ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

4237 ಯೂನಿಟ್‌ಗಳ ಜೀವಧಾರೆಯ ದಾಖಲೆ: ಒಂದೇ ದಿನ, ಒಂದೇ ಸ್ಥಳದಲ್ಲಿ ಕರ್ನಾಟಕದ ಹೊಸ ಇತಿಹಾಸ

ನಗರದ ಸಿವಿವಿ ಕ್ಯಾಂಪಸ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 7.30ರಿಂದ ರಾತ್ರಿ 9 ಗಂಟೆಯ ವರೆಗೆ ನಿರಂತರವಾಗಿ ನಡೆದ ಶಿಬಿರದಲ್ಲಿ ಸಾವಿರಾರು ಯುವಕರು, ಮಹಿಳೆಯರು ಹಾಗೂ ವಿವಿಧ ಸಂಘ-ಸAಸ್ಥೆಗಳ ಸದಸ್ಯರು ಸಾಲುಗಟ್ಟಿ ರಕ್ತದಾನ ಮಾಡಿದರು. ಒಬ್ಬೊಬ್ಬ ರಕ್ತದಾನಿಯ ಕೈಯಿಂದ ಹರಿದ ರಕ್ತದ ಹನಿ, ನಾಳೆ ಯಾರದೋ ಜೀವ ಉಳಿಸುವ ಆಶಾಕಿರಣವಾಗಿ ಪರಿಣಮಿಸಲಿದೆ ಎಂಬ ಮಾನವೀಯ ಸಂದೇಶ ಶಿಬಿರದ ಕೇಂದ್ರಬಿಂದುವಾಗಿತ್ತು.

ಚಿಕ್ಕಬಳ್ಳಾಪುರ: ರಕ್ತಕ್ಕೆ ಪರ್ಯಾಯವೇ ಇಲ್ಲ. ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸೆಯ ಕ್ಷಣಗಳಲ್ಲಿ ಜೀವ ಉಳಿಸುವ ಏಕೈಕ ಆಶಾಕಿರಣ ಸ್ವಯಂಪ್ರೇರಿತ ರಕ್ತದಾನ. ಅಂತಹ ಮಾನವೀಯ ಸೇವೆಗೆ ಚಿಕ್ಕಬಳ್ಳಾಪುರ ಗುರುವಾರ ಸಾಕ್ಷಿಯಾಯಿತು. ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ೩೦ನೇ ದತ್ತಿ ದಿನಾಚರಣೆ ಅಂಗವಾಗಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 4237 ಯೂನಿಟ್ ರಕ್ತ ಸಂಗ್ರಹವಾಗುವ ಮೂಲಕ ಕರ್ನಾಟಕದಲ್ಲೇ ಹೊಸ ಇತಿಹಾಸ ನಿರ್ಮಾಣವಾಯಿತು.

ನಗರದ ಸಿವಿವಿ ಕ್ಯಾಂಪಸ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 7.30ರಿಂದ ರಾತ್ರಿ 9 ಗಂಟೆಯ ವರೆಗೆ ನಿರಂತರವಾಗಿ ನಡೆದ ಶಿಬಿರದಲ್ಲಿ ಸಾವಿರಾರು ಯುವಕರು, ಮಹಿಳೆಯರು ಹಾಗೂ ವಿವಿಧ ಸಂಘ-ಸAಸ್ಥೆಗಳ ಸದಸ್ಯರು ಸಾಲುಗಟ್ಟಿ ರಕ್ತದಾನ ಮಾಡಿದರು. ಒಬ್ಬೊಬ್ಬ ರಕ್ತದಾನಿಯ ಕೈಯಿಂದ ಹರಿದ ರಕ್ತದ ಹನಿ, ನಾಳೆ ಯಾರದೋ ಜೀವ ಉಳಿಸುವ ಆಶಾಕಿರಣವಾಗಿ ಪರಿಣಮಿಸಲಿದೆ ಎಂಬ ಮಾನವೀಯ ಸಂದೇಶ ಶಿಬಿರದ ಕೇಂದ್ರಬಿಂದುವಾಗಿತ್ತು.

ಇದನ್ನೂ ಓದಿ: Chikkaballapur News: ಜು.27-29ರವರೆಗೆ ಕಾಲಜ್ಞಾನಿ ಸದ್ಗುರು ಶ್ರೀಯೋಗಿನಾರೇಯಣ ಗುರುಪೂಜಾ ಸಂಗೀತ ಮಹೋತ್ಸವ

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಾಮಲಿಂಗೇ ಗೌಡ, "ರಕ್ತದಾನ ಪ್ರಕೃತಿಯೇ ಮಾನವನಿಗೆ ನೀಡಿರುವ ಅಪರೂಪದ ವರ. ಎಷ್ಟೇ ವಿಜ್ಞಾನ, ವೈದ್ಯಕೀಯ ಕ್ಷೇತ್ರ ಅಭಿವೃದ್ಧಿ ಹೊಂದಿದರೂ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಆದ್ದರಿಂದ ರಕ್ತದಾನವೇ ಜೀವದಾನ. ಕಳೆದ 30 ವರ್ಷಗಳಿಂದ ನಿರಂತರವಾಗಿ ಇಂತಹ ಜನೋಪ ಯೋಗಿ ಕಾರ್ಯ ನಡೆಸುತ್ತಿರುವ ಕೆ.ವಿ. ನವೀನ್ ಕಿರಣ್ ಹಾಗೂ ಅವರ ಕುಟುಂಬದ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಪುಣ್ಯದ ಕಾರ್ಯಕ್ರಮವನ್ನು ಉದ್ಘಾಟಿಸುವ ಅವಕಾಶ ದೊರೆತಿರುವುದು ನನ್ನ ಪೂರ್ವಜನ್ಮದ ಪುಣ್ಯ" ಎಂದು ಹೇಳಿದರು.

