ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Farmers Dharna: ಜಿಲ್ಲಾಡಳಿತದಿಂದ ಭರವಸೆ; ಮಾತು ತಪ್ಪಿದರೆ ಮತ್ತೆ ಹೋರಾಟದ ಎಚ್ಚರಿಕೆ ನೀಡಿದ ಪ್ರಗತಿಪರ ಸಂಘಟನೆಗಳ ಮುಖಂಡರು

ಅರಣ್ಯ ಇಲಾಖೆಯವರಿಗೆ 1991-92 ರಲ್ಲಿ ಕಂದಾಯ ಇಲಾಖೆ ಒಂದಷ್ಟು ಭೂಮಿಯನ್ನು ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿ ವಿನಾಕಾರಣ  ಗೊಂದಲ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ಸರಿಯಾದ ದಾಖಲೆಯನ್ನು ಪರಿಶೀಲಿಸದೆ ಗೊಂದಲ ಸೃಷ್ಟಿಸಿ ದಲಿತರಿಗೆ ತೊಂದರೆ ಕೊಡುತ್ತಿದ್ದಾರೆ.

ನಗರದ ಎ.ಸಿ.ಕಛೇರಿ ಎದುರು ದಲಿತ ರೈತ ಕಾರ್ಮಿಕರ ಐಕ್ಯ ಹೋರಾಟ ವೇದಿಕೆ ನಡೆಸಿದ ಸಿಂಗಾಡಿಕದಿರೇನಹಳ್ಳಿ ಭೂಮಿ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ನಡೆಸಿದ ಹೋರಾಟ ಸ್ಥಳಕ್ಕೆ ಬಂದ ಹೆಚ್ಚುವರಿ ಉಪವಿಭಾಗಾಧಿಕಾರಿ ಮಹೇಶ್‌ಪತ್ರಿ ಮನವಿ ಸ್ವೀಕರಿಸಿದರು.

ಇತ್ಯರ್ಥಕ್ಕೆ 3 ತಿಂಗಳ ಗಡುವು: ತಾತ್ಕಾಲಿಕವಾಗಿ ಧರಣಿ ವಾಪಸ್

ಚಿಕ್ಕಬಳ್ಳಾಪುರ : ನಂದಿ ಪಂಚಾಯಿತಿ ವ್ಯಾಪ್ತಿಯ ಶಿಂಗಾಡಿಕದಿರೇನಹಳ್ಳಿ ಗ್ರಾಮದ ಸರ್ವೆ ನಂ.67ರ ಭೂಮಿ ಸಮಸ್ಯೆ ಇತ್ಯರ್ಥಪಡಿಸಿ ಎಂದು ಪ್ರಾರಂಭಿಸಿದ್ದ ಅನಿರ್ಧಿಷ್ಠಾವಧಿ ಹೋರಾಟವು ಶುಕ್ರವಾರಕ್ಕೆ 90ನೇ ದಿನಕ್ಕೆ ಕಾಲಿಟ್ಟಿತು. ಭೂಮಿಯ ನ್ಯಾಯಕ್ಕಾಗಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಗೆ 3 ತಿಂಗಳ ಗಡುವು ನೀಡುವ ಮೂಲಕ ದಲಿತ ರೈತ ಕಾರ್ಮಿಕರ ಐಕ್ಯ ಹೋರಾಟ ವೇದಿಕೆ ತಾತ್ಕಾಲಿಕವಾಗಿ ಧರಣಿ ವಾಪಸ್ಸು ಪಡೆಯಿತು.

ನಗರ ಹೊರವಲಯ ಉಪ ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿಗಳ ಕಚೇರಿ ಬಳಿ ಕಳೆದ 90 ದಿನಗಳಿಂದ ದಲಿತ ರೈತ ಕಾರ್ಮಿಕರ ಐಕ್ಯ ಹೋರಾಟ ವೇದಿಕೆ ನಡೆಸುತ್ತಿದ್ದ ಧರಣಿಯ ಸ್ಥಳದಿಂದ ಉಪವಿಭಾಗಾಧಿಕಾರಿಗಳ ಕಛೇರಿವರೆಗೆ ಗುರುವಾರ ಕಾಲ್ನಡಿಗೆ ಜಾಥಾ ನಡೆಸಿ ಜಿಲ್ಲಾಡಳಿತಕ್ಕೆ ೩ ತಿಂಗಳ ಗಡುವು ನೀಡುವ ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಡಳಿತದ ಭರವಸೆಯಂತೆ ಹೋರಾಟವನ್ನು ಹಿಂಪಡೆಯಲಾಯಿತು.

