ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಕೋಡಿಹಳ್ಳಿ ಚಂದ್ರಶೇಖರ್ ಬಣದ ಕೆಐಎಡಿಬಿ ರೈತಪರ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀಮಠದ ಅಭಯ

ಜಿಲ್ಲಾಡಳಿತ ಭವನದ ಎದುರು ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಕೆಐಎಡಿಬಿ ಭೂ ಸ್ವಾಧೀನಕ್ಕೆ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂಹಸಿರು ಸೇನೆ, ಕನ್ನಡಪರ, ದಲಿತಪರ ಹೋರಾಟ ಗಾರರು ನಡೆಸುತ್ತಿರುವ ಅನಿರ್ದಿಷ್ಠಾವದಿ ಹೋರಾಟ ಬೆಂಬಲಿಸಿ 66ನೇ ದಿನವಾದ ಬುಧವಾರ  ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಪರವಾಗಿ ಅವರ ಪ್ರತಿನಿಧಿಯಾಗಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀಮಂಗಳನಾಥ ಸ್ವಾಮೀಜಿ ಭಾಗವಹಿಸಿ ಮಾತನಾಡಿದರು

ಕೋಡಿಹಳ್ಳಿ ಚಂದ್ರಶೇಖರ್ ಬಣದ ಕೆಐಎಡಿಬಿ ರೈತಪರ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀಮಠದ ಅಭಯ. ರೈತರ ಸಂಕಷ್ಟಗಳಿಗೆ ಆದಿಚುಂಚನಗಿರಿ ಮಹಾಸಂಸ್ಥಾನಮಠ ಸದಾಜೊತೆಗಿರುತ್ತದೆ  ಎಂದು ಶ್ರೀ ಮಂಗಳಾನಾಥ ಸ್ವಾಮೀಜಿ ಘೋಷಣೆ ಮಾಡಿದರು.

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ ರೈತರ ಫಲವತ್ತಾದ ಕೃಷಿ ಭೂಮಿ ಸರಿಸುಮಾರು 2823 ಎಕರೆ ಭೂಮಿಯನ್ನು ಕೆಐಎಡಿಬಿ ಭೂ ಸ್ವಾಧೀನಕ್ಕೆ ವಿರೋಧಿಸಿ ಜಿಲ್ಲಾಡಳಿತ ಭವನದ ಎದುರು 66 ದಿನಗಳಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದರೂ ಸಹಾ ಸರ್ಕಾರ ಭೂಸ್ವಾಧೀನ ಮಾಡಿಯೇ ತೀರುವುದಾಗಿ ಹಠಕ್ಕೆ ಬಿದ್ದು ರೈತರಿಗೆ ತೊಂದರೆ ನೀಡುತ್ತಿದೆ. ಆದರೆ ರೈತರ ಸಂಕಷ್ಟಗಳಿಗೆ ಆದಿ ಚುಂಚನಗಿರಿ ಮಠ ಸದಾ ಜೊತೆಗಿರುತ್ತದೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಮಠದ ಕಾರ್ಯದರ್ಶಿ ಮಂಗಳಾನಾಥ ಸ್ವಾಮೀಜಿ ಘೋಷಿಸಿದರು.    

ಜಿಲ್ಲಾಡಳಿತ ಭವನದ ಎದುರು ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಕೆಐಎಡಿಬಿ ಭೂ ಸ್ವಾಧೀನಕ್ಕೆ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂಹಸಿರು ಸೇನೆ, ಕನ್ನಡಪರ, ದಲಿತಪರ ಹೋರಾಟಗಾರರು ನಡೆಸುತ್ತಿರುವ ಅನಿರ್ದಿಷ್ಠಾವದಿ ಹೋರಾಟ ಬೆಂಬಲಿಸಿ 66ನೇ ದಿನವಾದ ಬುಧವಾರ  ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಪರವಾಗಿ ಅವರ ಪ್ರತಿನಿಧಿಯಾಗಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀಮಂಗಳನಾಥ ಸ್ವಾಮೀಜಿ ಭಾಗವಹಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಪೊಲೀಸ್ ಬಲ ಬಳಸಿ ಹೋರಾಟ ಹತ್ತಿಕ್ಕುವುದು ಸಂವಿಧಾನಕ್ಕೆ ಮಾಡುವ ದ್ರೋಹ : ಭಾಸ್ಕರ್ ಅಂಕಾಲಮಡುಗು ಶಿವಾರೆಡ್ಡಿ

