ಬೆಂಗಳೂರು: ಅಂಬೇಡ್ಕರ್ ಅವರನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡುವ ಬದಲು ಅವರ ಚಿಂತನೆ ಹಾಗೂ ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಅಂಬೇಡ್ಕರ್ ಅವರ ವಿಚಾರಗಳು ಸಮಾಜದಲ್ಲಿ ಮಾನವೀಯತೆ ಮತ್ತು ಸಮಾನತೆಯ ಚಿಂತನೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಕೋಡಿ ರಂಗಪ್ಪ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜಿನಲ್ಲಿ ನಡೆದ ‘ಸಂವಿಧಾನ ಶಿಲ್ಪಿ ಅಂಬೇಡ್ಕರ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳನ್ನು ಹೊರೆ ಎಂದು ಭಾವಿಸಬಾರದು. ಜೀವಪರ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸಮಾಜದಲ್ಲಿ ವಿವಿಧ ಕ್ಷೇತ್ರಗಳ ನಡುವೆ ಇರುವ ವೈರುಧ್ಯಗಳನ್ನು ಅರ್ಥಮಾಡಿಕೊಂಡು ಮುನ್ನಡೆ ಯುವ ಅಗತ್ಯವಿದೆ. ಉದ್ಯಮಿಗಳು ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ರೈತರು ತಮ್ಮ ದೈನಂದಿನ ಬದುಕಿನಲ್ಲಿ ಸ್ಕೂಟರ್ ಸೇರಿದಂತೆ ವಿವಿಧ ಸಾಧನಗಳನ್ನು ಅವಲಂಬಿಸುತ್ತಾರೆ. ಕೃಷಿ ಸಹಕಾರ ಸಂಘಗಳ ಸದಸ್ಯರು ರೈತರಾಗಿದ್ದರೆ, ರಾಜ್ಯಸಭೆ ಮತ್ತು ಲೋಕಸಭೆಗೆ ಆಯ್ಕೆಯಾಗುವವ ರಲ್ಲಿ ಉದ್ಯಮಿಗಳೂ ಇದ್ದಾರೆ. ಇಂತಹ ಸಾಮಾಜಿಕ ವಾಸ್ತವಗಳನ್ನು ಇತಿಹಾಸದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡು ಮುಂದುವರಿಯಬೇಕು ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ಭೂ ಮಾಪಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ: ಜಿಲ್ಲಾಧಿಕಾರಿ ಪರಿಶೀಲನೆ
ಅಂಬೇಡ್ಕರ್ ಅವರ ಚಿಂತನೆಯಿಂದ ಸಮಾಜಕ್ಕೆ ದೊರೆತಿರುವುದು ಮನುಷ್ಯತ್ವದ ಅರಿವು. ಅವರನ್ನು ಕೇವಲ ಪುಸ್ತಕದ ಸಾಲುಗಳಿಗೆ ಸೀಮಿತಗೊಳಿಸಬಾರದು. ಅಂಬೇಡ್ಕರ್ ನಮ್ಮ ಎದೆಗಳಲ್ಲಿ ನೆಲೆಸಬೇಕು. ಅವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕವೇ ಅವರಿಗೆ ನಿಜವಾದ ಗೌರವ ಸಲ್ಲಿಸಲು ಸಾಧ್ಯ ಎಂದರು.
ಅಂಬೇಡ್ಕರ್ ಅವರ ಚಿಂತನೆ ಬಹುಸಂಖ್ಯಾತ ಜನರಿಗೆ ಒಳಿತನ್ನು ಉಂಟುಮಾಡುವ ದೃಷ್ಟಿಕೋನ ಹೊಂದಿದ್ದರೂ, ಅದಕ್ಕೆ ವಿರೋಧ ವ್ಯಕ್ತಪಡಿಸುವವರೂ ಇದ್ದಾರೆ. ಆದರೆ ಎಷ್ಟೇ ವೈರುಧ್ಯ ಗಳಿದ್ದರೂ ಅಂಬೇಡ್ಕರ್ ಅವರ ಚಿಂತನೆಯ ಪ್ರಭಾವವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ನೊಂದವರ ಪರ ನಿಲ್ಲುವುದು ಬಾಬಾಸಾಹೇಬ್ ಅವರ ಚಿಂತನೆಯ ಪ್ರಮುಖ ಅಂಶವಾಗಿತ್ತು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪೂರ್ವಗ್ರಹವಿಲ್ಲದೆ ಅಂಬೇಡ್ಕರ್ ಅವರನ್ನು ಓದಿ ಅರ್ಥಮಾಡಿಕೊಳ್ಳಬೇಕು. ಸಮಾಜ, ರಾಜಕೀಯ ವ್ಯವಸ್ಥೆ ಹಾಗೂ ಆರ್ಥಿಕ ಚಿಂತನೆಗಳನ್ನು ತಿಳಿದುಕೊಳ್ಳಲು ವಿವಿಧ ವಿಚಾರಧಾರೆಗಳ ಕುರಿತಾದ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ‘ಒಲ್ಗಾ ಗಂಗಾ’ ಸೇರಿದಂತೆ ವಿವಿಧ ಕೃತಿಗಳನ್ನು ಓದಬೇಕು. ಫ್ಯೂಡಲಿಸಂ, ಕ್ಯಾಪಿಟಲಿಸಂ ಹಾಗೂ ಡೆಮಾಕ್ರಟಿಕ್ ಸಿಸ್ಟಮ್‌ಗಳ ಕುರಿತೂ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಒಂದು ಕಾಲದಲ್ಲಿ ಭಾರತದಲ್ಲಿ ಅಕ್ಷರ ಸಂಸ್ಕೃತಿಗೆ ವಿರೋಧಿ ವಾತಾವರಣವಿತ್ತು. ಅಂತಹ ಸಾಮಾಜಿಕ ಹಿನ್ನೆಲೆಯನ್ನು ಅರ್ಥಮಾಡಿಕೊಂಡು ಅಂಬೇಡ್ಕರ್ ಅವರ ಕೊಡುಗೆಯನ್ನು ಅಧ್ಯಯನ ಮಾಡಬೇಕು. ಸತ್ಯವನ್ನು ಹೇಳಲು ಯಾವುದೇ ರೀತಿಯ ಅಳುಕು ಇರಬಾರದು. ಪ್ರಶ್ನಿಸುವ ಹಾಗೂ ವಿಚಾರ ಮಾಡುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕೋಡಿ ರಂಗಪ್ಪ ಹೇಳಿದರು.
ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಸರಕಾರಿ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮುನಿರಾಜು ಎಂ ಅರಿಕೆರೆ ಭಾರತೀಯ ಸಮಾಜ ಮತ್ತು ಚಿಂತನಾ ಕ್ರಮ ಅಂಬೇಡ್ಕರ್ ಅವರನ್ನು ಮೀಸಲಾತಿ ಮತ್ತು ಸಂವಿಧಾನ ಶಿಲ್ಪಿ ಎಂಬ ಈ ಎರಡು ಅಂಶ ಗಳನ್ನು ಮುಂದಿಟ್ಟುಕೊAಡು ಚರ್ಚೆ ಮಾಡಿದಷ್ಟು ಅವರ ನೈಜ ಚಿಂತನೆ ,ಬದುಕು ಬರಹ, ತ್ಯಾಗ ದೇಶಕ್ಕಾಗಿ ಮಾಡಿದ ಸಮರ್ಪಣಾ ಭಾವವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದೆ ಎಂದರು.
ಅAಬೇಡ್ಕರ್ ಅವರನ್ನು ಓದುವುದೆಂದರೆ ಸಮಸಮಾಜದ ಆಶಯಗಳನ್ನು ಎದೆಗೆ ಇಳಿಸಿಕೊಳ್ಳುವ ಮಾರ್ಗ. ಅವರ ವಿಸಾದ ನಿರೀಕ್ಷಣೆಯಲ್ಲಿ ಭಾರತದ ರೂಪಾಯಿ ಸಮಸ್ಯೆ, ಜಾತಿ ವಿನಾಶ,ಬುದ್ದ ಮತ್ತು ಅವರ ಧಮ್ಮ, ಶೂದ್ರರು ಯಾರು?ಹಿಂದೂಧರ್ಮದ ಒಗಟುಗಳು, ಪೂನಾ ಒಪ್ಪಂದ, ಇತ್ಯಾದಿಗಳನ್ನು ತಪ್ಪದೆಓದಬೇಕು ಎಂದರು.
ಅಂಬೇಡ್ಕರ್ ಅವರನ್ನು ಅರಿತವರು ಕಡ್ಡಾಯವಾಗಿ ಸಂವಿಧಾನ ಪ್ರೇಮಿಗಳೇ ಆಗಿರುತ್ತಾರೆ.ಅವರೇ ಹೇಳುವಂತೆ ಪರಿಸ್ಥಿತಿ ನಮ್ಮನ್ನು ನಿರ್ಧರಿಸುವುದಿಲ್ಲ,ನಮ್ಮ ಜ್ಞಾನ, ಪರಿಶ್ರಮ, ಮತ್ತು ಸಂಕಲ್ಪವೇ ನಮ್ಮ ಭವಿಷ್ಯ ರೂಪಿಸಲಿದೆ ಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ನಮ್ಮೊಂದಿಗೆ ಒಪ್ಪಿಕೊಳ್ಳುವವರಿಗಿಂತ ನಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿ ರುವವರ ಹಕ್ಕುಗಳನ್ನೂ ಗೌರವಿಸುವುದು ಮುಖ್ಯ,ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಸೋದರತ್ವ ವೆಂಬ ಈ 4 ಮೌಲ್ಯಗಳು ಸಂವಿಧಾನದ ಪುಸ್ತಕದಲ್ಲಿ ಇರುವುದಕ್ಕಿಂತ ನಮ್ಮ ಮನೆಗಳಲ್ಲಿ, ಶಾಲೆಗಳಲ್ಲಿ,ಕಚೇರಿಗಳಲ್ಲಿ, ಗ್ರಾಮಗಳಲ್ಲಿ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾತ ವಿತರಿಸಲಾಯಿತು.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಪ್ರಾಶುಪಾಲ ಡಾ.ಬಾಹುಬಲಿ, ಪ್ರಾಧ್ಯಾಪಕ ಬಾಹುಬಲಿ,ಗಾಯಕ ಸೊರಪಲ್ಲಿ ಚಂದ್ರು ಸೇರಿ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.