ಈ ವೇಳೆ ಮಾತನಾಡಿದ ದಸಂಸ ಮಾಜಿ ರಾಜ್ಯ ಸಂಚಾಲಕ ಎನ್.ಮುನಿಸ್ವಾಮಿ ತಾಲ್ಲೂಕಿನ ನಂದಿ ಹೋಬಳಿ, ಸಿಂಗಾಟಕದಿರೇನಹಳ್ಳಿ ಗ್ರಾಮದ ದಲಿತರಿಗೆ 1972-73 ಸಾಲಿನಲ್ಲಿ ಅಕ್ರಮ ಸಕ್ರಮ  ಕಾನೂನಡಿ ಸ.ನಂ. 67ರ ಭೂ ಮಂಜೂರಾತಿ ಆಗಿದೆ. ಅಂದಿನಿಂದ ಅವರು ಅಲ್ಲಿಯೇ ಬೆಳೆ ಬೆಳದು ಅನುಭವದಲ್ಲಿರುತ್ತಾರೆ. ಇತ್ತೀಚೆಗೆ ಅರಣ್ಯ ಇಲಾಖೆಯವರು ತಪ್ಪು ಮಾಹಿತಿಯಿಂದ ಹಾಗೂ ಜಾತಿವಾದಿ ಮನಸ್ಸುಗಳಿಂದ ದಲಿತರಿಗೆ ಕಿರುಕುಳ ನೀಡುತ್ತಿದ್ದಾರೆ.

ಇದನ್ನೂ ಓದಿ: Chikkaballapur News: ಅಹವಾಲು ಆಲಿಕೆ, ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಒತ್ತು; ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ

ಇದನ್ನು ಖಂಡಿಸಿ ಸಂತ್ರಸ್ಥ ರೈತರಿಗೆ ಭೂಒಡೆತನ ಕಲ್ಪಿಸಬೇಕು ಎಂದು ಕಳೆದ 90 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸಲಾಗಿದೆ.ನ್ಯಾಯಯುತ ಬೇಡಿಕೆಗಾಗಿ ಇಷ್ಟು ಸುಧೀರ್ಘ ಹೋರಾಟ ನಡೆಸಿದ್ದು ದಸಂಸ ಇತಿಹಾಸದಲ್ಲಿಯೇ ಇಲ್ಲ ಎಂದು ಬೇಸರಿಸಿದ ಅವರು ತಾಯಿಕರುಳಿನ ಗುಣವಿಲ್ಲದ ಜನಪ್ರತಿನಿಧಿಗಳು, ಜನಪರ ಕಾಳಜಿಯಿಲ್ಲದ ಅಧಿಕಾರಿಗಳ ಕಾರಣವಾಗಿಯೇ ಬಡವರು ಸರಕಾರಗಳಿಂದ ಶೋಷಣೆಗೊಳಗಾಗುತ್ತಿದ್ದಾರೆ ಎಂದರು.

ಅರಣ್ಯ ಇಲಾಖೆಯವರಿಗೆ 1991-92 ರಲ್ಲಿ ಕಂದಾಯ ಇಲಾಖೆ ಒಂದಷ್ಟು ಭೂಮಿಯನ್ನು ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿ ವಿನಾಕಾರಣ  ಗೊಂದಲ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ಸರಿಯಾದ ದಾಖಲೆಯನ್ನು ಪರಿಶೀಲಿಸದೆ ಗೊಂದಲ ಸೃಷ್ಟಿಸಿ ದಲಿತರಿಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ಪ್ರಶ್ನಿಸಿ ದಲಿತ ಸಂಘರ್ಷ ಸಮಿತಿ ಐಕ್ಯ ಹೋರಾಟ ಸಮಿತಿ ಹಲವು ರೀತಿಯ ಪ್ರತಿಭಟನೆಗಳನ್ನು ಮಾಡಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನ ಆಗಿರುವುದಿಲ್ಲ.

11cbpm9manaviಒಕ

ಪರಿಣಾಮ ಭೂ ಪ್ರವೇಶ ಹೋರಾಟ ನಡೆಸಲಾಯಿತು.ಆಗ ಸ್ಥಳಕ್ಕೆ ಬಂದಿದ್ದ ಎ.ಸಿ ಅಶ್ವಿನ್ ಅವರು ಫಾರೆಸ್ಟ್ ಸೆಟಲ್‌ಮೆಂಟ್ ಆಫೀಸರ್ ಆಗಿ ನಾನೇ ಇರುವುದರಿಂದ ಇದನ್ನು ಇತ್ಯರ್ಥಪಡಿಸಲು 3 ತಿಂಗಳ ಕಾಲಾವಕಾಶ ಕೋರಿದ್ದರು. ಇದನ್ನೂ ನೋಡೇ ಬಿಡೋಣ ಎಂದು ತೀರ್ಮಾನಿಸಿ ಹೋರಾಟವನ್ನು 90ನೇ ದಿನವಾದ ಸೆ.11ರಂದು ತಾತ್ಕಾಲಿವಾಗಿ ಹಿಂಪಡೆಯಲಾಗಿದೆ ಎಂದು ಘೋಷಿಸಿದರು.