ಈ 13 ಹಳ್ಳಿಗಳ 2823 ಎಕರೆ ಫಲವತ್ತಾದ ಕೃಷಿಭೂಮಿಗೆ ಸಂಬಂಧಿಸಿದಂತೆ ಸರಿಸುಮಾರು 1200 ರಿಂದ 1300 ಕುಟುಂಬಗಳು ಜೀವನ ನಡೆಸುತ್ತಿದ್ದಾರೆ ಹಾಗೂ ಇಲ್ಲಿನ ಭೂಮಿಯು ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಫಲವತ್ತತೆಯಲ್ಲಿ ಬಹಳ ಉತ್ತಮ ಫಲಿತಾಂಶವನ್ನು ಹೊಂದಿದೆ. ಇಲ್ಲಿನ ರೈತರು ದೇಶ ವಿದೇಶಗಳಲ್ಲಿ ಬೆಳೆಯುವಂತಹ ಹಣ್ಣು ಹೂವು ತರಕಾರಿ ಬೆಳೆಯುತ್ತಿದ್ದಾರೆ ಹಾಗೂ ಸುಮಾರು 530 ಎಕರೆ ಪ್ರದೇಶದಲ್ಲಿ ರೇಷ್ಮೆಯನ್ನು ಬೆಳೆಯುತ್ತಿದ್ದಾರೆ. ಕೆಐಎಡಿಬಿ ವಶಪಡಿಸಿ ಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದರು.        

ಯಾಕೆಂದರೆ 2823 ಎಕರೆ ಪೈಕಿ ಸುಮಾರು 800 ರಿಂದ 900 ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಹಾಗೂ 600 ರಿಂದ 700 ಎಕರೆ ಪ್ರದೇಶದಲ್ಲಿ ಕೃಷಿ ಆಧಾರಿತ ರಾಗಿ ಜೋಳ ಇವೆಲ್ಲವನ್ನು ಬೆಳೆಯುತ್ತಿದ್ದಾರೆ ಹಾಗೂ 300 ಎಕರೆ ಭೂಮಿಯಲ್ಲಿ ಮಾವು ಗೋಡಂಬಿ, ಶುಂಠಿ ಬೆಳೆಯುತ್ತಿದ್ದಾರೆ.

ಇದಕ್ಕೆ ಪೂರಕವಾಗಿ  ಮುಖ್ಯಮಂತ್ರಿಗಳ ವಿಶೇಷ  ಅನುದಾನದ ಅಡಿಯಲ್ಲಿ ಶಿಡ್ಲಘಟ್ಟ ತಾಲೂಕಿ ನಲ್ಲಿ 200 ಕೋಟಿ ರೂಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ಪ್ರಾರಂಭವಾಗುತ್ತಿದೆ. ಇಂತಹ ಹೊತ್ತಲ್ಲಿ ಭೂಮಿ ಪಡೆಯುವುದು ಸರಿಯಲ್ಲ ಎಂದರು.

5b

ಜಂಗಮಕೋಟೆ ಹೋಬಳಿಯಲ್ಲಿ ಭೂಮಿ ಕಳೆದುಕೊಂಡರೆ ಬಹಳ ಪ್ರಮುಖವಾಗಿ ರೇಷ್ಮೆ ಬೆಳೆಗಾರರು ಕಣ್ಮರೆಯಾಗುತ್ತಾರೆ  ಹಾಗೂ ರೇಷ್ಮೆ ಬೆಳೆಗಾರರು ಕುಂಠಿತವಾದರೆ ರೇಷ್ಮೆ ನೂಲು ಬಿಚ್ಚಾಣಿಕದಾರರು ಬೀದಿಗೆ ಬರುತ್ತಾರೆ. ವ್ಯವಸಾಯವನ್ನೇ ಆಧಾರಿತವಾಗಿ ನಂಬಿರುವAತಹ ರೈತರು ಸಾವಿರಾರು ಸಂಖ್ಯೆಯಲ್ಲಿ ಬೀದಿಗೆ ಬರುತ್ತಾರೆ.

