನೆಯ ಹಾದಿಯೂ ಗೌರವಯುತವಾಗಿರಬೇಕು. ಹಣದ ಕೊರತೆಯಿಂದ ಯಾವ ಕುಟುಂಬವೂ ಅಂತ್ಯಸಂಸ್ಕಾರ ನಡೆಸಲು ಪರದಾಡಬಾರದು.

ಚಿಕ್ಕಬಳ್ಳಾಪುರ: ಜನನವನ್ನು ಸಂಭ್ರಮದಿಂದ ಸ್ವಾಗತಿಸುವ ಸಮಾಜದಲ್ಲಿ, ಕೆಲವೊಮ್ಮೆ ಮರಣ ವನ್ನೂ ಗೌರವದಿಂದ ಬೀಳ್ಕೊಡಲು ಸಾಧ್ಯವಾಗದೆ ಬಡ ಕುಟುಂಬಗಳು ಕಣ್ಣೀರಿಡುವ ಘಟನೆಗಳು ನಡೆಯುತ್ತವೆ. ಅಂತಹ ಅಸಹಾಯಕ ಕುಟುಂಬಗಳ ನೋವಿಗೆ ನೆರವಾಗುವ ಮಾನವೀಯ ಸಂಕಲ್ಪ ದೊಂದಿಗೆ, ಚಿಕ್ಕಬಳ್ಳಾಪುರ ಮತ್ತು ಮಂಚೇನಹಳ್ಳಿ ತಾಲೂಕಿನ ಆರ್ಥಿಕವಾಗಿ ದುರ್ಬಲ ಕುಟುಂಬ ಗಳಿಗೆ ಅಂತ್ಯಸಂಸ್ಕಾರ ನೆರವಿಗಾಗಿ 5 ಸಾವಿರ ಆರ್ಥಿಕ ಸಹಾಯ ನೀಡುವುದಾಗಿ ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಹರೀಶ್ ರೆಡ್ಡಿ ಘೋಷಿಸಿದ್ದಾರೆ.

ನಂದಿ ಗ್ರಾಮದ ಐತಿಹಾಸಿಕ ಶ್ರೀ ಭೋಗ ನಂದೀಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, "ಮನುಷ್ಯನು ಹುಟ್ಟುವಾಗ ಈಶ್ವರನ ವರದಾನವಾಗಿ ಬರುತ್ತಾನೆ; ಹೋಗುವಾಗ ನಶ್ವರನಾಗಿ ಮರಳುತ್ತಾನೆ. ಬದುಕಿನ ಕೊನೆಯ ಹಾದಿಯೂ ಗೌರವ ಯುತವಾಗಿರಬೇಕು. ಹಣದ ಕೊರತೆಯಿಂದ ಯಾವ ಕುಟುಂಬವೂ ಅಂತ್ಯಸಂಸ್ಕಾರ ನಡೆಸಲು ಪರದಾಡಬಾರದು. ಅವರ ದುಃಖದ ಸಮಯದಲ್ಲಿ ಸಹೋದರನಾಗಿ ನಿಲ್ಲುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಆದ್ದರಿಂದ 'ಶವ ಸಂಸ್ಕಾರವೇ ಶಿವ ಸಂಸ್ಕಾರ' ಎಂಬ ಮನೋಭಾವದಿಂದ ಈ ಸೇವಾ ಯೋಜನೆಯನ್ನು ಆರಂಭಿಸುತ್ತಿದ್ದೇನೆ" ಎಂದು ಹೇಳಿದರು.

ಇದನ್ನೂ ಓದಿ: Chikkaballapur News: ಬಿ.ಬಿ. ರಸ್ತೆಯ ಎರಡೂ ಬದಿಯ ಮಣ್ಣು ತೆರವು; ವಾಹನ ಸವಾರರಿಗೆ ನಿರಾಳ

ಜು.13ರ ವಿಶೇಷ ಪುಣ್ಯದಿನದ ಅಂಗವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನರ ಆರೋಗ್ಯ, ನೆಮ್ಮದಿ ಮತ್ತು ಅಭಿವೃದ್ಧಿಗಾಗಿ ಭೋಗ ನಂದೀಶ್ವರನ ಸನ್ನಿಧಿಯಲ್ಲಿ ವಿಶೇಷ ಸಂಕಲ್ಪ ಮಾಡಿ ಪೂಜೆ ಸಲ್ಲಿಸಿದ್ದೇನೆ. ಕ್ಷೇತ್ರದ ಪ್ರತಿಯೊಂದು ಕುಟುಂಬ ಸುಖ-ಸಮೃದ್ಧಿಯಿಂದ ಬದುಕಬೇಕು ಎಂಬುದೇ ನನ್ನ ಪ್ರಾರ್ಥನೆ ಎಂದರು.

IMG20260713121812 ok

ರಾಜಕೀಯವು ಅಧಿಕಾರದ ದಾರಿಯಲ್ಲ, ಜನಸೇವೆಯನ್ನು ವಿಶಾಲಗೊಳಿಸುವ ಸಾಧನ ಎಂದು ನಂಬಿದ್ದೇನೆ. ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯ ಮೂಲಕ ಜನರ ನಡುವೆ ಕೆಲಸ ಮಾಡುತ್ತಿದ್ದೇನೆ. ಯುವಕರ ವಿಶ್ವಾಸ, ಹಿರಿಯರ ಆಶೀರ್ವಾದ ಮತ್ತು ಜನರ ಪ್ರೀತಿಯೇ ನನ್ನ ದೊಡ್ಡ ಬಂಡವಾಳ. ಪಕ್ಷದ ವರಿಷ್ಠರು ನನ್ನ ಸೇವಾ ಕಾರ್ಯಗಳನ್ನು ಪರಿಗಣಿಸಿ ಅವಕಾಶ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

ಅವಕಾಶ ದೊರೆತರೆ ಪ್ರಧಾನಿ ನರೇಂದ್ರ ಮೋದಿಯವರ "ಸೇವೆಯೇ ಸಂಘಟನೆ" ಎಂಬ ತತ್ವವನ್ನು ಅಕ್ಷರಶಃ ಪಾಲಿಸುತ್ತಾ, ಪಕ್ಷದ ಸಿದ್ಧಾಂತಗಳಿಗೆ ಬದ್ಧನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವೆ. ಹಣಬಲ ಅಥವಾ ತೋಳುಬಲಕ್ಕಿಂತ ಜನರ ವಿಶ್ವಾಸವೇ ರಾಜಕೀಯದ ನಿಜವಾದ ಶಕ್ತಿ ಎಂಬುದನ್ನು ಕಾರ್ಯದ ಮೂಲಕ ಸಾಬೀತುಪಡಿಸುವ ಸಂಕಲ್ಪ ನನ್ನದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹರೀಶ್ ರೆಡ್ಡಿ ಅಭಿಮಾನಿಗಳು ಹಾಗೂ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.