ಮುಖಂಡ ಕೆ.ಸಿ.ರಾಜಾಕಾಂತ್ ಮಾತನಾಡಿ ಸಿಂಗಾಡಿಕದಿರೇನಹಳ್ಳಿ ಭೂ ಹೋರಾಟ ಮಾಡು ಇಲ್ಲವೆ ಮಡಿ ಹೋರಾಟವಾಗಿತ್ತು.ದಸಂಸ ರಕ್ತರಹಿತ ಕ್ರಾಂತಿಗೆ ಹೆಸರಾದ ಸಂಘಟನೆಯಾದ ಕಾರಣ ಈ ನೆಲದ ಕಾನೂನುಗಳಿಗೆ ಗೌರವ ನೀಡಿ ಜಿಲ್ಲಾಡಳಿತದ ಮನವಿಯಂತೆ, ಫಾರೆಸ್ಟ್ ಸೆಟಲ್‌ಮೆಂಟ್ ಅಧಿಕಾರಿಯ ಭರವಸೆಯಂತೆ ಧರಣಿಯನ್ನು ತಾತ್ಕಾಲಿಕವಾಗಿ 3 ತಿಂಗಳ ಮಟ್ಟಿಗೆ ವಾಪಸ್ಸು ಪಡೆಯಲಾಗಿದೆ. ಈ ಅವಧಿಯಲ್ಲಿ ಜಿಲ್ಲಾಡಳಿತದಿಂದ ರೈತಪರವಾದ ತೀರ್ಮಾನ ಹೊರಬರುವ ನಿರೀಕ್ಷೆ ಹೊಂದಲಾಗಿದೆ.ನಮ್ಮ ಪರವಾದ ತೀರ್ಪು ಬಂದಲ್ಲಿ ಜಿಲ್ಲಾಡಳಿತವನ್ನು ಅಭಿನಂದಿಸು ತ್ತೇವೆ. ಇಲ್ಲವಾದಲ್ಲಿ ಮುಂದಿನ ಹೋರಾಟ ಈಗ ನಡೆದದ್ದಕ್ಕಿಂತಲೂ ತೀಕ್ಷ್ಣವಾಗಿ ಇರಲಿದೆ ಎಂದು ಎಚ್ಚರಿಕೆ ನೀಡಿದರು.

ಸಿಪಿಎಂ ಮುಖಂಡ ಮುನಿವೆಂಕಟಪ್ಪ ಮಾತನಾಡಿ ಸಿಂಗಾಡಿ ಕದಿರೇನಹಳ್ಳಿ ಧರಣಿ 90ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನಗಳಾದರೂ ಕಂದಾಯ ಮತ್ತು ಆರಣ್ಯ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕ್ರಮಕ್ಕೆ ಪ್ರಯತ್ನ ಮಾಡದೆ ಜಾಣರಂತೆ ನಡೆದುಕೊಂಡಿರುವುದು ದಲಿತ ವಿರೋಧಿ ನೀತಿಯೇ ಆಗಿದೆ.

