ಚಿಕ್ಕಬಳ್ಳಾಪುರ : ಮೂಲವ್ಯಾಧಿ ಸಮಸ್ಯೆಯಿದ್ದವರು ಉಪೇಕ್ಷೆ ಮಾಡದೆ, ಮುಜುಗರಕ್ಕೆ ಒಳಗಾಗದೆ ತಜ್ಞ ವೈದ್ಯರಲ್ಲಿ ತೋರಿಸಿದರೆ ಗುಣಪಡಿಸಬಹುದು.ಇದನ್ನು ಬಿಟ್ಟು ನಕಲಿ ವೈದ್ಯರಲ್ಲಿ ತೋರಿಸುವು ದರಿಂದ ಅಪಾಯವನ್ನು ಮೈಮೇಲೆ ಎಳೆದುಕೊಂಡAತೆ ಆಗುತ್ತದೆ ಎಂದು ಡಾ.ಮಾದೇಶ್ ತಿಳಿಸಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ ವಿದ್ಯಾಸಂಸ್ಥೆಯಲ್ಲಿ ಸ್ಪೆöÊಲ್ಸ್ ಆಸ್ಪತ್ರೆ ಮತ್ತೀಕೆರೆ ಮತ್ತು ಲಯನ್ಸ್ ಕ್ಲಬ್ಸ್ ಚಿಕ್ಕಬಳ್ಳಾಪುರದ ಸಹಯೋಗದಲ್ಲಿ ನಡೆದ ಉಚಿತ ಫೈಲ್ಸ್ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಂಡ್ಯದ ಎಸ್‌ಡಿ ಜಯರಾಮ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಾದೇಶ್ ಮಾತನಾಡಿ, ಸ್ಮೈಲ್ಸ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಸಿ.ಎಂ ಪರಮೇಶ್ವರ್ ಅವರು ಮೂಲವ್ಯಾಧಿ ಮತ್ತು ಪೈಲ್ಸ್ ಸಂಬಂಧದ ವಿಚಾರದಲ್ಲಿ ಭಾರತಕಂಡ ಶ್ರೇಷ್ಟ ಚಿಕಿತ್ಸಕರಲ್ಲಿ ಒಬ್ಬರು. ಈವರೆಗೆ ಇವರ ಮಾರ್ಗ ದರ್ಶನದಲ್ಲಿ ೧ ಸಾವಿರಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಬಿರಗಳನ್ನು ಭಾರತದ ಉದ್ದಗಲಕ್ಕೂ ಆಯೋಜಿಸಿ ಆಮುಖೇನ ಸಾರ್ವಜನಿಕರಲ್ಲಿ ಮೂಲವ್ಯಾಧಿ ಬಗ್ಗೆ ಇರುವ ಅಪಕಲ್ಪನೆಗಳನ್ನು ಹೋಗಲಾಡಿಸಿ ಅವರಲ್ಲಿ ಚಿಕಿತ್ಸೆ ಬಗ್ಗೆ ಸ್ಪಷ್ಟವಾದ ಅರಿವು ಮೂಡಿಸುವ ಕೆಲಸವನ್ನು ಮಾಡ ಲಾಗುತ್ತಿದೆ ಎಂದರು.
ಇದನ್ನೂ ಓದಿ: Chikkanayakanahalli News: ಪದವೀಧರರ ಧ್ವನಿಯಾಗಿ ಮೇಲ್ಮನೆಯಲ್ಲಿರುವೆ: ಬಿಜೆಪಿ ಮುಖಂಡ ವಸಂತಕುಮಾರ್
ಬೆAಗಳೂರಿನ ಮತ್ತೀಕೆರೆಯಲ್ಲಿರುವ ಸ್ಮೆöÊಲ್ಸ್ ಆಸ್ಪತ್ರೆಯಲ್ಲಿ ಮೂಲವ್ಯಾದಿ ಬಗ್ಗೆ ವಿಶೇಷವಾದ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ.ಇಲ್ಲಿ ಫೈಲ್ಸ್ ಪಿಸ್ತುಲಾವನ್ನು ಲೇಸರ್ ಚಿಕಿತ್ಸೆ ಮೂಲಕ ಶಾಶ್ವತವಾಗಿ ಗುಣಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕೆಲವರಿಗೆ ಮೂಲವ್ಯಾಧಿ ಸಣ್ಣ ಸಮಸ್ಯೆ ಎಂದು ಅನ್ನಿಸಿದರೂ ಜನತೆ ಭಾವಿಸಿದಷ್ಟು ಸರಳವಾಗಿ ಇರುವುದಿಲ್ಲ. ಸಮಸ್ಯೆ ಕಾಣಿಸಿಕೊಂಡ ಕೂಡಲೇ ತಜ್ಞ ವೈದ್ಯರನ್ನು ಕಾಣುವುದು ಮುಖ್ಯ.ಇದನ್ನು ಬಿಟ್ಟು ಉಪೇಕ್ಷೆ ಮಾಡುವುದಾಗಲಿ, ನಕಲಿ ವೈದ್ಯರನ್ನು ಭೇಟಿ ಮಾಡುವುದಾಗಲಿ ಮಾಡಬಾರದು. ಸಮಸ್ಯೆ ಹೇಳಿಕೊಳ್ಳದೆ ಹಾಗೆ ಬಿಟ್ಟರೆ ಅದು ಕ್ಯಾನ್ಸರ್ ಆಗಿ ಪರಿವರ್ತನೆ ಆಗುವ ಅಪಾಯವಿರುತ್ತದೆ ಎಂದರು.
ಮೂಲವ್ಯಾದಿಯಲ್ಲಿ ಅನೇಕ ವಿಧಗಳಿವೆ. ದೊಡ್ಡಕರುಳಿನ ಕ್ಯಾನ್ಸರ್, ಸಣ್ಣ ಕರುಳಿನ ಕ್ಯಾನ್ಸರ್ ಯಾಕಾಗುತ್ತದೆ.ನಾವು ಎಂತಹ ಆಹಾರ ತಿನ್ನುತ್ತಿದ್ದೇವೆ.ಜೀವನ ಶೈಲಿ ಹೇಗಿರಬೇಕು.ವೈದ್ಯರನ್ನು ಎಂತಹ ಸಂದರ್ಭದಲ್ಲಿ ಭೇಟಿ ಮಾಡಬೇಕು.ಯಾವ ವೈದ್ಯರು ರೋಗವನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಇಂತಹ ಉಚಿತ ಸಮಾಲೋಚನಾ ಶಿಬಿರದಲ್ಲಿ ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಲಾಗಿದೆ ಎಂದರು.
ವೇದಿಕೆಯಲ್ಲಿ ಡಾ.ವಿಜಯ್, ಡಾ.ಯಶೋಧ, ಡಾ.ಮಹದೇವ್, ಡಾ.ರಾಘವಿ, ಕ್ಯಾಂಪ್ ಕೋಆರ್ಡಿ ನೇಟರ್ ಆರ್.ದೀಪಕ್ ಕುಮಾರ್, ಲಯನ್ಸ್ ಸಂಸ್ಥೆಯ ಡಾ.ಚಂದ್ರಪ್ಪ, ಲಯನ್ಸ್ಗಳಾದ ಲಕ್ಷ್ಮಣ್ ,ರವೀಂದ್ರ, ಮುರಳಿ, ಲಕ್ಷಿö್ಮÃನಾರಾಯಣ ಮತ್ತಿತರರು ಇದ್ದರು.