ಬಾಗೇಪಲ್ಲಿ: ರಾಜ್ಯ ಬಜೆಟ್(State Budget) ನಲ್ಲಿ 2026 ಉತ್ತಮ ಶಿಕ್ಷಣ, ಉತ್ತಮ ಆರೋಗ್ಯಕ್ಕೆ ಒತ್ತು ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ(Chief Minister Siddaramaiah) ಅವರು ರೈತರು, ದಲಿತರು, ಯುವ ಜನರು, ಕೈಗಾರಿಕೋದ್ಯಮಿ, ವ್ಯಾಪಾರ ಕ್ಷೇತ್ರದ ಹಿತ ಕಾಯುವಲ್ಲಿ ಬದ್ಧತೆ ತೋರಿದ್ದಾರೆ ಎಂದು ಎಸ್.ಎನ್.ಸುಬ್ಬಾರೆಡ್ಡಿ(MLA SN Subbareddy) ಹೇಳಿದರು.
ಅವರು 2026 ರಾಜ್ಯ ಸಿದ್ದರಾಮಯ್ಯೆ ಬಜೆಟ್ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿ
ರಾಜ್ಯದ ಆರ್ಥಿಕ ಸುಸ್ಥಿತಿಯ ಮಿತಿ ಮೀರದೆ ಎಲ್ಲ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆಗಳನ್ನು ಬಜೆಟ್ ನಲ್ಲಿ ನೀಡಿದ್ದಾರೆ. ಜಿಡಿಪಿ ಶೇ 8.1ರಷ್ಟು ನೈಜ ಬೆಳವಣಿಗೆ ಆಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸಮತೋಲಿತ ಬೆಳವಣಿಗೆ ಇದಾಗಿದೆ. ಇಂತಹ ಆರ್ಥಿಕ ಕ್ರಮದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೊಬ್ಬ ಆರ್ಥಿಕ ನಿಪುಣ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದರು.
56.432 ಹುದ್ದೆಗಳ ಭರ್ತಿಗೆ ಬದ್ಧತೆ ತೋರುವ ಮೂಲಕ ಮುಖ್ಯಮಂತ್ರಿಗಳು ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ಗಮನೀಯ ಬದಲಾವಣೆಗಳನ್ನು ತರಲಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಉನ್ನತೀಕರಣ ಶೈಕ್ಷಣಿಕ ಪ್ರಗತಿಯ ಪರಿಣಾಮಕಾರಿ ಹೆಜ್ಜೆ ಎನ್ನಬಹುದು ಎಂದು ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಬಾಗೇಪಲ್ಲಿ ತಾಲ್ಲೂಕಿನ ಮುದ್ದಹಳ್ಳಿ ಕುಂಟೆ ಕೆರೆ ಮರು ನಿರ್ಮಾಣ
ಬಾಗೇಪಲ್ಲಿ ಭಾಗದಲ್ಲಿ ಯಾವುದೇ ದೊಡ್ಡ ನದಿಗಳು ಇಲ್ಲ. ಆದ್ದರಿಂದ ಈ ಭಾಗಕ್ಕೆ ಶಾಶ್ವತ ನೀರಾ ವರಿ ವ್ಯವಸ್ಥೆಗಾಗಿ ಸುಮಾರು 200 ಕೋಟಿ ವೆಚ್ಚದಲ್ಲಿ ಗಂಟಲ ಮಲ್ಲಮ್ಮ ಡ್ಯಾಂ ನಿರ್ಮಾಣಕ್ಕೆ ಬಜೆಟ್ ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿದ್ದಕ್ಕೆ ಸಿ.ಎಂ.ಸಿದ್ದ ರಾಮಯ್ಯೆ ಅವರಿಗೆ ಧಾನ್ಯ ವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕಿನಲ್ಲಿ ತೀವ್ರ ಆರ್ಥಿಕ ಪ್ರಗತಿಯನ್ನು ಸಾಧಿಸುವಲ್ಲಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಸಫಲವಾಗಿದೆ. ಸುಸ್ಥಿರ ಬಜೆಟ್ ನೀಡಿದ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು ಎಂದು ಹೇಳಿದರು.