ಜಿಲ್ಲೆಯ ಸರಕಾರಿ ಅಧಿಕಾರಿಗಳು ಜನಪ್ರತಿನಿಧಿಗಳು ಕೆಐಎಡಿಬಿ ಮತ್ತು ರಿಯಲ್ ಎಸ್ಟೇಟ್ ದಂಧೆಕೋರರ ಪರವಾಗಿ ಕೆಲಸ ಮಾಡುತ್ತಾ ಕೈಗಾರಿಕೆಗಳ ಸ್ಥಾಪನೆ ಹೆಸರಿನಲ್ಲಿ ಹೆಸರಿನಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಕೊಂಡು ರೈತರನ್ನು ದಿನಗೂಲಿ ಕಾರ್ಮಿಕರನ್ನಾಗಿ  ಮಾಡು ತ್ತಿದ್ದಾರೆ. ಇಲ್ಲದಿದ್ದರೆ ಹಲವಾರು ವರ್ಷಗಳ ಹಿಂದೆ ನಮೂನೆ 50,53,57 ಅರ್ಜಿಗಳನ್ನು ಸಲ್ಲಿಸಿ ಕಾನೂನು ಬದ್ದವಾಗಿ ಅಕ್ರಮ ಸಕ್ರಮ ಕಮಿಟಿಗಳಲ್ಲಿ ಪಾಸಗಿ ಸಾಗುವಳಿ ಚೀಟಿ ಇತರೆ ಪೂರಕ ದಾಖಲೆಗಳಿದ್ದರೂ ಅರಣ್ಯ ಇಲಾಖೆ ವಿನಾಕಾರಣ ಬಡ ರೈತರಿಗೆ ತುಂಬಾ ತೊಂದರೆ ಕೊಡುತ್ತಿರು ವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅರಣ್ಯ ಭೂಮಿ ಹೆಸರಿನಲ್ಲಿ ರೈತರನ್ನು ಭಯ ಭೀತರಾಗಿ ಮಾಡಿ ರೈತರ ಜಮೀನುಗಳಿಂದ ಒಕ್ಕಲೆಬ್ಬಿಸುವುದು ಸರಿಯಲ್ಲ. ಸಿಂಗಾಟಕದಿರೇನಹಳ್ಳಿ ದಲಿತರ ಭೂ ಸಮಸ್ಯೆಯನ್ನು ಕೂಡಲೇ ಇತ್ಯರ್ಥ ಪಡಿಸಬೇಕಾಗಿತ್ತು. ಜನಪ್ರತಿನಿಧಿಗಳು ಕೂಡ ಈ ವಿಚಾರದಲ್ಲಿ ಸಂಪೂರ್ಣ ವಿಫಲ ರಾಗಿದ್ದಾರೆ. ಇದೆಲ್ಲ ಇರಲಿ 1972-73ರಲ್ಲಿ ರೈತರಿಗೆ ಜಮೀನನ್ನು ಮಂಜೂರು ಮಾಡಿಕೊಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಎಷ್ಟು ಸರಿ ಎಂದು ಆಕ್ರೋಷ ವ್ಯೆಕ್ತಪಡಿಸಿದರು.

ಈ ವೇಳೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪ್ರಭಾರ ಉಪ ವಿಭಾಗಾಧಿಕಾರಿ ಮಹೇಶ್ ಪತ್ರಿ ಮನವಿ ಸ್ವೀಕರಿಸಿ ಮಾತನಾಡಿ, ಹಿರಿಯ ಅಧಿಕಾರಿಗಳಿಗೆ ತಮ್ಮ ಮನವಿ ಸಲ್ಲಿಸುತ್ತೇವೆ.ಈ ಗಾಗಲೇ ಜಿಲ್ಲಾಧಿಕಾರಿಗಳು ತಿಳಿಸಿರುವಂತೆ ಡೀಮ್ಡ್ ಫಾರೆಸ್ಟ್ ಎಂದು ಗುರ್ತಿಸಿರುವ ಜಾಗದಲ್ಲಿ ಯಾರಿಗೆ ಹಕ್ಕು ಪತ್ರ ನೀಡಲಾಗಿದೆಯೋ ಮತ್ತು ಸ್ವಾಧೀನದಲ್ಲಿರುವರೊ ಅವರಿಗೆ ಜಮೀನು ಮರಳಿ ಕೊಡಿಸುವ ಬಗ್ಗೆ ಕೇಂದ್ರ ಅರಣ್ಯ ಮಂತ್ರಾಲಯದ ಜೊತೆ ಮಾತು ಕತೆ ನಡೆಸಿದ್ದು, ಶೀಘ್ರದಲ್ಲೆ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ದಸಂಸ ಪದಾಧಿಕಾರಿಗಳಾದ ಸಿ.ಜಿ.ಗಂಗಪ್ಪ, ಬಿ.ವಿ.ವೆಂಕಟರಮಣ, ಎನ್.ವೆಂಕಟೇಶ್, ಶ್ರೀರಂಗಪ್ಪ, ಇಸ್ಕೂಲಪ್ಪ, ಜಿ.ವಿ.ಗಂಗಪ್ಪ, ಎಂ.ಪಿ.ಮುನಿವೆಂಕಟಪ್ಪ, ಚೆನ್ನರಾಯಪ್ಪ, ಮುನಿರಾಜು, ವೈ ಶಂಕರ್, ರಾಜಶೇಖರ್,ಸಿದ್ಧಗಂಗಪ್ಪ, ಎನ್.ಪರಮೇಶ್, ಪೈಪಾಳ್ಯ ರವಿ, ಪಿ.ನರಸಿಂಹಮೂರ್ತಿ, ತಿರುಮಳಪ್ಪ, ನರಸಿಂಹಯ್ಯ, ನಾರಾಯಣಸ್ವಾಮಿ ಮತ್ತಿತರರು ಇದ್ದರು.