ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

6th IEEE GCAT : ಗುಣಮಟ್ಟದ ಪ್ರಬಂಧಗಳಿಗೆ ಸಾಕ್ಷಿಯಾದ ೬ನೇ ಐಇಇಇ ಜಿಕ್ಯಾಟ್ ಅಂತರಾಷ್ಟ್ರೀಯ ಸಮ್ಮೇಳನ

ಭಾರತದಲ್ಲಿ ಇಂದು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತಿಯಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ನೆರವಿನಲ್ಲಿ ಯುವ ಸಂಶೋಧಕರು ಹೊಸ ಹೊಸ ಆವಿಷ್ಕಾರಗಳು ತಲೆ ಎತ್ತುತ್ತಿವೆ. ತಾಂತ್ರಿಕ ಶಿಕ್ಷಣವಿರಲಿ, ವೈದ್ಯಕೀಯ ಅಥವಾ ಮಾನವಿಕ ಶಿಕ್ಷಣದಲ್ಲಿ ನಡೆಯುವ ಸಂಶೋಧನೆಗಳು ಸುಸ್ಥಿರ ಜೀವಸಂಕುಲವನ್ನು ಕಟ್ಟುವತ್ತ ತಮ್ಮ ಚಿತ್ತವನ್ನು ಹರಿಸುವಂತಿರಬೇಕು.

ವರ್ತಮಾನದ ಸಮಸ್ಯೆಗಳಿಗೆ ಮದ್ದೆರೆಯುವಂತಹ ಸಂಶೋಧನೆಗಳು ಹೆಚ್ಚಾಗಲಿ

-

Ashok Nayak Ashok Nayak Oct 25, 2025 12:15 AM

ಚಿಕ್ಕಬಳ್ಳಾಪುರ: ಮಾಹಿತಿ ತಂತ್ರಜ್ಞಾನದ ಕ್ರಾಂತಿ ಮತ್ತು ಕೃತಕಬುದ್ಧಿಮತ್ತೆಯ ಈ ಯುಗದಲ್ಲಿ ಜನಪರ ಸಂಶೋಧನೆಗಳಿಗೆ ವಿಪುಲ ಅವಕಾಶಗಳಿದ್ದು ಇವು ವರ್ತಮಾನದ ಜ್ವಲಂತ ಸಮಸ್ಯೆಗಳಿಗೆ ಮದ್ಧರೆಯುವಂತಾಗಬೇಕು.ಈ ನಿಟ್ಟಿನಲ್ಲಿ ನಾಗಾರ್ಜುನ ತಾಂತ್ರಿಕ ಕಾಲೇಜಿನಲ್ಲಿ ನಡೆಯುತ್ತಿರುವ ೩ ದಿನಗಳ ೬ನೇ ವರ್ಷದ ಐಇಇಇ ಜಿಕ್ಯಾಟ್ ಅಂತರಾಷ್ಟ್ರೀಯ ಸಮ್ಮೇಳನ ದಾರಿದೀಪವಾಗಲಿದೆ ಎಂದು ಪ್ರಾಂಶುಪಾಲ ಡಾ.ಎ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ನಗರ ಹೊರವಲಯ ನಾಗಾರ್ಜುನ ತಾಂತ್ರಿಕ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ  ೩ ದಿನಗಳ ಕಾಲ ನಡೆಯುವ ೬ನೇ ಐಇಇಇ ಜಿಕ್ಯಾಟ್ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದಲ್ಲಿ ಇಂದು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತಿಯಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ನೆರವಿನಲ್ಲಿ ಯುವ ಸಂಶೋಧಕರು ಹೊಸ ಹೊಸ ಆವಿಷ್ಕಾರಗಳು ತಲೆ ಎತ್ತುತ್ತಿವೆ. ತಾಂತ್ರಿಕ ಶಿಕ್ಷಣವಿರಲಿ, ವೈದ್ಯಕೀಯ ಅಥವಾ ಮಾನವಿಕ ಶಿಕ್ಷಣದಲ್ಲಿ ನಡೆಯುವ ಸಂಶೋಧನೆಗಳು ಸುಸ್ಥಿರ ಜೀವಸಂಕುಲವನ್ನು ಕಟ್ಟುವತ್ತ ತಮ್ಮ ಚಿತ್ತವನ್ನು ಹರಿಸುವಂತಿರಬೇಕು. ಈ ನಿಟ್ಟಿನಲ್ಲಿ ೬ನೇ ಸಮ್ಮೇಳನವು ಸಾರ್ಥಕತೆಯನ್ನು ಪಡೆಯುತ್ತ ಇಟ್ಟಿರುವ ದೃಢವಾದ ಹೆಜ್ಜೆಯಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಅ.26ಕ್ಕೆ ಸ್ಮೈಲ್ಸ್ ಆಸ್ಪತ್ರೆ ವತಿಯಿಂದ ಉಚಿತ ಫೈಲ್ಸ್ ತಪಾಸಣಾ ಶಿಬಿರ