4237 ಯೂನಿಟ್ – ದಾಖಲೆಯಷ್ಟೇ ಅಲ್ಲ, ಸಾವಿರಾರು ಜೀವಗಳ ಆಶಾಕಿರಣ
ಈ ಶಿಬಿರದಲ್ಲಿ 4237 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಎರಡು ವರ್ಷಗಳ ಹಿಂದೆ ಚಿಂತಾಮಣಿ ಯಲ್ಲಿ ನಡೆದ 3246 ಯೂನಿಟ್ ಸಂಗ್ರಹದ ದಾಖಲೆಯನ್ನು ಹಿಂದಿಕ್ಕಿದೆ. ಈ ಸಾಧನೆಯೊಂದಿಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.
ದತ್ತಿ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಮಾತನಾಡಿ, "ದಾಖಲೆ ಮಾಡುವುದು ಸುಲಭವಾಗಿರಬಹುದು; ಆದರೆ ನಮ್ಮ ಸಂಸ್ಥೆ ನಿರ್ಮಿಸಿದ ದಾಖಲೆಯನ್ನು ನಾವೇ ಮುರಿಯುವುದು ಅತ್ಯಂತ ಕಷ್ಟ. ಈ ಸಾಧನೆ ನನ್ನದು ಅಲ್ಲ, ಸಾವಿರಾರು ಸ್ವಯಂಪ್ರೇರಿತ ರಕ್ತದಾನಿಗಳದ್ದು. ದತ್ತಿ ದಿನಾಚರಣೆ ಎಂದರೆ ರಕ್ತದಾನ ಎಂಬ ಸಂಸ್ಕೃತಿ ರೂಪುಗೊಂಡಿರುವುದು ನಮ್ಮ ದೊಡ್ಡ ಹೆಮ್ಮೆ. ಈ ಮಾನವೀಯ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುತ್ತೇವೆ" ಎಂದು ತಿಳಿಸಿದರು.

cbpm7kv

ಸಾವಿರಾರು ಜನರ ಕೈಜೋಡಿಕೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ (ಚಿಕ್ಕಬಳ್ಳಾಪುರ, ಬೆಂಗಳೂರು), ರೋಟರಿ ರಕ್ತನಿಧಿ ನಾಗವಾರ, ಸುರಕ್ಷಾ ರಕ್ತನಿಧಿ, ಸತ್ಯಸಾಯಿ ಆಸ್ಪತ್ರೆ ಮುದ್ದೇನಹಳ್ಳಿ, ಲಯನ್ಸ್ ರಕ್ತನಿಧಿ ಯಲಹಂಕ, ರಾಷ್ಟ್ರೋ ತ್ಥಾನ ರಕ್ತನಿಧಿ, ಎಸ್.ಎನ್.ಆರ್. ರಕ್ತನಿಧಿ ಕೋಲಾರ, ಯೂನಿವರ್ಸಲ್ ರಕ್ತನಿಧಿ ಸೇರಿದಂತೆ ಹಲವು ರಕ್ತನಿಧಿ ಸಂಸ್ಥೆಗಳು ಶಿಬಿರಕ್ಕೆ ಕೈಜೋಡಿಸಿದ್ದವು. ವಿಶೇಷವೆಂದರೆ, ಪಕ್ಷಾತೀತವಾಗಿ ವಿವಿಧ ರಾಜಕೀಯ, ಸಾಮಾಜಿಕ, ಸಾಹಿತ್ಯ ಹಾಗೂ ಉದ್ಯಮ ವಲಯದ ಗಣ್ಯರು ಶಿಬಿರಕ್ಕೆ ಆಗಮಿಸಿ ರಕ್ತದಾನಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಿದರು.

ಮಾನವೀಯತೆಯ ಹಬ್ಬ

ರಕ್ತದಾನ ಮಾಡಿದ ನಾಲ್ಕು ಸಾವಿರದ ಇನ್ನೂರ ಮುವತ್ತೇಳಕ್ಕೂ ಹೆಚ್ಚು ನಾಗರಿಕರಿಗೆ ಅಚ್ಚುಕಟ್ಟಾಗಿ ಉಪಾಹಾರ, ಊಟ, ನೀರು ಹಾಗೂ ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು. ಶಿಬಿರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೆ ನೂರಾರು ಸ್ವಯಂಸೇವಕರು ಸೇವೆಯಲ್ಲಿ ತೊಡಗಿಕೊಂಡಿದ್ದು, ಇಡೀ ಕಾರ್ಯಕ್ರಮ ಮಾನವೀಯತೆಯ ಹಬ್ಬದಂತೆ ಕಂಡುಬಂತು.