ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gudibande News: ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಬೇರಿ, ಗುಡಿಬಂಡೆಯಲ್ಲಿ ಸಂಭ್ರಮಾಚರಣೆ

ಬಿಜೆಪಿ ಪಕ್ಷದ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿದ ಜನತೆ ಇಂದು ಬಿಜೆಪಿ ಪಕ್ಷದತ್ತ ವಾಲುತ್ತಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಜನಪರ ಕೆಲಸಗಳನ್ನು ಮಾಡುತ್ತಿದ್ದು, ಇಡೀ ದೇಶದ ಜನತೆ ಮೋದಿಯವರ ಪರ ಇದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯ ಗಳಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ.

ಗುಡಿಬಂಡೆ: ಇತ್ತೀಚಿಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ(Assembly elections in five states)ಯಲ್ಲಿ ಭಾರತೀಯ ಜನತಾ ಪಾರ್ಟಿ ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ( Assam, West Bengal and Puducherry)ಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆ ಯಲ್ಲಿ ಗುಡಿಬಂಡೆ ಪಟ್ಟಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಿಸಿದರು.

ಈ ವೇಳೆ ಬಿಜಿಪಿ ಮಂಡಲಾಧ್ಯಕ್ಷ ಗಂಗಿರೆಡ್ಡಿ ಮಾತನಾಡಿ, ಬಿಜೆಪಿ ಪಕ್ಷದ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿದ ಜನತೆ ಇಂದು ಬಿಜೆಪಿ ಪಕ್ಷದತ್ತ ವಾಲುತ್ತಿದ್ದಾರೆ. ನರೇಂದ್ರ ಮೋದಿ(Narendra Modi)ಯವರ ನೇತೃತ್ವದ ಸರ್ಕಾರ ಜನಪರ ಕೆಲಸಗಳನ್ನು ಮಾಡುತ್ತಿದ್ದು, ಇಡೀ ದೇಶದ ಜನತೆ ಮೋದಿಯವರ ಪರ ಇದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯ ಗಳಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ. ದೇಶದಲ್ಲಿ ಮುಂದೆ ನಡೆಯುವಂತಹ ಚುನಾವಣೆಗಳಲ್ಲಿ ಸಹ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದ್ದು, ಇಡೀ ಭಾರತ ಕೇಸರಿಮಯವಾಗಲಿದೆ ಎಂದರು.

ಇದನ್ನೂ ಓದಿ: Gudibande News: ಅರ್ಹ ಕಾರ್ಮಿಕರಿಗೆ ಸೌಲಭ್ಯಗಳು ದೊರೆಯಲಿ: ಹೆಚ್.ಪಿ.ರಾಮನಾಥ್

ಬಳಿಕ ಬಿಜೆಪಿ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಅಂಬರೀಶ್ ಮಾತನಾಡಿ, ಪಶ್ಚಿಮ ಬಂಗಾಳ(West Bengal)ದಲ್ಲಿ ದೀದಿ ನೇತೃತ್ವದ ಸರ್ಕಾರ ನಡೆಸುತ್ತಿದ್ದ ಅರಾಜಕತೆಗೆ ಇಂದು ಜನ ತಕ್ಕ ಪಾಠ ಕಲಿಸಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಪಕ್ಷ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳದ ಅಭಿವೃದ್ದಿಯತ್ತ ಸಾಗಲಿದೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಿದೆ. ಅದೇ ಮಾದರಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಸಹ ಬಿಜೆಪಿ ಪಕ್ಷ ಅಬ್ಬರಿಸಲಿದೆ. ಈ ಕ್ಷೇತ್ರದಲ್ಲೂ ಸಹ ಬಿಜೆಪಿ ಪಕ್ಷ ಜಯ ಗಳಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಿ ವಿ ಲಕ್ಷ್ಮೀ ವೇಣುಗೋಪಾಲ್, ಪ್ರಧಾನ ಕಾರ್ಯ ದರ್ಶಿ ಅರುಣ, ಜ್ಯೋತಿ, ಭಾರತಿ, ಪ್ರಧಾನ ಕಾರ್ಯದರ್ಶಿ ಗಗನ, ನಗರ ಘಟಕದ ರಾಜಮ್ಮ, ಯುವ ಮೋರ್ಚಾ ಅಧ್ಯಕ್ಷ, ನರಸಿಂಹಮೂರ್ತಿ, ಮಂಜುಳಾ ಸಿಂಗ್, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬೀಚಗಾನಹಳ್ಳಿ ಸುರೇಶ್, ರೈತ ಮೋರ್ಚಾ ಅಧ್ಯಕ್ಷ ಮುರಳಿ, ಪ್ರಧಾನ ಕಾರ್ಯದರ್ಶಿ ಅರುಣ್ ರೆಡ್ಡಿ, ಎಸ್ ಸಿ ಮೋರ್ಚಾ ಅಧ್ಯಕ್ಷ ಕಾಟನಹಳ್ಳಿ ನಾಗೇಶ್, ಬಿಜೆಪಿ ಮುಖಂಡ ಪ್ರೆಸ್ ಶಿವಪ್ಪ ಸೇರಿದಂತೆ ಹಲವರು ಇದ್ದರು.