ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MP Dr.K.Sudhakar: ಬರಗಾಲಕ್ಕೆ ಸೂಕ್ತ ಸಿದ್ಧತೆ ಮಾಡಬೇಕು, ಮೋಡ ಬಿತ್ತನೆ ಮಾಡುವುದಾದರೆ ಅಧ್ಯಯನ ನಡೆಸಲಿ: ಸಂಸದ ಡಾ.ಕೆ.ಸುಧಾಕರ್‌

ಎಸ್‌ಐಆರ್‌ ನಡೆಸುವ ಅಧಿಕಾರಿಗಳು ಮತದಾರರ ಮನೆಗೆ ಹೋಗಬೇಕೆ ಹೊರತು ಮಸೀದಿ, ಕಲ್ಯಾಣ ಮಂಟಪ, ಕಚೇರಿಗಳಲ್ಲಿ ಅರ್ಜಿ ತುಂಬಿಸುವ ಕೆಲಸ ಮಾಡಬಾರದು. ಅಧಿಕಾರಿಗಳು ಬಿಎಲ್‌ಎ ಕಾರ್ಯಕರ್ತರನ್ನು ಒಟ್ಟಿಗೆ ಕರೆದುಕೊಂಡು ಹೋಗಬಹುದು. ಆದರೆ ಸರ್ಕಾರದ ಒತ್ತಡಕ್ಕೆ ಒಳಗಾಗಿ ಯಾವುದೇ ಜಾಗಗಳಲ್ಲಿ ಅರ್ಜಿ ತುಂಬಿಸಬಾರದು. ಮತದಾರರ ಮನೆಗೆ ಭೇಟಿ ನೀಡಬೇಕು

ತನ್ನ ಮೇಲೆ ವಿಶ್ವಾಸವಿಲ್ಲದ ರಾಜಕಾರಣಿ ಜಾತಿಯ ಆಶ್ರಯ ಪಡೆಯಲು ಮುಂದಾಗುತ್ತಾನೆ

ಚಿಕ್ಕಬಳ್ಳಾಪುರ : ರಾಜ್ಯ ಸರ್ಕಾರ ಮೋಡ ಬಿತ್ತನೆ ಕುರಿತು ಅಧ್ಯಯನ ಮಾಡಿ ಕ್ರಮ ವಹಿಸಬೇಕು ಹಾಗೂ ಬರಗಾಲಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌(MP Dr. K. Sudhakar) ಆಗ್ರಹಿಸಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಹುದ್ದೆಗೆ ಯಾರೋ ಬರುವುದಕ್ಕೂ, ಮಳೆ ಕೊರತೆ ಉಂಟಾಗುವುದಕ್ಕೂ ಸಂಬಂಧವಿಲ್ಲ. ಅದನ್ನು ನಾನು ನಂಬುವುದೂ ಇಲ್ಲ ಎಂದರು. 

ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌(Chief Minister D K Shivkumar) ಮಳೆ ಕೊರತೆಗೆ ಸೂಕ್ತವಾದ ಸಿದ್ಧತೆ ಕೈಗೊಳ್ಳಬೇಕು. ಮೋಡ ಬಿತ್ತನೆ ಮಾಡುವುದಿದ್ದರೆ ಅದರ ಬಗ್ಗೆ ಅಧ್ಯಯನ ನಡೆಸಿ ಕ್ರಮ ವಹಿಸಬೇಕು. ರೈತರಿಗೆ ಪೂರಕವಾದ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗೆ ಇನ್ನೂ ಸಚಿವರು ನೇಮಕವಾಗಿಲ್ಲ. ಆದ್ದರಿಂದ ಮುಖ್ಯಮಂತ್ರಿಯವರು ಮೊದಲು ಸಂಪುಟದಲ್ಲಿ ಸಚಿವರ ನೇಮಕ ಮಾಡಿ ಬರಗಾಲಕ್ಕೆ ಮೊದಲು ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಇದನ್ನೂ ಓದಿ: Dr K Sudhakar: ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರ ವಿರುದ್ಧ ಪ್ರಕರಣ ದಾಖಲಿಸಬೇಕು, ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ: ಸಂಸದ ಡಾ.ಕೆ.ಸುಧಾಕರ್

