ಚಿಕ್ಕಬಳ್ಳಾಪುರ: ಮೂರು ದಶಕಗಳಿಗೂ ಅಧಿಕ ಅವಧಿಯ ಪೊಲೀಸ್ ಸೇವೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಪ್ರಾಮಾಣಿಕತೆ, ಶಿಸ್ತು ಮತ್ತು ಜನಸ್ನೇಹಿ ಮನೋ ಭಾವದಿಂದ ನಿರ್ವಹಿಸಿದ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಎಂ. ವೇಣುಗೋಪಾಲ ಅವರು ಗೌರವಯುತವಾಗಿ ವಯೋನಿವೃತ್ತಿ ಹೊಂದಿದರು.
ಇದನ್ನೂ ಓದಿ: Chikkaballapur News: ನಿಸ್ವಾರ್ಥ ಪ್ರೇಮವೇ ಧರ್ಮ; ಹಸಿವು-ಬಡತನ ನಿರ್ಮೂಲನೆಗೆ ಸೇವೆಯೇ ಮಾರ್ಗ: ಸದ್ಗುರು ಮಧುಸೂದನ ಸಾಯಿ
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಿದ್ದ ಆತ್ಮೀಯ ಸನ್ಮಾನ ಸಮಾರಂಭ ದಲ್ಲಿ ಎಸ್ಪಿ ಕುಶಾಲ್ ಚೌಕ್ಸೆ ಸೇರಿದಂತೆ 31 ಸಹೋದ್ಯೋಗಿಗಳು ಅವರನ್ನು ಅಭಿನಂದಿಸಿ, ಅವರ ಸೇವೆಯನ್ನು ಸ್ಮರಿಸಿದರು.
ಪೊಲೀಸ್ ಸೇವೆ ಎಂದರೆ ಕೇವಲ ಒಂದು ಉದ್ಯೋಗವಲ್ಲ, ಸಮಾಜದ ನೆಮ್ಮದಿಗಾಗಿ ತನ್ನ ವೈಯ ಕ್ತಿಕ ಸುಖ-ದುಃಖಗಳನ್ನು ಬದಿಗೊತ್ತಿ ಸಲ್ಲಿಸುವ ತ್ಯಾಗದ ಬದುಕು. ಆ ಬದುಕಿನ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಎಂ. ವೇಣುಗೋಪಾಲ ಅವರ ಸೇವೆ ಸಹೋದ್ಯೋಗಿಗಳಿಗೆ ಸದಾ ಮಾದರಿಯಾಗಿರಲಿದೆ.
ಅವರ ವಯೋನಿವೃತ್ತಿ ಜೀವನವು ನೆಮ್ಮದಿ, ಸಂತೋಷ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ. ಕುಟುಂಬದವರೊಂದಿಗೆ ಸುಖ-ಶಾಂತಿಯಿಂದ ಹೊಸ ಬದುಕನ್ನು ಆನಂದಿಸು ವಂತಾಗಲಿ ಎಂಬುದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಕುಟುಂಬದ ಹಾರೈಕೆಯಾಗಿದೆ.