Pawan kalyan Birthday Celebration: ನಟ ಪವನ್ ಕಲ್ಯಾಣ್ ಹುಟ್ಟು ಹಬ್ಬ ಆಚರಣೆ
ಪವನ್ ಕಲ್ಯಾಣ್ ಅವರು ಆಂದ್ರಪ್ರದೇಶದಲ್ಲಿ ಉಪಮುಖ್ಯಮಂತ್ರಿಗಳಾಗಿ ಜನಪರ ಕಾರ್ಯಗಳನ್ನು ಮಾಡುತ್ತಾ ಜೊತೆಗೆ ಸನಾತನ ಧರ್ಮವನ್ನು ಎತ್ತಿ ಹಿಡಿಯುತ್ತಾ ಜನ ಕಲ್ಯಾಣ ಕ್ಕಾಗಿ ಶ್ರಮಿಸುತ್ತಿದ್ದಾರೆ, ಪವನ್ ಕಲ್ಯಾಣ್ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಾಗಿ ಹಾಗೂ ದೇಶದ ರಾಜಕೀಯ ವ್ಯವಸ್ಥೆ ಯಲ್ಲಿ ಉತ್ತುಂಗ ಸ್ಥಾನಕ್ಕೆ ಏರಬೇಕೆಂದು ಹಾರೈಸಿದರು

-

ಗೌರಿಬಿದನೂರು: ನೆರೆಯ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಚಿತ್ರ ನಟ ಕುಣಿದಾಲ ಪವನ್ ಕಲ್ಯಾಣ್ ಅವರ 54ನೇ ಹುಟ್ಟುಹಬ್ಬವನ್ನು ಮರಿಗಮ್ಮ ದೇವಸ್ಥಾನದ ಆವರಣದಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿ ಮತ್ತು ತಾಲೂಕು ಬಲಿಜ ಸಂಘದ ವತಿಯಿಂದ ಆಚರಿಸಲಾಯಿತು.
ಇದನ್ನೂ ಓದಿ: Gauribidanur News: ರಕ್ತದಾನದಿಂದ ಜೀವ ಉಳಿಸಿದ ಶ್ರೇಯಸ್ಸು ನಮ್ಮದಾಗಲಿದೆ: ಪಿಎಸ್‌ಐ ರಮೇಶ್ ಗುಗ್ಗರಿ ಅಭಿಮತ
ನಗರಸಭೆ ಮಾಜಿ ಸದಸ್ಯ ಹಾಗೂ ತಾಲೂಕು ಬಲಜ ಸಂಘದ ಕಾರ್ಯದರ್ಶಿ ಕೆಎಸ್ ಅನಂತರಾಜು ಮಾತನಾಡುತ್ತಾ ಪವನ್ ಕಲ್ಯಾಣ್ ಅವರು ಆಂದ್ರಪ್ರದೇಶದಲ್ಲಿ ಉಪಮುಖ್ಯಮಂತ್ರಿಗಳಾಗಿ ಜನಪರ ಕಾರ್ಯಗಳನ್ನು ಮಾಡುತ್ತಾ ಜೊತೆಗೆ ಸನಾತನ ಧರ್ಮವನ್ನು ಎತ್ತಿ ಹಿಡಿಯುತ್ತಾ ಜನ ಕಲ್ಯಾಣ ಕ್ಕಾಗಿ ಶ್ರಮಿಸುತ್ತಿದ್ದಾರೆ, ಪವನ್ ಕಲ್ಯಾಣ್ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಾಗಿ ಹಾಗೂ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಉತ್ತುಂಗ ಸ್ಥಾನಕ್ಕೆ ಏರಬೇಕೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಕೆಎಸ್ ಅಶೋಕ್ ಆರ್.ವೆಂಕಟೇಶ್ ರಿಲಯನ್ಸ್ ವೆಂಕಟೇಶ್ ರಾಮ್ ಬಾಬು ಫೋಟೋ ಶ್ರೀನಿವಾಸ್ ವೆಂಕಟೇಶ್ ನಾರಾಯಣಸ್ವಾಮಿ ರೈಲ್ವೆ ನಾಗರಾಜ ಶ್ರೀನಿವಾಸ್, ರಮೇಶ್, ವೆಂಕಟಾದ್ರಿ, ರಘು, ಸುಪ್ರೀತ್ ಹೀದ್ದು, ಯಾಸಿನ್, ಚಿನ್ನ, ಸುಕೃತ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.