ಚಿಕ್ಕಬಳ್ಳಾಪುರ: ಹಿಂದೂ ಧರ್ಮದಲ್ಲಿ ಆದಿ ಗುರು ಶಂಕರಾಚಾರ್ಯರಿಗೆ ವಿಶೇಷ ಸ್ಥಾನವಿದೆ. ಅವರ ಸಾಧನೆಗಳು ಹಾಗೂ ವಿಚಾರ ದಾರೆಗಳು, ಸರ್ವಕಾಲಿಕವಾಗಿ ಜೀವಂತವಾಗಿರಲಿವೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಶ್ರಾಯ ದಲ್ಲಿ ನಗರದ ನಗದಿ ಕೃಷ್ಣಪ್ಪ ವೇದ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ದರು.
ಶ್ರೀ ಶಂಕರಾಚಾರ್ಯ ತಮ್ಮದೇ ಆದ ಅದ್ವೈತ ಸಿದ್ದಾಂತವನ್ನು ಭಾರತಾದ್ಯಂತ ಪ್ರಚುರ ಪಡಿಸುವ ಮೂಲಕ ಹಿಂದೂ ಧರ್ಮಕ್ಕೆ ನೀಡಿದ ಕೊಡುಗೆಯು ಅಪಾರವಾದುದು ಅವರು ಚಿಕ್ಕ ವಯಸ್ಸಿ ನಲ್ಲಿಯೇ 4 ವೇದಗಳನ್ನು ಅಧ್ಯಯನ ಮಾಡಿ ಎಲ್ಲಾ ಶಾಸ್ತ್ರಗಳಲ್ಲಿ ಜ್ಞಾನ ಪಡೆದಿದ್ದರು. ಬಜಗೋ ವಿಂದಂ, ವಿವೇಕ ಚೂಡಾಮಣಿ ಇನ್ನು ಮುಂತಾದ ಪುಸ್ತಕಗಳನ್ನು ರಚಿಸಿ ಮಹಾನ್ ತತ್ವಜ್ಞಾನ ವನ್ನು ಪ್ರಸಾರ ಮಾಡಿದ್ದಾರೆ. 8ನೇ ಶತಮಾನದ ಅವರ ಕೊಡುಗೆಯನ್ನು 21ನೇ ಶತಮಾನದಲ್ಲೂ ಸ್ಮರಿಸುವಂತಹ ಆದರ್ಶಗಳನ್ನು ನೀಡಿದ್ದಾರೆ ಎಂದರೆ ಅದಕ್ಕೆ ಅವರ ಬೋಧನೆ ಗಳ ಸತ್ವ ಎಂತದ್ದು ಎಂಬುದು ಗೊತ್ತಾಗಲಿದೆ ಎಂದು ಬಣ್ಣಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್ ಮಾತನಾಡಿ, ಶಂಕರಾಚಾರ್ಯರು ಭಕ್ತಿ ಮತ್ತು ಜ್ಞಾನ ಮಾರ್ಗಕ್ಕೆ ಹೆಚ್ಚು ಒತ್ತು ನೀಡಿದ್ದರು. ಜ್ಞಾನಕ್ಕಿಂತ ಮಿಗಿಲಾದದ್ದು ಜಗತ್ತಿನಲ್ಲಿ ಬೇರೊಂದಿಲ್ಲ. ಹಣಕ್ಕೆ ಹೆಚ್ಚು ಮಹತ್ವ ನೀಡಬಾರದು. ತಮ್ಮ ಮೂಲ ಭೂತ ಅಗತ್ಯಗಳನ್ನು ಪೂರೈಸಿದ ಮೇಲೆ ಮಿಗಿಲಾದ ಸಂಪತ್ತನ್ನು ಅಗತ್ಯ ಇರುವವರಿಗೆ, ಅಶಕ್ತರಿಗೆ ದಾನ ಮಾಡಿ ನೆಮ್ಮದಿ ಜೀವನ ಕಟ್ಟಿಕೊಳ್ಳಿ ಎಂದು ಸಾರಿದ ಅವರು ಭಾರತದಾದ್ಯಂತ ಸಂಚರಿಸಿ ಹಿಂದೂ ಧರ್ಮವನ್ನು ಪ್ರಚಾರ ಮಾಡಿದರು. ದೇಶದ ನಾಲ್ಕು ಭಾಗಗಳಲ್ಲಿ ಮಠಗಳನ್ನು ಸ್ಥಾಪಿಸಿ ದರು. ಶಂಕರಾಚಾರ್ಯರು ದೇಶದ ನಾಲ್ಕು ಭಾಗಗಳಲ್ಲಿ ಹಿಂದೂ ಧರ್ಮದ ಮಠಗಳನ್ನು ಸ್ಥಾಪಿಸಿ ದರು. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ಸಾಧನೆ ಗೈದರು. ಹಿಂದೂ ಧರ್ಮ ಪುನರು ಜ್ಜೀವನದಲ್ಲಿ ಪ್ರಮುಖಪಾತ್ರ ವಹಿಸಿ ಮಹಾನ್ ಸಾಧಕರಾಗಿದ್ದಾರೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸಂಸ್ಕೃತ ಪಾಠಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಉಷಾ ದೇವಿ ಮಾತನಾಡಿ, ಭಾರತದಲ್ಲಿ ಹಿಂದೂ ಧರ್ಮದ ಜ್ಯೋತಿಯನ್ನು ನಿರಂತರವಾಗಿ ಬೆಳಗುವ ನಿಟ್ಟಿನಲ್ಲಿ ಜಾಗೃತಗೊಳಿಸುವ ಕೆಲಸವನ್ನು ಮಾಡಿದವರು ಜಗದ್ಗುರು ಆದಿ ಶಂಕಾರಾಚಾರ್ಯರು. ವಿವಿಧ ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ನರಳುತ್ತಿದ್ದ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಿಂದೂಗಳನ್ನು ಒಗ್ಗೂಡಿಸಲು ಮತ್ತು ಹಿಂದುತ್ವದ ಅರಿವನ್ನು ಜನರಿಗೆ ಮೂಡಿಸುವ ಸಲುವಾಗಿ ಶಂಕರಾಚಾರ್ಯರು ಭಾರತದಾದ್ಯಂತ ಸಂಚರಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಮಹತ್ತರವಾದ ಕೆಲಸಗಳನ್ನು ಮಾಡಿದರು. ಸನಾತನ ಧರ್ಮದ ಏಳ್ಗೆಗಾಗಿ ಶ್ರಮಿಸಿದ್ದಾರೆ.ಇಂದಿಗೂ ಸನಾತನ ಧರ್ಮವನ್ನು ಗುರುತಿಸಲಾಗುತ್ತಿದೆಯೆಂದರೆ ಅದಕ್ಕೆ ಶಂಕರಾಚಾರ್ಯರು ಕಾರಣ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿ ಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರಶ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ ಎಂ ರವಿಕುಮಾರ್, ಸಮುದಾಯದ ಮುಖಂಡರಾದ ಕೆ ನಾಗಭೂಷಣ್ ರಾವ್, ಪಿ .ಆರ್ ಪ್ರಕಾಶ್, ವೇಣುಗೋಪಾಲ್, ವೆಂಕಟೇಶ್ ಮೂರ್ತಿ, ರಮೇಶ್, ಡಿ.ಎಸ್, ರಮೇಶ್ .ಸಿ.ಎ, ನಳಿನಕುಮಾರಿ, ಜಯ ಪ್ರಕಾಶ್, ಶೇಷಭಟ್, ಲಕ್ಷ್ಮೀನಾರಾಯಣ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.