೬ನೇ ಐಇಇಇ ಜಿಕ್ಯಾಟ್ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡನೆಯಾಗಲು ೧೪ ದೇಶಗಳ ಸಂಶೋಧಕರಿಂದ ೨೦೪೫ ಪ್ರಬಂಧಗಳು ಸಲ್ಲಿಕೆಯಾಗಿದ್ದವು.ಸಮ್ಮೇಳನದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ನಾವು ೩೦೦ ಇವುಗಳನ್ನು  ಮೌಲ್ಯಮಾಪನ ಮಾಡಿಸಿ ಈ ಪೈಕಿ ಉತ್ಕೃಷ್ಟವಾದ ೧೯೪ ಪ್ರಬಂಧಗಳನ್ನು ಮಾತ್ರ ಆರಿಸಿ ಮಂಡನೆಗೆ ಅವಕಾಶ ನೀಡಲಾಗಿದೆ. ಇದು ಈ ಸಮ್ಮೇಳನದಲ್ಲಿ ಗುಣಮಟ್ಟದ ಪ್ರಬಂಧ ಮಂಡನೆಗೆ ಅವಕಾಶ ನೀಡಿರುವುದನ್ನು ಪ್ರಚುರಪಡಿಸುತ್ತಿದೆ ಎಂದರು.

ಪ್ರಧಾನವಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿಯ ಸಾಧಕ ಬಾಧಕಗಳ ಮೇಲೆ ಬೆಳಕು ಚೆಲ್ಲುವ ಪ್ರಬಂಧಗಳು, ಹೃದ್ರೋಗ ಮತ್ತು ಕ್ಯಾನ್ಸರ್ ಪತ್ತೆಹಚ್ಚುವ ಬಗ್ಗೆ ಗಮನ ಸೆಳೆಯುವ ಪ್ರಬಂಧ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ರೈತಾಪಿ ವರ್ಗಕ್ಕೆ ನೆರವಾಗುವ ಹಣ್ಣು ಕೀಳುವ, ಒಕ್ಕಣೆ ಮಾಡುವ ಬಗ್ಗೆ ಬೆಳಕು ಚೆಲ್ಲುವ ಪ್ರಬಂಧಗಳು, ಸೌರಶಕ್ತಿಯನ್ನು ಸಮರ್ಥವಾಗಿ ಬಳಕೆ ಮಾಡುವ ಸಂಶೋ ಧನೆ, ಡೀಫ್ ಲರ್ನಿಂಗ್,ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಬಂಧಗಳನ್ನು ಸಂಶೋಧಕರು ಇಲ್ಲಿ ಮಂಡನೆ ಮಾಡಲಿದ್ದಾರೆ.

ಒಟ್ಟಾರೆ ೩ ದಿನಗಳ ಈ ಸಮ್ಮೇಳನವು  ಎಲ್ಲಾ ವಿಭಾಗಗಳ ಮೇಲೆ ಬೆಳಕುಚೆಲ್ಲುವಂತೆ ನಡೆಯುತ್ತಿದೆ. ಇಂತಹ ಮಹತ್ವದ ಸಮ್ಮೇಳದಲ್ಲಿ ಭಾಗಿಯಾಗಲು ಇಲ್ಲಿಗೆ ಆಗಮಿಸಿರುವ ಎಲ್ಲಾ ಸಂಶೋಧಕರಿಗೆ, ವಿದ್ವಾಂಸರಿಗೆ, ವಿಶ್ವವಿದ್ಯಾಲಯದ ಮುಖ್ಯಸ್ಥರಿಗೆ,ಅತಿಥಿಗಳಿಗೆ, ನಾಗಾರ್ಜುನ ತಾಂತ್ರಿಕ ಕಾಲೇಜಿನ ಆಡಳಿತ ಮಂಡಳಿಗೆ, ನಿರ್ದೇಶಕರಿಗೆ, ಎಲ್ಲಾ ವಿಭಾಗಳ ಮುಖ್ಯಸ್ಥರಿಗೆ ಬೋಧಕರಿಗೆ ಶುಭ ಕೋರು ತ್ತಿದ್ದೇನೆ.

