ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Artificial Intelligence: ಇಂದಿನಿಂದ ನಾಗಾರ್ಜುನ ಕಾಲೇಜಿನಲ್ಲಿ ಎಐ ಶೃಂಗಸಭೆ : ಎಸ್.ಎಸ್. ಅಯ್ಯಂಗಾರ್‌ರಿAದ ಉದ್ಘಾಟನೆ

ದೆಹಲಿಯಲ್ಲಿ ನಡೆಯ ಲಿರುವ ರಾಷ್ಟ್ರೀಯ ಮಟ್ಟದ ಎಐ ಶೃಂಗ ಸಭೆ ಭಾಗವಾಗಿ ನಾಗಾರ್ಜುನ ಇಂಜನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಒಂದು ದಿನದ  ಪ್ರಾದೇ ಶಿಕ ಎ.ಐ ಪೂರ್ವ ಶೃಂಗಸಭೆ ಆಯೋಜಿಸಲಾಗಿದ್ದು ಮಿಯಾಮಿ ಸಂಸ್ಥೆಯ ಪ್ರಾಧ್ಯಾಪಕ ಎಸ್.ಎಸ್. ಅಯ್ಯಂಗಾರ್ ಉದ್ಘಾಟಿಸಲಿದ್ದಾರೆ

ಇಂದಿನಿಂದ ನಾಗಾರ್ಜುನ ಕಾಲೇಜು ಮಹಾವಿದ್ಯಾಲಯದಲ್ಲಿ ಎಐ ಶೃಂಗಸಭೆ  ನಡೆಯಲಿದ್ದು ಕಾರ್ಯಕ್ರಮವನ್ನು ಎಸ್.ಎಸ್. ಅಯ್ಯಂಗಾರ್ ಉದ್ಘಾಟನೆ ಮಾಡಲಿದ್ದಾರೆ ಎಂದು ಪ್ರಾಂಶುಪಾಲ ತಿಪ್ಪೇಸ್ವಾಮಿ ಉದ್ಘಾಟಿಸಿದರು.

ಚಿಕ್ಕಬಳ್ಳಾಪುರ : 2026ರಲ್ಲಿ ಕೃತಕ ಬುದ್ಧಿಮತ್ತೆ ವಿಷಯದಲ್ಲಿ ದೆಹಲಿಯಲ್ಲಿ ನಡೆಯ ಲಿರುವ ರಾಷ್ಟ್ರೀಯ ಮಟ್ಟದ ಎಐ ಶೃಂಗ ಸಭೆ ಭಾಗವಾಗಿ ನಾಗಾರ್ಜುನ ಇಂಜನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಒಂದು ದಿನದ  ಪ್ರಾದೇಶಿಕ ಎ.ಐ ಪೂರ್ವ ಶೃಂಗಸಭೆ ಆಯೋಜಿಸಲಾಗಿದ್ದು ಮಿಯಾಮಿ ಸಂಸ್ಥೆಯ ಪ್ರಾಧ್ಯಾಪಕ ಎಸ್.ಎಸ್. ಅಯ್ಯಂಗಾರ್ ಉದ್ಘಾಟಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಜಿ. ತಿಪ್ಪೇ ಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಾಗಾರ್ಜುನ ಇಂಜನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಶನಿವಾರ ಬೆಳಿಗ್ಗೆ 9.30 ಗಂಟೆಗೆ ನಡೆಯಲಿರುವ ಉದ್ಘಾಟನೆ ನಂತರ ನಡೆಯುವ ಎಐ ಶೃಂಗಸಭೆಯ ಗೋಷ್ಟಿಗಳಲ್ಲಿ ಕಾನುನು ವಿಭಾಗದ ಪರಿಣಿತರು, ಆರೋಗ್ಯ ಕ್ಷೇತ್ರದ ಪರಿಣಿತರು, ತಾಂತ್ರಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ವಲಯಗಳ ಮಂದಿ ಇಲ್ಲಿದ್ದು ಎಐ ತಂತ್ರಜ್ಞಾನ ಸಾಗುತ್ತಿರುವ ಹಾದಿ,ಸವಾಲು ಪರಿಹಾರಗಳನ್ನು ಸಭೆಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದರು.