ಎಸ್‌ಐಆರ್‌ ನಡೆಸುವ ಅಧಿಕಾರಿಗಳು ಮತದಾರರ ಮನೆಗೆ ಹೋಗಬೇಕೆ ಹೊರತು ಮಸೀದಿ, ಕಲ್ಯಾಣ ಮಂಟಪ, ಕಚೇರಿಗಳಲ್ಲಿ ಅರ್ಜಿ ತುಂಬಿಸುವ ಕೆಲಸ ಮಾಡಬಾರದು. ಅಧಿಕಾರಿಗಳು ಬಿಎಲ್‌ಎ ಕಾರ್ಯಕರ್ತರನ್ನು ಒಟ್ಟಿಗೆ ಕರೆದುಕೊಂಡು ಹೋಗಬಹುದು. ಆದರೆ ಸರ್ಕಾರದ ಒತ್ತಡಕ್ಕೆ ಒಳಗಾಗಿ ಯಾವುದೇ ಜಾಗಗಳಲ್ಲಿ ಅರ್ಜಿ ತುಂಬಿಸಬಾರದು. ಮತದಾರರ ಮನೆಗೆ ಭೇಟಿ ನೀಡಬೇಕು ಎಂದರು. 

ತನ್ನ ಮೇಲೆ ವಿಶ್ವಾಸವಿಲ್ಲದ ರಾಜಕಾರಣಿ ಜಾತಿಯ ಆಶ್ರಯ ಪಡೆಯಲು ಮುಂದಾಗುತ್ತಾನೆ. ಜಾತಿ ಎಂಬುದು ರಕ್ಷಣಾ ಕವಚ ಆಗಬಾರದು. ಕೈವಾರ ತಾತಯ್ಯನವರ ಮೇಲೆ ನನಗೂ ಭಕ್ತಿ ಇದೆ. ಬಲಿಜ ಸಮುದಾಯದ ಎಲ್ಲರೂ ಈ ಕೆಲಸ ಮಾಡಿಲ್ಲ. ಕೆಲವರು ಮಾತ್ರ ಇಂತಹ ಕೆಲಸ ಮಾಡಿದ್ದಾರೆ. ಬಲಿಜ ಸಮುದಾಯದ ಅನೇಕ ಮುಖಂಡರು ನನ್ನ ಜೊತೆಗಿದ್ದಾರೆ. ನಾನು ಎಲ್ಲ ಸಮುದಾಯದ ಜನರ ಜೊತೆ ಸಹೋದರನಂತೆ ಇದ್ದೇನೆ. ಅವರಿಗೆ ತಮ್ಮದೇ ಜಾತಿಯವರ ಬೆಂಬಲವಿಲ್ಲ ಎಂದರು. 

ಅಯೋಧ್ಯೆ ರಾಮಮಂದಿರದಲ್ಲಿ ಹುಂಡಿ ಹಣದ ಕಳ್ಳತನ ನಡೆದಿರುವುದು ದುರದೃಷ್ಟಕರ. ಇದರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಕ್ರಮ ವಹಿಸಲಿದೆ. ಆದರೆ ಮಂದಿರಕ್ಕೆ ಹೋಗದ ಕಾಂಗ್ರೆಸ್‌ ನಾಯಕರು ಈಗ ರಾಮನ ಮೇಲೆ ಭಕ್ತಿ ತೋರಿಸುತ್ತಿದ್ದಾರೆ.

ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಕೋರ್ಟ್‌ನಲ್ಲಿ ವಾದಿಸಲು ಮುಂದಾಗಿದ್ದ ಕಾಂಗ್ರೆಸ್‌, ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ಕಳ್ಳತನ ಮಾಡಿದವರ ವಿರುದ್ಧ ಕಠಿಣ ಕ್ರಮ ವಹಿಸಬೇಕೆ ಹೊರತು ರಾಜಕೀಯ ಮಾಡಬಾರದು. ಈ ಹಿಂದೆಯೂ ಅನೇಕ ದೇವಾಲಯಗಳಲ್ಲಿ ಇಂತಹ ಘಟನೆ ನಡೆದಿದೆ. ಈ ಘಟನೆ ಸಿಬ್ಬಂದಿಯ ಹಂತದಲ್ಲೇ ನಡೆದಿದೆ ಎಂದರು.