ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ಪ್ಲಾಸ್ಟಿಕ್ ಬಳಕೆ ಮಾಡಿದಲ್ಲಿ ಅಂತವರ ಮೇಲೆ ಕ್ರಮ :  ನಗರಸಭೆ ಪರಿಸರ ಅಭಿಯಂತರ ಮೋಹನ್ ಕುಮಾರ್ ಎಚ್ಚರಿಕೆ

ಚಮಚ, ಕ್ಯಾರಿ ಬ್ಯಾಗ್, ಊಟದ ಮೇಜಿನ ಮೇಲೆ ಹರಡುವ ಹಾಳೆ, ಪ್ಲಾಸ್ಟಿಕ್‌ನಿಂದ ತಯಾರಾದ ಭಿತ್ತಿ ಪತ್ರ, ತೋರಣ, ಫ್ಲೆಕ್ಸ್ ಬಾವುಟಗಳು ಇವುಗಳೊಂದಿಗೆ ಥರ್ಮಾಕಾಲ್ ಮತ್ತು ಮೈಕ್ರೊ ಬಿಡ್ಸ್ನಿಂದ ತಯಾರಿಸಿದ ವಸ್ತುಗಳ ಮಾರಾಟ ಹಾಗೂ ದಾಸ್ತಾನು ಮಾಡದಂತೆ ಸೂಚಿಸಿದೆ ಎಂದರು. ಮತ್ತೊಮ್ಮೆ ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳು ಸಿಕ್ಕಿದರೆ ದಂಡದ ಜತೆಗೆ ಕಾನೂನು ರೀತಿ ಕ್ರಮ ಕೆ?ಗೊಳ್ಳುವ ಬಗ್ಗೆ ಎಚ್ಚರಿಕೆ ಸಹ ನೀಡಿದ್ದಾರೆ.

ನಗರದಲ್ಲಿ ವಿವಿಧ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.

ಶಿಡ್ಲಘಟ್ಟ : ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಕೆ ಮಾಡಿದಲ್ಲಿ ಅಂತವರ ಮೇಲೆ ಕ್ರಮ ಜರುಗಿಸುವು ದಾಗಿ ನಗರಸಭೆ ಪರಿಸರ ಅಭಿಯಂತರ ಮೋಹನ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ವಿವಿಧ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ದಿಡೀರ್ ದಾಳಿ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು ಅಂಗಡಿಕಾರರಿಗೆ ಅವರು ತಿಳಿವಳಿಕೆ ನೀಡಿದರು. ರಾಜ್ಯ ಸರಕಾರ ಈಗಾಗಲೇ ಪ್ಲಾಸ್ಟಿಕ್ ಮಾರಾಟ ನಿಷೇಧಿಸಿದೆ. ಪ್ರಾರಂಭದಲ್ಲಿ ಸೂಚನೆ ನೀಡುತ್ತಿದ್ದು, ಈ ನಂತರ ಪ್ಲಾಸ್ಟಿಕ್ ಮಾರಾಟ ಅಂಡಿಗಳ ಮೇಲೆ ಹಾಗೂ ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿಗಳ ಮೇಲೆ ಕ್ರಮ ಜರುಗಿಸಿ ದಂಡ ಆಕರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:Shidlaghatta News: 'ನಮ್ಮ ಬದುಕು ಸಮಾಜಕ್ಕೆ ಮಾದರಿಯಾಗಬೇಕು: ಪುಟ್ಟು ಆಂಜಿನಪ್ಪ

ಚಮಚ, ಕ್ಯಾರಿ ಬ್ಯಾಗ್, ಊಟದ ಮೇಜಿನ ಮೇಲೆ ಹರಡುವ ಹಾಳೆ, ಪ್ಲಾಸ್ಟಿಕ್‌ನಿಂದ ತಯಾರಾದ ಭಿತ್ತಿ ಪತ್ರ, ತೋರಣ, ಫ್ಲೆಕ್ಸ್ ಬಾವುಟಗಳು ಇವುಗಳೊಂದಿಗೆ ಥರ್ಮಾಕಾಲ್ ಮತ್ತು ಮೈಕ್ರೊ ಬಿಡ್ಸ್ನಿಂದ ತಯಾರಿಸಿದ ವಸ್ತುಗಳ ಮಾರಾಟ ಹಾಗೂ ದಾಸ್ತಾನು ಮಾಡದಂತೆ ಸೂಚಿಸಿದೆ ಎಂದರು.

ಮತ್ತೊಮ್ಮೆ ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳು ಸಿಕ್ಕಿದರೆ ದಂಡದ ಜತೆಗೆ ಕಾನೂನು ರೀತಿ ಕ್ರಮ ಕೆ?ಗೊಳ್ಳುವ ಬಗ್ಗೆ ಎಚ್ಚರಿಕೆ ಸಹ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಸಂಜು ಕುಮಾರ್, ನರೇಶ್, ಕೃಷ್ಣಮೂರ್ತಿ,ಸಂಜಯ್ ಕುಮಾರ್, ಸೇರಿದಂತೆ ನಗರಸಭೆ  ಸಿಬ್ಬಂದಿಗಳು ಹಾಜರಿದ್ದರು.