ಗೌರಿಬಿದನೂರು : ತಾಲೂಕಿನ ದಾರಿನಾಯಕನಪಾಳ್ಯ ಹೋಬಳಿ ಚೀಲಮ್ಮನಹಳ್ಳಿಯಲ್ಲಿ ಸುರಿದ ಜೋರು ಮಳೆ ಹಾಗು ಗಾಳಿಗೆ ಎಕರಗಳ ಗಟ್ಟಲೆ ಬಾಳೇ ತೋಟಗಳು ನೆಲ ಕಚ್ಚಿವೆ.
ಬಾಳೆ ರೈತ ಆನಂದರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ ಮೂರೂವರೆ ಎಕರೆ ಯಲ್ಲಿ ಸುಮಾರು 5 ಲಕ್ಷ ರೂಗಳು ಬಂಡವಳ ಹಾಕಿ ಬಾಳೆ ಬೆಳೆ ಹಾಕಿದ್ದಾರೆ.ಬೆಳೆ ಚನ್ನಾಗಿ ಬರುವ ಆಶಾಬಾವನೆ ಇತ್ತು. ಇದರಿಂದ ಸುಮಾರು 15 ಲಕ್ಷ ರೂಗಳು ಹುಟ್ಟುವಳಿ ಆಗಬಹುದೆಂಬ ನಿರೀಕ್ಷಯಲ್ಲಿ ಇವರಿದ್ದರು. ಆದರೆ ನಿನ್ನೆ ಅಕಾಲ ಮಳೆಗೆ ಬಾಳೆ ತೋಟ ಪೂರಾ ನಷ್ಟವಾಗಿದೆ. ಸರ್ಕಾರ ನಷ್ಟ ಪರಿಹಾರ ನೀಡಿ ರೈತರ ಕಷ್ಟಕ್ಕೆ ಸ್ಫಂದಿಸಬೇಕೆಂದರು.
ಶಿವಾರೆಡ್ಡಿ, ನಾರಾಯಣರೆಡ್ಡಿ, ಬಾಲಪ್ಪ, ಪ್ರಕಾಶ ರಾಜು ಮುಂತಾದ ರೈತರಿಗೂ ಇಂತಹುದೇ ನಷ್ಟವಾಗಿದೆ.
ಶಾಸಕ ಪುಟ್ಟ ಸ್ವಾಮಿಗೌಡ(MLA Putta Swamigowda) ಗುರುವಾರ ಮುಂಜಾನೆ ತೋಟಗಾರಿಕೆ ಅಧಿಕಾರಿಗಳೊಂದಿಗೆ ಚೀಲಮ್ಮನಹಳ್ಳಿಯಲ್ಲಿ ಗಾಳಿ,ಮಳೆಗೆ ನೆಲಕಚ್ಚಿದ ಬಾಳೆ ತೋಟಗಳನ್ನು ವೀಕ್ಷಿಸಿ ರೈತರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ನಷ್ಟ ಪರಿಹಾರ ಕೊಡಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಹೋಬಳೀಯಲ್ಲಿ ಸುಮಾರು 30 ಎಕರೆ ವಿಸ್ತೀರ್ಣ ದಲ್ಲಿ ಬಾಳೆ ಸುಮಾರು 60 ಎಕರೆ ವಿಸ್ತೀರ್ಣ ದಲ್ಲಿ ತರಕಾರಿ ಮುಂತಾದ ಬೆಳೆಗಳು ನಷ್ಟವಾಗಿದೆ.ಪ್ರಕೃತಿ ವಿಕೋಪ ಅಡಿ ಯಲ್ಲಿ ರೈತರಿಗೆ ಸರ್ಕಾರದ ಮಾನದಂಡಗಳಲ್ಲಿ ನಷ್ಟಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕಾಗಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಪುಟ್ಟಸ್ವಾಮಿಗೌಡ ತಿಳಿಸಿದರು.