ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಂಬೇಡ್ಕರ್‌ ಪ್ರತಿಮೆ ಜೊತೆಗೆ ಬುದ್ದನ ವಿಗ್ರಹ ಅಳವಡಿಸಲಾಗುವುದು: ಸಚಿವ ಎಂ ಸಿ ಸುಧಾಕರ್

ತಾನು ಅನುಭವಿಸಿದ ಯಾತನೆಯನ್ನು ಮುಂದೆ ಯಾರು ಅನುಭವಿಸಬಾರದು ಎನ್ನುವ ಹಿನ್ನಲೆ ಯಲ್ಲಿ ಸಂವಿಧಾನವನ್ನು ರೂಪಿಸಿದ್ದಾರೆ.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ವಾದ ಹಕ್ಕು, ಕರ್ತವ್ಯ, ಸ್ಥಾನಮಾನಗಳು ದೊರೆಯಬೇಕು, ಸಮ ಸಮಾಜ ನಿರ್ಮಾಣ ಆಗಬೇಕು ಎಂಬುದು ಅವರ ಗುರಿಯಾಗಿತ್ತು

ಚಿಂತಾಮಣಿ: ಸಮಾಜದ ಬದಲಾವಣೆಗೆ ಬಹು ದೊಡ್ಡ ಅಸ್ತ್ರ ಶಿಕ್ಷಣ, ಅಸಮಾನತೆಯನ್ನು ದೂರ ಮಾಡಿ ಸಮಸಮಾಜವನ್ನು ನಿರ್ಮಾಣ ಮಾಡಲು ಶಿಕ್ಷಣ ಮುಖ್ಯ. ಸಾಧಕರ ಸಾಧನೆ ಗುರುತಿಸು ತ್ತಾರೆಯೇ ಹೊರತು ಜಾತಿಯನ್ನು ಗುರುತಿಸುವುದಿಲ್ಲ. ಶಿಕ್ಷಣದಿಂದಲೇ ಅಂಬೇಡ್ಕರ್‌ ವಿಶ್ವದ ಮಹಾನ್‌ ವ್ಯಕ್ತಿಯಾಗಿ ಬೆಳೆದರು.ಹೀಗಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್(Higher Education Minister Dr. M.C. Sudhakar)ಅಭಿಪ್ರಾಯಪಟ್ಟರು.

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ವಿವಿಧ ಸಂಘಟನೆಗಳ ಸಹಯೋಗ ದೊಂದಿಗೆ ನಗರದಲ್ಲಿ ಆಯೋಜಿಸಿದ್ದು ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶಕ್ಕೆ ಅಂಬೇಡ್ಕರ್ ನೀಡಿರುವ ಸಂವಿಧಾನದ ಅಡಿಯಲ್ಲಿ ಎಲ್ಲಾ ಆಡಳಿತ, ಕಾನೂನು ನಡೆಯು ತ್ತಿವೆ. ಅವರ ಜೀವನ, ನಡೆದುಬಂದ ದಾರಿ, ತುಳಿತಕ್ಕೆ ಒಳಗಾಗಿ ಅವರು ಅನುಭವಿಸಿದ ಕಷ್ಟ, ತೊಂದರೆಗಳ ನಡುವೆಯೂ ವಿದೇಶದಲ್ಲಿ ವ್ಯಾಸಂಗವನ್ನು ಮಾಡಿ ಅಪಾರ ಪಾಂಡಿತ್ಯ ಪಡೆದಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಏ.23ರಿಂದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ಜಿಲ್ಲಾಧಿಕಾರಿ ಜಿ.ಪ್ರಭು

ತಾನು ಅನುಭವಿಸಿದ ಯಾತನೆಯನ್ನು ಮುಂದೆ ಯಾರು ಅನುಭವಿಸಬಾರದು ಎನ್ನುವ ಹಿನ್ನಲೆ ಯಲ್ಲಿ ಸಂವಿಧಾನವನ್ನು ರೂಪಿಸಿದ್ದಾರೆ.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ವಾದ ಹಕ್ಕು,ಕರ್ತವ್ಯ, ಸ್ಥಾನಮಾನಗಳು ದೊರೆಯಬೇಕು, ಸಮ ಸಮಾಜ ನಿರ್ಮಾಣ ಆಗಬೇಕು ಎಂಬುದು ಅವರ ಗುರಿಯಾಗಿತ್ತು ಎಂದರು.