ನಾಗಾರ್ಜುನ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಗೋಪಾಲಕೃಷ್ಣ ಮಾತನಾಡಿ ನಮ್ಮ ಸಂಸ್ಥೆಯ ಸಭಾಂಗಣದಲ್ಲಿ ೬ನೇ ಅಂತರಾಷ್ಟ್ರೀಯ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ದೇಶವಿದೇಶಗಳ ವಿದ್ವಾಂಸರಿAದ ಕೂಡಿರುವ ಈ ಸಮ್ಮೇಳನದಲ್ಲಿ ಗುಣಮಟ್ಟದ ಪ್ರಬಂಧ ಮಂಡನೆಗೆ ಅವಕಾಶ ನೀಡಲಾಗಿದೆ ಎಂಬುದನ್ನು ಪ್ರಾಂಶುಪಾಲರಿಂದ ತಿಳಿದು ಹೆಮ್ಮೆ ಯೆನಿಸಿದೆ. ಇದರಲ್ಲಿ ಶಿಕ್ಷಣ, ಆರೋಗ್ಯ, ಕೃಷಿ,ತಾಂತ್ರಿಕತೆ ಹೀಗೆ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡ ಪತ್ರಿಕೆಗಳು ಮಂಡನೆಯಾಗುತ್ತಿವೆ.ಹೀಗಾಗಿ ಇದು ಸುಸ್ಥಿರ ಅಭಿವೃದ್ದಿಗೆ ಒತ್ತು ನೀಡುವ ಸಮ್ಮೇಳನ ವಾಗಿದೆ ಎಂದರು.

ಪೂನಾದ ಡಾ.ಚಾಣಾಕ್ಯ ಝಾ , ವಿನಾಯಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ನಾಗಪ್ಪನ್, ಫಾಕ್ಸ್ಕಾನ್ ಕಂಪನಿಯ ಹೆಚ್.ಆರ್. ಸತೀಶ್‌ಕುಮಾರ್ ಇವರು ಯುವ ಸಂಶೋಧಕರಿಗೆ ಕಿವಿ ಮಾತು ಹೇಳುತ್ತಾ, ಸಂಶೋಧನೆ ಎಂಬುದು ನಿಂತ ನೀರಲ್ಲ, ನಮ್ಮಲ್ಲಿಯೇ ಬಚ್ಚಿಡುವ ಜ್ಞಾನವೂ ಅಲ್ಲ. ಇಂತಹ ಅಂತರಾಷ್ಟಿçÃಯ ಸಮ್ಮೇಳನಗಳಲ್ಲಿ ಭಾಗಿಯಾಗುವ ಮೂಲಕ ನಮ್ಮಲ್ಲಿನ ಜ್ಞಾನವನ್ನು ಇತರರಿಗೆ ಹಂಚಿಕೊಳ್ಳುವ ಮೂಲಕ ಸಂಶೋಧನಾ ಜಗತ್ತನ್ನು ವಿಸ್ತರಿಸುವ ಕೆಲಸ ಮಾಡಬೇಕು. ನಮ್ಮ ನಮ್ಮ ಮಿತಿಗಳನ್ನು ದಾಟಿ ಹೇಗೆ ಜೀವ ಸಂಕುಲಕ್ಕೆ ನೆರವಾಗುವ ವಿಶ್ವಾತ್ಮಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿಕೊಟ್ಟಿದ್ದಾರೆ ಎಂದರು.

ಈ ವೇಳೆ ಮುಖ್ಯ ಅತಿಥಿಗಳು ಮತ್ತು  ಸಾಧಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ್, ಡಾ.ರಶ್ಮಿ, ಡಾ.ಸಂಜೀವ್‌ಕುಮಾರ್ ಅತುರೆ, ಡಾ.ಗೋಪಿನಾಥ್, ಡಾ.ಸೈಯದ್ ಹುಸೇನ್, ಡಾ.ಲೋಹಿತ್, ಡಾ.ಯೋಗೀಶ್, ರೋಹಿತ್,ಶ್ರೀನಿವಾಸಲು,ಡಾ.ರಾಜ್‌ಕುಮಾರ್, ಡಾ.ರಾಘವೇಂದ್ರ ಪಾಟೀಲ್, ಡಾ.ಬಾಬಾ ಫಕ್ರುದ್ಧೀನ್ ಆಲಿ ಸೇರಿದಂತೆ ಎಲ್ಲಾ ವಿಭಾಗಳ ಪ್ರಮುಖರು ಸಹಾಯಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.