ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shidlaghatta News: ನಗರಸಭೆ ಸಿಬ್ಬಂದಿ ಮಾಡಬೇಕಾದ ಕೆಲಸವನ್ನು ತಾವು ಮಾಡಿ ನಗರಾಡಳಿತಕ್ಕೆ ಹಿಡಿ ಶಾಪ ಹಾಕಿದ ಆಟೋ ಚಾಲಕರು

ಚರಂಡಿಯಲ್ಲಿ ಕಸ ತುಂಬಿ ನೀರು ಸರಿಯಾಗಿ ಹರಿಯದೇ ದೇವಾಲಯದ ಪಾಯದ ಒಳಭಾಗ ಕ್ಕೂ ನುಗ್ಗುತ್ತಿರುವ ದುಸ್ಥಿತಿ ಉಂಟಾಗಿತ್ತು. ಈ ಬಗ್ಗೆ ನಗರಸಭೆ ಸಿಬ್ಬಂದಿಗೆ ಮಾಹಿತಿ ನೀಡಿದರೂ ಏನೂ ಪ್ರಯೋಜನ ಆಗಿಲ್ಲ.ನಗರಸಭೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸ್ವಚ್ಛತೆ ನಡೆಯದೆ ದುರ್ವಾಸನೆ ಬೀರುತ್ತಿತ್ತು

ಚರಂಡಿ ಸ್ವಚ್ಛಗೊಳಿಸಿದ ಆಟೋ ಚಾಲಕರು..

ಶಿಡ್ಲಘಟ್ಟ: ನಗರದ ಶ್ರೀರಾಮ ಹಾಗೂ ಮಾರಿಕಾಂಬ ದೇವಾಲಯದ ಸುತ್ತಮುತ್ತ ಅನೈರ್ಮಲ್ಯ ತುಂಬಿದ್ದು ಇಲ್ಲಿನ ಚರಂಡಿ ಸ್ವಚ್ಛತೆ ಕಾಣದಂತಾಗಿತ್ತು. ಈ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚರಂಡಿಯಲ್ಲಿ ಕಸ ತುಂಬಿ ನೀರು ಸರಿಯಾಗಿ ಹರಿಯದೇ ದೇವಾಲಯದ ಪಾಯದ ಒಳಭಾಗಕ್ಕೂ ನುಗ್ಗುತ್ತಿರುವ ದುಸ್ಥಿತಿ ಉಂಟಾಗಿತ್ತು. ಈ ಬಗ್ಗೆ ನಗರಸಭೆ ಸಿಬ್ಬಂದಿಗೆ ಮಾಹಿತಿ ನೀಡಿದರೂ ಏನೂ ಪ್ರಯೋಜನ ಆಗಿಲ್ಲ.

ಇದನ್ನೂ ಓದಿ: Shidlaghatta News: ಸಮಾಜದಲ್ಲಿ ದಾನಧರ್ಮ ರೂಢಿಯಾಗಲಿ: ಸೀಕಲ್ ರಾಮಚಂದ್ರಗೌಡ

ನಗರಸಭೆ ಅಧಿಕಾರಿಗಳ ನಿರ್ಲಕ್ಷ ದಿಂದಾಗಿ ಸ್ವಚ್ಛತೆ ನಡೆಯದೆ ದುರ್ವಾಸನೆ ಬೀರುತ್ತಿತ್ತು. ಇದರಿಂದ ಭಕ್ತರು ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯಾಗಿತು. ಇದರಿಂದ ಬೇಸತ್ತ ಸ್ಥಳೀಯ ಆಟೋ ಚಾಲಕರು ಸ್ವತಃ ಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಿ ನಾಗರೀಕರ ಗಮನ ಸೆಳೆದಿದ್ದಾರೆ.

ಇನ್ನಾದರೂ ನಗರಾಡಳಿತ ನಾಗರೀಕರ ಆರೋಗ್ಯ ಕಾಪಾಡಲು ಗಮನ ಹರಿಸಲಿ ಎಂದು ಭಾವಿಸಿ ಆಟೋ ಚಾಲಕರು ಚರಂಡಿ ಸ್ವಚ್ಛಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳೀಯ ಆಟೋ ಚಾಲಕರಾದ ಶ್ರೀನಿವಾಸ್, ರಾಜೇಶ್, ಬಾಲು, ಮಹೇಶ್, ಶ್ರೀನಿವಾಸ್, ಮುನಿರಾಜು ಹಾಗೂ ಗೋಪಿ ನಗರಸಭೆಯ ನಿರ್ಲಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣವೇ ನಗರಾಡಳಿತ ಚರಂಡಿ ಸ್ವಚ್ಛತೆ ಮಾಡಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು.