ಶಿಡ್ಲಘಟ್ಟ: ತಾಲೂಕಿನ ಮೇಲೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರಸ್ವಾಮಿ, ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವಾಲಯದ ಮೊದಲನೇ ವರ್ಷದ ವಾರ್ಷಿಕೋತ್ಸವವನ್ನು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.
ಅರ್ಚಕರಾದ ಮೋಹನ್ ಭಗವತ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ, ಹೋಮ, ನೈವೇದ್ಯ, ಹೂವಿನ ಅಲಂಕಾರ ಹಾಗೂ ದೀಪಾಲಂಕಾರಗಳು ಭಕ್ತರ ಗಮನ ಸೆಳೆದವು. ಮೇ 21 ಮತ್ತು 22ರಂದು ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿದರು.
ಇದನ್ನೂ ಓದಿ: Shidlaghatta News: ಖಾಸಗಿ ಬೋರ್‌ವೆಲ್ ಮಾಲೀಕರು ನಗರಸಭೆಗೆ ಸಹಕರಿಸಿ : ಸಾರ್ವಜನಿಕರಿಗೆ ನೀರು ಮಿತ ಬಳಕೆಗೆ ಮನವಿ
1919ರಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದೇವಾಲಯವು 2025ರಲ್ಲಿ ಪುನರ್ಜೀವಗೊಂಡ ಹಿನ್ನೆಲೆ ಈ ವರ್ಷದ ವಾರ್ಷಿಕೋತ್ಸವ ವಿಶೇಷ ಮಹತ್ವ ಪಡೆದಿತ್ತು. ಮಹಿಳೆಯರು ಮನೆಗಳ ಮುಂದೆ ರಂಗೋಲಿ ಹಾಕಿ, ಕಳಶ ಹೊತ್ತು ದೇವಾಲಯಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.
ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅರ್ಚಕ ಸಂಗಮೇಶ್, ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್, ರಾಮಕೃಷ್ಣಪ್ಪ, ಮಂಜುನಾಥ್, ನವೀನ್, ರಮೇಶ್, ಶಿವಕುಮಾರ್,ಪ್ರದೀಪ್, ರೂಪೇಶ್, ಲಕ್ಷ್ಮೀನಾರಾಯಣಪ್ಪ, ಸುಧೀರ್, ಶ್ರೀನಿವಾಸಮೂರ್ತಿ, ನಂದನ್, ನಂಜುಂಡಮೂರ್ತಿ, ಆರ್.ಬಿ. ಜಯದೇವ, ಮುನಿಶಾಮಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.