ಚಿಂತಾಮಣಿ: ಕಳೆದ ದಿನ ಮನೆಯಿಂದ ಆಟವಾಡಲು ಹೋಗುತ್ತೇನೆ ಎಂದು ಹೋದ ಬಾಲಕ ಮರಳಿ ಮನೆಗೆ ವಾಪಸ್ ಬರದೇ ಇರುವ ಕಾರಣಕ್ಕೆ ಅವರ ಅಣ್ಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ದೂರು ದಾಖಲಿಸಿ ಹುಡುಕಾಟ ನಡೆಸುತ್ತಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಉಪ್ಪಾರಪೇಟೆ ಗ್ರಾಮದ ಮೊಹಮ್ಮದ್ ಇನಾಯತ್ ರವರ ಎರಡನೇ ಪುತ್ರ 14 ವರ್ಷದ ಮೊಹಮ್ಮದ್ ಅರ್ಹನ್ ಜು.9ರಂದು ಮನೆಯಿಂದ ಆಟವಾಡಲು ಹೋಗಿದ್ದಾನೆ.
ಇದನ್ನೂ ಓದಿ: Chinthamani News: ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಕೂಡ ಉತ್ತಮ ಕಾರ್ಯ: ಆರ್.ನರಸಿಂಹಮೂರ್ತಿ
ಸಂಜೆಯಾದರೂ ಮನೆಗೆ ಬಾರದೇ ಇರುವ ಕಾರಣಕ್ಕೆ ಅವರ ತಂದೆ ತಾಯಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದೇ ಇರುವ ಕಾರಣಕ್ಕೆ ಇಂದು ಅವರ ಅಣ್ಣ ಹಿದಾಯತ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.