ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ೫೩೧೮ ಬ್ಲಾಕ್ ಸ್ಪಾಟ್ ಗಳ ಸ್ವಚ್ಛತೆ: ಜಿಲ್ಲೆಯಾದ್ಯಂತ ಅಭಿಯಾನ ಯಶಸ್ವಿ

ಸರ್ಕಾರದ ನಿರ್ದೇಶನದಂತೆ ಸೆಪ್ಟೆಂಬರ್ ೧೪ ರಿಂದ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಅಕ್ಟೋಬರ್ ೨ ಗಾಂಧಿ ಜಯಂತಿಯವರೆಗೆ ಈ ಅಭಿಯಾನ ಮುಂದುವರೆಯಲಿದೆ. ಅದರಂತೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೫೩೧೮ ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಲಾಗಿದೆ. ಈ ಪೈಕಿ ೧೭೭೮ ಬ್ಲಾಕ್ ಸ್ಪಾಟ್ ಗಳನ್ನು ಸ್ವಚ್ಛಗೊಳಿಸುವ ಮೂಲಕ  ಸ್ಥಳಗಳನ್ನು ಕಸ ಮುಕ್ತ ಸ್ಥಳಗಳನ್ನಾಗಿ ಪರಿವರ್ತನೆ ಮಾಡಲಾಗಿದೆ.

ಚಿಕ್ಕಬಳ್ಳಾಪುರ : ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಸ್ವಚ್ಛತಾ ಹೀ ಸೇವಾ-2025 ಅಭಿಯಾನವು ಯಶಸ್ವಿಯಾಗಿ ನಡೆಯುತ್ತಿದ್ದು, ಜಿಲ್ಲೆಯಾಧ್ಯಂತ ಒಟ್ಟು ೫೩೧೮ ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಿ, ಸ್ವಚ್ಛತೆ ಕೈಗೊಳ್ಳುವ ಮೂಲಕ ಅವುಗಳನ್ನು ಶಾಶ್ವತವಾಗಿ ತ್ಯಾಜ್ಯ ಮುಕ್ತ ಸ್ಥಳಗಳನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದು ಮಾನ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಡಾ.ವೈ.ನವೀನ್ ಭಟ್ ತಿಳಿಸಿದರು.

ಸರ್ಕಾರದ ನಿರ್ದೇಶನದಂತೆ ಸೆಪ್ಟೆಂಬರ್ ೧೪ ರಿಂದ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಅಕ್ಟೋಬರ್ ೨ ಗಾಂಧಿ ಜಯಂತಿಯವರೆಗೆ ಈ ಅಭಿಯಾನ ಮುಂದುವರೆಯಲಿದೆ. ಅದರಂತೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೫೩೧೮ ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಲಾಗಿದೆ. ಈ ಪೈಕಿ ೧೭೭೮ ಬ್ಲಾಕ್ ಸ್ಪಾಟ್ ಗಳನ್ನು ಸ್ವಚ್ಛಗೊಳಿಸುವ ಮೂಲಕ  ಸ್ಥಳಗಳನ್ನು ಕಸ ಮುಕ್ತ ಸ್ಥಳಗಳನ್ನಾಗಿ ಪರಿವರ್ತನೆ ಮಾಡಲಾಗಿದೆ.

ಕಸ ಹಾಕದಂತೆ ವಿಶೇಷ ಜಾಗೃತಿ

ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಿ, ಸ್ವಚ್ಛತೆ ಮಾಡುವುದಷ್ಟೇ ಅಲ್ಲದೆ ಸ್ವಚ್ಛತೆ ಮಾಡಿರುವ ಆ ಸ್ಥಳಗಳನ್ನು ಸೌಂದರ್ಯೀಕರಣ ಮಾಡುವತ್ತ ಹೆಚ್ಚಿನ ಗಮನ ಹರಿಸಲಾಗಿದೆ.

ಇದನ್ನೂ ಓದಿ: Chikkaballapur News: ಸತ್ಯ ಸಾಯಿ ಗ್ರಾಮದಲ್ಲಿ ಮೇಧಾ, ಸರಸ್ವತಿ, ದಕ್ಷಿಣಾಮೂರ್ತಿ ಹೋಮಗಳ ಮೆರುಗು: ಶ್ರದ್ಧೆಯಿಂದ ನಡೆದ ಮಹಾಗೌರಿಯ ಆರಾಧನೆ

ಈಗಾಗಲೇ ಸ್ವಚ್ಛತೆ ಕೈಗೊಂಡಿರುವ ಸ್ಥಳಗಳಲ್ಲಿ ಮತ್ತೆ ಮತ್ತೆ ಕಸ ಹಾಕದಂತೆ ಸಿಸಿಟಿವಿ ಅಳವಡಿಕೆ, ದಂಡದ ಹಾಕುವ ಬಗ್ಗೆ ನಾಮಪಲಕ ಹಾಕುವುದು ಸೇರಿದಂತೆ ಹಲವು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ಸ್ವಚ್ಛತೆ ಕೈಗೊಂಡಿರುವ ಸ್ಥಳಗಳಲ್ಲಿ ಹಳೆಯ ಟೈರ್ಗಳನ್ನು ಬಳಸಿಕೊಂಡು ಅದಕ್ಕೆ ಬಣ್ಣ ಬಣ್ಣದಿಂದ ಅಲಂಕಾರ ಮಾಡಿ ಅದರೊಳಗೆ ಗಿಡಗಳನ್ನು ನೆಟ್ಟು ಬೆಳೆಸುವುದು, ಪ್ರಯಾಣಿಕರು, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿರುವುದು. ಸ್ವಚ್ಛತೆ ಹಾಗೂ ದಂಡ ವಿಧಿಸುವ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸುವುದು ಸೇರಿದಂತೆ ಇನ್ನೂ ಹಲವು ವಿಶಿಷ್ಟ ರೀತಿಯಲ್ಲಿ ಆಕರ್ಷಣೆ ಹಾಗೂ ಸೌಂದರ್ಯಿಕರಣ ಮಾಡಲಾಗುತ್ತಿದೆ.

ಇದಕ್ಕೆ ಮಾದರಿ ಎಂಬAತೆ ಈಗಾಗಲೇ ಚಿಕ್ಕಬಳ್ಳಾಪುರ ತಾಲ್ಲೂಕು ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಟ್ಟ ಗ್ರಾಮದ ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ಮುಖ್ಯರಸ್ತೆಯಲ್ಲಿ ಹಲವು ವರ್ಷಗಳಿಂದ ಕಸದ ಜಾಗವಾಗಿದ್ದ ರಸ್ತೆ ಬದಿಯ ಸ್ಥಳವನ್ನು ಕಸ ಮುಕ್ತ ಸ್ಥಳನ್ನಾಗಿ ಪರಿವರ್ತಿಸ ಲಾಗಿದ್ದು, ಆ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿ, ಮತ್ತೆ ಕಸ ಹಾಕದಂತೆ ಸೌಂದರ್ಯೀ ಕರಣಗೊಳಿಸ ಲಾಗಿದೆ.

ಅದೇ ರೀತಿಯಾಗಿ ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆಯ ಆನೂರು ಗೇಟ್ ನ ಚರಂಡಿ ಬಳಿ ಹಲವು ದಿನಗಳಿಂದ ಬ್ಲಾಕ್ ಸ್ಪಾಟ್ ಆಗಿತ್ತು. ಅಲ್ಲಿಯೂ ಕೂಡ ಆಕರ್ಷಕ ರೀತಿಯಲ್ಲಿ ಸೌಂದರ್ಯೀಕರಣ ಮಾಡುವ ಮೂಲಕ ಕಸ ಮುಕ್ತ ಪ್ರದೇಶವನ್ನಾಗಿ ಪರಿವರ್ತಿಸಲಾಗಿದೆ.

೭೪೮ ಸರ್ಕಾರಿ ಕಚೇರಿ ಸ್ಥಳಗಳ ಸ್ವಚ್ಛತೆ

ಬಸ್ ನಿಲ್ದಾಣಗಳು, ಶಾಲಾ ಕಾಲೇಜುಗಳು, ಅಂಗನವಾಡಿಗಳು, ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡಗಳು, ಎಲ್ಲಾ ಆಸ್ಪತ್ರೆಗಳು, ಸಮುದಾಯ ಭವನ ಸೇರಿದಂತೆ ಜಿಲ್ಲೆಯಾಧ್ಯಂತ ಈವರೆಗೆ ಒಟ್ಟು ೭೪೮ ಸರ್ಕಾರಿ ಸಾರ್ವಜನಿಕ ಸ್ಥಳಗಳನ್ನು ಗುರ್ತಿಸಲಾಗಿದೆ. ಇದರಲ್ಲಿ ೨೧೧ ಸ್ಥಳಗಳನ್ನು ಈಗಾಗಲೇ ಸ್ವಚ್ಛ  ಮಾಡಲಾಗಿದೆ. ಈ ಅಭಿಯಾನದಲ್ಲಿ ಒಟ್ಟಾರೆಯಾಗಿ ೬೦ ಸಾವಿರ ಜನರನ್ನು ತೊಡಗಿಸಿಕೊಳ್ಳಲಾಗಿದೆ. ಮುಂದಿನ ೨-೩ ದಿನಗಳಲ್ಲಿ ಇನ್ನು ಹಲವು ಸ್ಥಳಗಳನ್ನು ತ್ಯಾಜ್ಯ ಮುಕ್ತ ಸ್ಥಳಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ ಎಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.

ಸ್ವಚ್ಛತೆ ಮತ್ತು ನೈರ್ಮಲ್ಯ ಎಂಬುದು ಕೇವಲ ಸರ್ಕಾರ ಮಾತ್ರವಲ್ಲದೇ ಸಾರ್ವಜನಿಕರ ಪಾಲ್ಗೊಳ್ಳು ವಿಕೆ ಇರಬೇಕು. ಪ್ರತಿಯೊಬ್ಬರೂ ತಮ್ಮ ಮನೆ ಹಂತದಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ, ಆಯಾ ನಿಗಧಿತ ದಿನದಂದು ಬರುವ ಗ್ರಾಮ ಪಂಚಾಯಿತಿಯ ಸ್ವಚ್ಚ ವಾಹಿನಿಗೆ ನೀಡಬೇಕು.  ಹಾಗೂ ಪ್ರತಿ ತಿಂಗಳಿಗೊಮ್ಮೆ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛಗೊಳಿಸಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಸಿಇಒ ಡಾ.ವೈ.ನವೀನ್ ಭಟ್ ತಿಳಿಸಿದರು.

ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿಯ ಪಿಡಿಒ ರವರು, ಸದಸ್ಯರು ಮತ್ತು ಪಂಚಾಯಿತಿಯ ಸಿಬ್ಬಂದಿ ಹಾಜರಿದ್ದರು.