ಇದನ್ನೂ ಓದಿ: ಭಾರತೀಯ ಕಾಲೇಜುಗಳಲ್ಲಿ ಉಚಿತ AI ಪ್ರಮಾಣೀಕರಣಗಳನ್ನು ನೀಡಲು AI CERTs® ‘ಮಿಷನ್ AI-ಸಕ್ಷಮ್’ ಎಂಬ ಉಪಕ್ರಮ ಪ್ರಾರಂಭ

ಕೃತಕ ಬುದ್ಧಿಮತ್ತೆ (ಎಐ) ಇಂದು ಮಾನವ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ವದ ಪರಿವರ್ತನೆಗಳನ್ನು ಉಂಟು ಮಾಡುತ್ತಿರುವ ಪ್ರಮುಖ ತಂತ್ರಜ್ಞಾನವಾಗಿದೆ. 2026ರ ಫೆಬ್ರವರಿ ತಿಂಗಳಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಭಾರತ ಎಐ ಇಂಪ್ಯಾಕ್ಟ್ ಸಮ್ಮೇಳನ-2026ಕ್ಕೆ  ಪೂರ್ವಭಾವಿಯಾಗಿ,ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಶನಿವಾರ (ಡಿ.೨೭) ಪ್ರಾದೇಶಿಕ ಎಐ ಪೂರ್ವ ಸಮಿಟ್ ಆಯೋಜಿಸ ಲಾಗಿದೆ ಎಂದು ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ತಿಪ್ಪೇಸ್ವಾಮಿ ತಿಳಿಸಿದರು.

ನಮ್ಮ ಕ್ಯಾಂಪಸ್ಸಿನಲ್ಲಿ ನಡೆಯಲಿರುವ ಎಐ ಪೂರ್ವ ಶೃಂಗಸಭೆಯಲ್ಲಿ ವಿಶೇಷ ಅತಿಥಿ ಯಾಗಿ ಫ್ಲೋರಿಡಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ, ಮಿಯಾಮಿ ಸಂಸ್ಥೆಯ ಪ್ರಾಧ್ಯಾ ಪಕ ಎಸ್.ಎಸ್. ಅಯ್ಯಂಗಾರ್ ಅವರು ಭಾಗವಹಿಸಲಿದ್ದಾರೆ. ಇವರು ಕರ್ನಾಟಕದವರು ಎಂಬುದು ಹೆಮ್ಮೆಯ ಸಂಗತಿಯಾಗಿದೆ.ಇದೇ ಕಾರ್ಯಕ್ರಮದಲ್ಲಿ ನಾಗಾರ್ಜುನ ಕಾಲೇಜಿನ ಸಿಒಒ ಭಾನು ಚೈತನ್ಯ ವರ್ಮ ಹಾಗೂ ನಿರ್ದೇಶಕ ಗೋಪಾಲ್‌ಕೃಷ್ಣ ಅವರೂ ಉಪಸ್ಥಿತ ರಿರುವರು ಎಂದರು.

ಸುದ್ದಿಗೋಷ್ಟಿಯಲ್ಲಿ ಎಐಎಂಎಲ್ ಮುಖ್ಯಸ್ಥ ವಿಭಾಗದ ಡಾ.ಲೋಹಿತ್ ಜೆ.ಜೆ.,ಇನ್ಫಾ ರ್ಮೆಷನ್ ವಿಭಾಗದ ಮುಖ್ಯಸ್ಥರಾದ ಡಾ. ಸಂಜೀವಕುಮಾರ್ ಅತ್ತೂರೆ ಇತರರು ಇದ್ದರು.