ಚಿಂತಾಮಣಿ ತಾಲೂಕಿನ ಕೈವಾರ ಶ್ರೀ ಕ್ಷೇತ್ರಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ. ಎಚ್.ಮುನಿಯಪ್ಪ(KH Muniyappa) ಭೇಟಿ ನೀಡಿ, ಕೈವಾರ ತಾತಯ್ಯನವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಮುಂಗಡವಾಗಿ ರಾಜ್ಯಾದ್ಯಂತ 2 ಎರಡು ತಿಂಗಳ ಆಹಾರ ಧಾನ್ಯಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದ್ದು ಪ್ರತಿ ಪಡಿತರದಾರ ನ್ಯಾಯಬೆಲೆ ಅಂಗಡಿಗಳಲ್ಲಿ 2 ಬಾರಿ ಬಯೋಮೆಟ್ರಿಕ್ ನೀಡಿ,ಪಡಿತರ ಪಡೆಯಬೇಕೆಂದರು.
ಇದನ್ನೂ ಓದಿ: K.H. Muniyappa: ಸಚಿವ ಕೆ.ಹೆಚ್.ಮುನಿಯಪ್ಪ ಜನ್ಮದಿನ: ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ
ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನ್ಯಾಯ ಬೆಲೆ ಅಂಗಡಿಗಳ ಮೂಲಕ ಮೇ ಮತ್ತು ಜೂನ್ ತಿಂಗಳಿಗೆ ಅಂತಿಮ ಹಂಚಿಕೆ ಆದೇಶ ನಿರೀಕ್ಷಣೆ ಯಲ್ಲಿಟ್ಟು ಎಲ್ಲಾ ಜಿಲ್ಲೆಗಳ ಎಎವೈ ಪಡಿತರ ಚೀಟಿಗಳಿಗೆ ತಲಾ 14 ಕೆ.ಜಿ.ಅಕ್ಕಿ ಮತ್ತು 21 ಕೆ.ಜಿ. ರಾಗಿ ಹಾಗೂ ಆದ್ಯತಾ ಪಡಿತರ ಫಲಾನುಭವಿಗಳಿಗೆ ತಲಾ ೨ ಕೆ.ಜಿ ಅಕ್ಕಿ, 3 ಕೆ.ಜಿ ರಾಗಿ ವಿತರಿಸಲಾಗುವು ದೆಂದರು.
ಈ ಭಾಗದಲ್ಲಿ ಉತ್ತಮ ಮಳೆ,ಬೆಳೆಯಾಗಿ,ಜನತೆ ಶಾಂತಿ, ನೆಮ್ಮದಿ, ಸೌಹಾರ್ದ ಮತ್ತು ಸೋದರತ್ವ ದಿಂದ ಜೀವನ ನಡೆಸುವಂತಾಗಲೆAದು ಪ್ರಾರ್ಥಿಸಿದ್ದೇನೆಂದರು. ಮುಖಂಡ ಗ್ಯಾಸ್ ಶ್ರೀನಿವಾಸ್, ಸಂತೆಕಲ್ಲಹಳ್ಳಿ ಅತಾವುಲ್ಲಾ ಶ್ಯಾಮರಾಜ್ ಇತರರಿದ್ದರು.