ಆದ್ದರಿಂದ ಇಲ್ಲಿನ ಫಲವತ್ತಾದ ಭೂಮಿಯನ್ನು ರೈತರಿಗೆ ಉಳಿಸಿಕೊಟ್ಟು ಸುಮಾರು 1200 ರಿಂದ 1300 ರೈತರ ಕುಟುಂಬಗಳು ಹಾಗೂ 500 ರಿಂದ 600 ಕೂಲಿ ಕಾರ್ಮಿಕ ಕುಟುಂಬಗಳು
ಮತ್ತು 400 ರಿಂದ 500 ರೇಷ್ಮೆ ನೂಲು ಬಿಚ್ಚಾಣಿಕೆ ದಾರ ಕುಟುಂಬಗಳು, ಬೀದಿ ಪಾಲಾಗುವುದನ್ನು ತಪ್ಪಿಸಬೇಕೆಂದು ಮುಖ್ಯಮಂತ್ರಿಗಳೆಗೆ ಜಿಲ್ಲಾಡಳಿತದ ಮೂಲಕ ಮನವಿ ಮಾಡುತ್ತಿದ್ದು ಈ ಮನವಿ ಯನ್ನು ಪರಿಗಣಿಸಬೇಕೆಂದು ಕೋರಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಲ್ಲಿಸುವಂತೆ ಮನವಿ ಸಲ್ಲಿಸಿದರು.

ಜೂನ್-5ಕ್ಕೆ ವಿಧಾನಸೌಧ ಮುತ್ತಿಗೆ
ರಾಜ್ಯ ಸರಕಾರ ಕೈಗಾರಿಕೆ ಹೆಸರಿನಲ್ಲಿ ರೈತರ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ. ಕಳೆದ 20 ವರ್ಷಗಳಿಂದ ಲಕ್ಷಾಂತರ ಎಕರೆ ಭೂಮಿ ಕಬಳಿಕೆಯಲ್ಲಿ ಶೇ.25ರಷ್ಟು ಭೂಮಿಯನ್ನು ಕೈಗಾರಿಕೆಗೆ ಬಳಸಿಲ್ಲ. ಹೀಗಾಗಿ ಇದೊಂದು ಹಗಲು ದರೋಡೆಯಾಗಿದೆ. ಹೊಸ ಸೇರ್ಪಡೆಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿಯ 13 ಹಳ್ಳಿ 2823 ಎಕರೆ ಫಲವತ್ತಾದ ಭೂಮಿ ಫಲವತ್ತಾದ ಭೂಮಿಯಾಗಿದೆ. ಇಲ್ಲಿ ಹೂವು, ಹಣ್ಣು, ಶುಂಠಿ ಮಾವು ಗೋಡಂಬಿ ಜತೆಗೆ ರೇಷ್ಮೆ, ತೆಂಗು ಅಡಿಕೆ ಬೆಳೆಯುತ್ತಾರೆ. ಇಂತಹ ಭೂಮಿಯಲ್ಲಿ ಕೈಗಾರಿಕೆ ಮಾಡುವುದು ತರವಲ್ಲ. ಇದನ್ನು ಕೈಬಿಡಿ ಎಂದು 23 ತಿಂಗಳಿಂದ ಹೋರಾಟ ಮಾಡುತ್ತಿದ್ದೇವೆ. ಕೆಲದಿನಗಳ ಹಿಂದೆ ಜಿಲ್ಲಾ ಮಂತ್ರಿಗಳ ಗಮನ ಸೆಳೆಯಲು, ಹೋರಾಟದ ವೇದಿಕೆಗೆ ಬಂದು ರೈತರ ಆತಂಕ ದೂರ ಮಾಡಲು ಒತ್ತಾಯಿಸಿದಾಗ ರಾಜ್ಯ ಸರಕಾರ ರೈತರ ಮೇಲೆ ಬಲಪ್ರಯೋಗ ಮಾಡಿದ್ದು ಸರಿಯಲ್ಲ. ಸರಕಾರ ನಡೆಸುತ್ತಿರುವ ಬಲವಂತದ ಭೂ ಕಬಳಿಕೆ ನಿಲ್ಲಿಸಬೇಕು. 20213ರ ಭೂಸ್ವಾಧೀನ ಕಾಯ್ದೆ ಮುಂದು ವರೆಸಬೇಕು.ಇದಕ್ಕೆ ತಂದಿರುವ ತಿದ್ದುಪಡಿ ಕೈಬಿಟ್ಟು ರೈತರನ್ನು ಭಯಮುಕ್ತರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಚೇರಿಯಿಂದ 10 ಸಾವಿರ ಬೈಕ್ ರ‍್ಯಾಲಿಯೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎನ್ನುವುದು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತಾಗಿದೆ.

ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಅಧ್ಯಕ್ಷ ಕೋಡಿಹಳ್ಳಿ ಚಂದ್ರ ಶೇಖರ್, ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಾಜಿಶಾಸಕ ಎಂ.ರಾಜಣ್ಣ, ಮುಖಂಡರಾದ ಸೀಕಲ್ ಆನಂದಗೌಡ, ಕಂಪನಿ ದೇವರಾಜ್, ಮಂಜುನಾಥರೆಡ್ಡಿ, ಕೆ.ಸಿ.ರಾಜಾಕಾಂತ್,  ಪರಮೇಶ್, ಕನ್ನಡ ಸೇನೆಯ ತಿಪ್ಪೇನಹಳ್ಳಿ ನಾರಾಯಣಸ್ವಾಮಿ,  ವಿ.ರವಿಕುಮಾರ್,ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಮನಾಥರೆಡ್ಡಿ, ನೆಲಮಾಕನಹಳ್ಳಿ ಗೋಪಾಲ್, ಬಿ.ನಾರಾಯಣಸ್ವಾಮಿ, ದೇವರಾಜ್, ವೇಣುಗೋಪಾಲ್, ಮಂಜುನಾಥ್, ನರಸಿಂಹಮೂರ್ತಿ, ಅಶ್ವಥ್, ಸೊಣ್ಣಪ್ಪರೆಡ್ಡಿ, ಲಕ್ಷ್ಮೀನಾರಾಯಣ,  ಮುನಿಯಪ್ಪ,ಕೆ.ಆರ್.ನಾರಾಯಣಸ್ವಾಮಿ, ರಾಮಾಂಜಿನಪ್ಪ ಮತ್ತಿತರರು ಇದ್ದರು.

image

ಜಂಗಮಕೋಟೆ ಭಾಗದ 13 ಹಳ್ಳಿಗಳ 2823 ಎಕರೆ ಚಿನ್ನದಂತಹ ಭೂಮಿಯನ್ನು ಕಲ್ಲುಗಳನ್ನಿಟ್ಟು ಬಂಜರು ಭೂಮಿ ಎಂದು ಸುಳ್ಳು ಸುಳ್ಳೇ ತೋರಿಸಿ ಪ್ರತಿಭಟನೆ ಮಾಡಲು ಹೊರಟಿರುವವರಿಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿರುವುದು ತಪ್ಪು. ಇದರ ವಿರುದ್ಧ ನಾವು ತಿರುಗಿ ಬಿದ್ದರೆ ಜಿಲ್ಲಾಡಳಿತದ ಆಡಳಿತಾತ್ಮಕ ವ್ಯವಸ್ಥೆ ಏನಾಗಲಿದೆ ಒಮ್ಮೆ ಯೋಚಿಸಿ.ಜಿಲ್ಲಾಡಳಿತ ಸರಕಾರಕ್ಕೆ ಸರಿಯಾದ ರೀತಿಯ ವರದಿ ಮಾಹಿತಿ ನೀಡಿ ರೈತರ ಋಣ ತೀರಿಸುವ ಕೆಲಸ ಮಾಡಬೇಕು. ಸರಕಾರ ಕೂಡ ಭೂಮಿ ಸ್ವಾಧೀನ ಮಾಡುವ ಪ್ರಕ್ರಿಯೆ ಕೈಬಿಡಬೇಕು.ಇಲ್ಲದಿದ್ದಲ್ಲಿ ಬೈಕ್ ರ‍್ಯಾಲಿ ಮೂಲಕ ವಿಧಾನಸೌಧ ಮುತ್ತಿಗೆ ಖಚಿತ. 10 ಸಾವಿರ ಸಂಖ್ಯೆಯಷ್ಟೆ. ರಾಜ್ಯದ ಮೂಲೆ ಮೂಲೆಯಿಂದ ರೈತರು ಬರುತ್ತಾರೆ.ನಮಗೂ ಹೋರಾಟ ಮಾಡುವ ತಾಕತ್ ಗೊತ್ತು. ಹಿಂದೆ 7 ಗಂಟೆಗಳ ಕಾಲ ಅಂತ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದು ಕೂಡ ನಮ್ಮ ಸಂಘಟನೆಯ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಎಂಬುದನ್ನು ಸರಕಾರ ಮರೆಯ ಬಾರದು. ನಮಗೂ ವಾಮಮಾರ್ಗದಲ್ಲಿ ಚಳವಳಿ ಕಟ್ಟುವುದು ಚೆನ್ನಾಗಿ ಗೊತ್ತು. ಈ ವೇಳೆ ಏನಾದರೂ ಅನಾಹುತವಾದರೆ ಜಿಲ್ಲಾಡಳಿತ ಮತ್ತು ಜಿಲ್ಲಾಮತ್ರಿಗಳೇ ಸಂಪೂರ್ಣ ಹೊಣೆಯಾಗು ತ್ತಾರೆ.

ಭಕ್ತರಹಳ್ಳಿ ಬೈರೇಗೌಡ, ಕಾರ್ಯಾಧ್ಯಕ್ಷರು. ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ.