ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Seekal Ramachandragowda: 2028ಕ್ಕೆ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಎಂಎಲ್‌ಎ ಇರಲಿದ್ದಾರೆ : ಸೀಕಲ್ ರಾಮಚಂದ್ರಗೌಡ ಭರವಸೆ

ದೇಶದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಕೂಡ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ವರ್ಚಸ್ಸು ಕೆಲಸ ಮಾಡುತ್ತಿರುವುದನ್ನು ನೋಡಿ ಭಾರತೀಯರು ಬಿಜೆಪಿ ಪಕ್ಷವನ್ನು ಹರಸಿ ಹಾರೈಸಿದ್ದಾರೆ. ಇದೇ ಕಾರಣವಾಗಿ ಮೂರನೇ ಅವಧಿಗೂ ಕೂಡ ಅವರು ಪ್ರಧಾನಿಯಾಗಿ ಮುಂದುವರೆಯುವ ಮೂಲಕ ದೇಶವನ್ನು ಸಂಕಷ್ಟ ದಿಂದ ಪಾರು ಮಾಡಿದ್ದಾರೆ.

೨೦೨೮ಕ್ಕೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಖಂಡಿತವಾಗಿ ಬಿಜೆಪಿ ಪಕ್ಷದ ಎಂಎಲ್‌ಎ ಆಯ್ಕೆಯಾಗಿ ಜನಸೇವೆಗೆ ಸಂಕಲ್ಪತೊಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ಚಿಕ್ಕಬಳ್ಳಾಪುರ: 2028ಕ್ಕೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ(Shidlaghatta Assembly Consti tuency) ದಲ್ಲಿ ಖಂಡಿತವಾಗಿ ಬಿಜೆಪಿ ಪಕ್ಷದ ಎಂಎಲ್‌ಎ ಆಯ್ಕೆಯಾಗಿ ಜನಸೇವೆಗೆ ಸಂಕಲ್ಪ ತೊಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ(Seekal Ramachandra Gowda) ತಿಳಿಸಿದರು.

ಚಿಂತಾಮಣಿ ತಾಲೂಕಿನ ಸೀಕಲ್ ಗ್ರಾಮದಲ್ಲಿರುವ ರಾಮಚಂದ್ರಗೌಡರ ತೋಟದ ಮನೆಯಲ್ಲಿ ಏರ್ಪಡಿಸಿದ್ದ ಚಂಡಿಕಾಹೋಮ ಹಾಗೂ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಕೂಡ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ವರ್ಚಸ್ಸು ಕೆಲಸ ಮಾಡುತ್ತಿರುವುದನ್ನು ನೋಡಿ ಭಾರತೀಯರು ಬಿಜೆಪಿ ಪಕ್ಷವನ್ನು ಹರಸಿ ಹಾರೈಸಿದ್ದಾರೆ. ಇದೇ ಕಾರಣವಾಗಿ ಮೂರನೇ ಅವಧಿಗೂ ಕೂಡ ಅವರು ಪ್ರಧಾನಿಯಾಗಿ ಮುಂದುವರೆಯುವ ಮೂಲಕ ದೇಶವನ್ನು ಸಂಕಷ್ಟ ದಿಂದ ಪಾರು ಮಾಡಿದ್ದಾರೆ. ಹೀಗಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ನಮ್ಮ ಅಧಿಕಾರದಲ್ಲಿದೆ. 2028ಕ್ಕೆ ರಾಜ್ಯದಲ್ಲಿಯೂ ಕೂಡ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು ಶಿಡ್ಲಘಟ್ಟದಲ್ಲಿ ಕೂಡ ಬಿಜೆಪಿ ಅಭ್ಯರ್ಥಿಯೇ ಎಂಎಲ್‌ಎ ಆಗುವ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: Seekal Ramachandra Gowda: ಹೆಮ್ಮರವಾಗಿ ಬೆಳೆದಿರುವ ಆರ್.ಎಸ್.ಎಸ್ ನಿಷೇಧ ಸಾಧ್ಯವಿಲ್ಲ : ಸೀಕಲ್ ರಾಮಚಂದ್ರಗೌಡ

ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಆಗಿದೆ ಎಂದು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಖಂಡಿಸುತ್ತಿವೆ. ಆದರೆ ನಿಜವಾದ ಭಾರತೀಯರು ಯಾರೂ ಕೂಡ ಖಂಡಿಸುವುದಿಲ್ಲ. ಕಾರಣ ನೆರೆ ರಾಷ್ಟ್ರಗಳಿಗಿಂತ ಭಾರತದಲ್ಲಿಯೇ ಬೆಲೆ ಕಡಿಮೆಯಿದೆ ಎಂಬುದು ಬುದ್ದಿವಂತರಿಗೆ ಮಾತ್ರ ಅರ್ಥ ವಾಗಲಿದೆ. ದೇಶಕ್ಕೆ ತಮ್ಮಿಡೀ ಬದುಕನ್ನು ಮೀಸಲಾಗಿಟ್ಟ ಏಕೈಕ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ ಎಂದರು.

ಎರಡನೇ ಅವಧಿಯಲ್ಲಿ ಗ್ಯಾರೆಂಟಿಗಳ ಭಾರದಲ್ಲಿ ಜನಮೆಚ್ಚುವ ರೀತಿಯಲ್ಲಿ ಕೆಲಸ ಮಾಡಲಾಗಿಲ್ಲ ಎಂಬುದೇ ಸತ್ಯ.ಈ ಸತ್ಯ ಅರಿವಾದ ಕೂಡಲೇ ಸಿದ್ಧರಾಮಯ್ಯ ಅವರು ಡಿ.ಕೆ.ಶಿವಕುಮಾರ್ (D K Shivakumar) ಅವರಿಗೆ  ನಿರುಮ್ಮಳವಾಗಿ ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಳ್ಳೆಯ ರೀತಿಯಲ್ಲಿ ಆಡಳಿತ ನಡೆಸಬೇಕು ಎಂಬ ಹಂಬಲ ಹೊಂದಿ ದ್ದರೂ ಕಾಂಗ್ರೆಸ್‌ನ ಈಗಿನ ಸ್ಥಿತಿ ಮನೆಯೊಂದು ನಾಲ್ಕು ಬಾಗಿಲು ಎಂಬತಾಗಿದೆ. ಸರಕಾರ ಟೇಕಾಫ್ ಆಗುವ ಮೊದಲೇ ಖಾತೆ ಖ್ಯಾತೆ ಮಿತಿಮೀರಿದೆ. ನನ್ನ ಪ್ರಕಾರ, 2 ವರ್ಷ ಕೂಡ ಅಧಿಕಾರದಲ್ಲಿ ಇರುವುದೇ ಅನುಮಾನ ಎಂದು ವ್ಯಂಗ್ಯವಾಡಿದರು.

k

ಕಾಂಗ್ರೆಸ್‌ನ ಆಂತರಿಕ ಕಲಹ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಬರಡಾಗಿರುವ ರಾಜ್ಯ ಖಜಾನೆ ಅಥವಾ ಭಂಡಾರ ಈಡೇರಿಸಲಾಗದ ಭರವಸೆಗಳ ಭಾರಕ್ಕೆ ಸಿಕ್ಕಿ ನಲುಗಿರುವ ರಾಜ್ಯದ ಕಾಂಗ್ರೆಸ್ ಸರಕಾರ 2028ಕ್ಕೆ ಧೂಳಿಪಟ ಆಗುವುದು ಖಚಿತ. ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಖಚಿತ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಳ್ಳುವುದೂ ಕೂಡ ಅಷ್ಟೇ ಸತ್ಯ ಎಂದು ಭರವಸೆಯ ಮಾತುಗಳಾಡಿದರು.

ಜಿಲ್ಲೆಯಲ್ಲಿ ಜನತೆಯ ಕಷ್ಟಗಳು ದೂರವಾಗಬೇಕು. ಸಕಾಲಕ್ಕೆ ಮುಂಗಾರು ಜಿಲ್ಲೆಯನ್ನು ಪ್ರವೇಶಿಸಿ ರೈತರು ಜನಜಾನುವಾರುಗಳ ಬದುಕಿಗೆ ಆಶ್ರಯವಾಗಲಿ ಎಂಬ ಸದುದ್ದೇಶದಿಂದ ಚಂಡಿಕಾ ಹೋಮ ಹಾಗೂ ಸತ್ಯನಾರಾಯಣ ವೃತವನ್ನು ಏರ್ಪಡಿಸಲಾಗಿದೆ.

ಈ ಪೂಜೆಯಲ್ಲಿ ಜಿ.ಟಿ.ದೇವೇಗೌಡ(G T Devegowda), ಆನಂದ ಗುರೂಜಿ, ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್(Dr Shivrajkumar), ನಿರ್ದೇಶಕ ಆರ್.ಚಂದ್ರು(Director R Chandru) ಸೇರಿದಂತೆ ನಾಡಿನ ನಾನಾ ಗಣ್ಯರು ಬಂದು ದೇವರ ಕೃಪೆಗೆ ಪಾತ್ರವಾಗಿದ್ದಾರೆ. ಬಂದಿದ್ದ ಎಲ್ಲರಿಗೂ ದೇವರ ಪ್ರಸಾದ ವಿನಿಯೋಗ ಮಾಡಲಾಗಿದೆ.ದೇವರ ಕೃಪೆಯೆಂಬಂತೆ ಮಳೆಬರುವ ಸೂಚನೆ ಕಾಣಿಸುತ್ತಿದೆ ಎಂದರು.

ಈ ವೇಳೆ, ಸೀಕಲ್ ರಾಮಚಂದ್ರಗೌಡ, ಆನಂದ್‌ಗೌಡ ಕುಟುಂಬ ಪರಿವಾರದವರು ಹಾಜರಿದ್ದು ದೇವತಾ ಕಾರ್ಯಗಳು ಸಾಂಗವಾಗಿ ನಡೆಯುವಂತೆ ನೋಡಿಕೊಂಡರು.