ಅಂಬೇಡ್ಕರ್ ಒಂದು ವರ್ಗ ಅಥವಾ ಜಾತಿಗೆ ಸೀಮಿತವಲ್ಲ.ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ,ಶೈಕ್ಷಣಿಕ,ಸಾಮಾಜಿಕ ಶಕ್ತಿ ದೊರಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು.ಇಂದಿನ ಪೀಳಿಗೆಗೆ ಅಂಬೇಡ್ಕರ್‌ ಜೀವನ ಚರಿತ್ರೆ,ಅವರ ಸಾಧನೆ, ನಡೆದು ಬಂದ ದಾರಿಯನ್ನು ಪರಿಚಯ ಮಾಡಿಸುವ ವ್ಯವಸ್ಥೆಯನ್ನು ನಗರದ ಅಂಬೇಡ್ಕರ್‌ ಭವನದಲ್ಲಿ ಮ್ಯೂಜಿಯಂ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಅಂಬೇಡ್ಕರ್‌ ಕಂಚಿತ ಪ್ರತಿಮೆಯನ್ನು ಅಳವಡಿಸಲಾಗಿದೆ. ಬುದ್ದನ ವಿಗ್ರಹವನ್ನು ಅಳವಡಿಸ ಲಾಗುವುದು. ಈಗಾಗಲೇ 19 ಕೋಟಿ ರೂ ಖರ್ಚಾಗಿದ್ದು ಇನ್ನೂ ಸುಮಾರು 70–80 ಲಕ್ಷದ ಅವಶ್ಯ ಕತೆ ಇದೆ ಎಂದರು.

ಬಾಬು ಜಗಜೀವನರಾಂ ಸಹ ಸುದೀರ್ಘವಾಗಿ ರಾಜಕೀಯದಲ್ಲಿದ್ದರು. ಉತ್ತಮ ಆಡಳಿತ ನಿಪುಣರು, ಸ್ವಾತಂತ್ರ್ಯದ ನಂತರ ದೇಶದಲ್ಲಿ ಉಂಟಾಗಿದ್ದ ಆಹಾರದ ಕೊರತೆಯನ್ನು ನಿವಾರಿಸಿ ಸ್ವಾವಲಂಬನೆ ಸಾಧಿಸಿದ ಮಹಾನ್ ವ್ಯಕ್ತಿ. ಅವರನ್ನು ಹಸಿರು ಕ್ರಾಂತಿಯ ಹರಿಕಾರ, ದೂರದೃಷ್ಟಿಯುಳ್ಳ ನಾಯಕ ಜಗಜೀವನರಾಂ. ದೇಶದ ಕೃಷಿ,ಕೈಗಾರಿಕೆ,ರಕ್ಷಣೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ತಮ್ಮ ಆಡಳಿತದ ಚಾಪನ್ನು ಮೂಡಿಸಿದ್ದಾರೆ. ಮೇಲ್ಪಂಕ್ತಿಯ ಸಾಧಕರು ಹಾಗೂ ನಾಯಕರಾಗಿದ್ದರು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ ಮಾತನಾಡಿ, ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಕಟ್ಟಿಹಾಕಬೇಡಿ. ಬುದ್ದ, ಬಸವ, ಕುವೆಂಪು ಮುಂತಾದ ಮಹಾತ್ಮರನ್ನು ಯಾವುದೇ ಜಾತಿ,ಧರ್ಮಕ್ಕೆ ಸೀಮಿತಗೊಳಿಸಬಾರದು. ಕಷ್ಟಗಳು, ತೊಂದರೆಗಳನ್ನು ಎದುರಿಸುವ ಸವಾಲುಗಳನ್ನು ಸ್ವೀಕರಿಸಿ ಬದುಕನ್ನು ರೂಪಿಸಿಕೊಳ್ಳಬೇಕು ಎಂಬುದು ಅಂಬೇಡ್ಕರ್ ಸಂದೇಶ. ದೇಶ ಸಾವಿರಾರು ವರ್ಷಗಳ ಕಾಲ ಅನಕ್ಷರತೆಯಿಂದ ಬಳಲುತ್ತಿತ್ತು. ಜನರಿಗೆ ಮೊದಲು ಅಕ್ಷರದ ಅರಿವು ಮೂಡಿಸಿದವರು ಅಂಬೇಡ್ಕರ್ ಎಂದರು.

ಸಹಾಯಕ ಪ್ರಾಧ್ಯಾಪಕ ಎಚ್‌.ಲಕ್ಷ್ಮೀನಾರಾಯಣಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ದಲಿತ ಮುಖಂಡರನ್ನು ಮತ್ತು ಸಮುದಾಯದ ಪ್ರತಿಭಾವಂತ ಎಸ್‌.ಎಸ್‌.ಎಲ್‌.ಸಿ, ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಶ್ರೀನಾಥರೆಡ್ಡಿ, ಸದಸ್ಯೆ ರೇಖಾ ಉಮೇಶ್‌, ಆರ್ ಎಂ ಜೆ ಶ್ರೀನಿವಾಸ್ ಸುರೇಶ್ ತಹಶೀಲ್ದಾರ್ ಸುದರ್ಶನ ಯಾದವ್, ತಾ.ಪಂ. ಇ ಓ ಎಸ್.ಆನಂದ್, ಪೌರಾ ಯುಕ್ತ ಜಿ.ಎನ್.ಚಲಪತಿ, ಡಿವೈಎಸ್ಪಿ ವಿ.ಮುರಳೀಧರ್‌, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮುನಿನಾರಾಯಣಪ್ಪ,ಕಸಾಪ ಅಧ್ಯಕ್ಷ ಎನ್‌.ವಿ.ಶ್ರೀನಿವಾಸನ್‌, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್‌.ಅಶೋಕ ಕುಮಾರ್‌ ಭಾಗವಹಿಸಿದ್ದರು.