ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gauribidanur News: ರೈಲ್ವೆ ಅಂಡರ್ ಪಾಸ್ ನಿರ್ಮಿಸಿ: ಸಂಸದ ಡಾ.ಕೆ.ಸುಧಾಕರ್‌ಗೆ ಮನವಿ

ನಗರಸಭೆ ವ್ಯಾಪ್ತಿಯ 21ನೇ ವಾರ್ಡ್‌ನಲ್ಲಿ ಅರವಿಂದ ನಗರ ಬಡಾವಣೆಯ ಮಾದನಹಳ್ಳಿ ಕೆರೆ ಅಂಗಳದಲ್ಲಿ ರೇಷ್ಮೆ ಇಲಾಖೆ, ಕೃಷಿ ಇಲಾಖೆ, ಬಿಸಿಎಂ ವಿದ್ಯಾರ್ಥಿ ನಿಲಯ, ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿ ನಿಲಯಗಳು, ಸುಮಾರು 25 ಜಾತಿಗಳ ಸಮುದಾಯ ಭವನಗಳು, ಸರ್ಕಾರಿ ಪದವಿ ಪೂರ್ವ ಕಾಲೇಜು, ಗುರುಭವನ, ಸರ್ಕಾರಿ ಕಚೇರಿಗಳಿವೆ.

ಗೌರಿಬಿದನೂರು : ನಗರದ ಹಳೇ ಮಧುಗಿರಿ ರಸ್ತೆ (ಕೋರ್ಟ್ ರಸ್ತೆ)ಯ ರೈಲ್ವೇ ಮಾರ್ಗ ದಲ್ಲಿ ಪ್ರೈವಾಕ್ ಅಥವಾ ಅಂಡರ್‌ಪಾಸ್ ನಿರ್ಮಿಸಿಕೊಡಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷೆ ರೂಪಾ ಅನಂತರಾಜು ಹಾಗೂ ಮಾಜಿ ಸದಸ್ಯ ಅನಂತರಾಜು ಸಂಸದ ಡಾ.ಕೆ. ಸುಧಾಕರ್‌(Dr K Sudhakar)ಗೆ ಮನವಿ ಸಲ್ಲಿಸಿದರು. 

ನಗರದ ಹಳೇ ಮಧುಗಿರಿ ರಸ್ತೆಯ ರೈಲ್ವೇ ಮಾರ್ಗದಲ್ಲಿ ಸೈವಾಕ್ ಅಥವಾ ಅಂಡರ್‌ಪಾಸ್‌ ನಿರ್ಮಿಸಿಕೊಡಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷೆ ರೂಪಾ ಅನಂತರಾಜು, ಮಾಜಿ ಸದಸ್ಯ ಅನಂತರಾಜು ಸಂಸದ ಡಾ.ಕೆ.ಸುಧಾಕರ್‌ಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Gauribidanur News: ವಿಜೃಂಭಣೆಯಿಂದ ನಡೆದ ರಂಭಾಪುರಿ ಶ್ರೀಗಳ ಅದ್ಧೂರಿ ಅಡ್ಡ ಪಲ್ಲಕ್ಕಿ ಉತ್ಸವ

ನಗರಸಭೆ ವ್ಯಾಪ್ತಿಯ 21ನೇ ವಾರ್ಡ್‌ನಲ್ಲಿ ಅರವಿಂದ ನಗರ ಬಡಾವಣೆಯ ಮಾದನಹಳ್ಳಿ ಕೆರೆ ಅಂಗಳದಲ್ಲಿ ರೇಷ್ಮೆ ಇಲಾಖೆ, ಕೃಷಿ ಇಲಾಖೆ, ಬಿಸಿಎಂ ವಿದ್ಯಾರ್ಥಿ ನಿಲಯ, ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿ ನಿಲಯಗಳು, ಸುಮಾರು 25 ಜಾತಿಗಳ ಸಮುದಾಯ ಭವನ ಗಳು, ಸರ್ಕಾರಿ ಪದವಿ ಪೂರ್ವ ಕಾಲೇಜು, ಗುರುಭವನ, ಸರ್ಕಾರಿ ಕಚೇರಿಗಳಿವೆ. 

ಇಲ್ಲಿಗೆ ಹೋಗಬೇಕಾದರೆ ಸುಮಾರು 2 ಕಿ.ಮೀ ಸುತ್ತಿಕೊಂಡು ಬರಬೇಕು. ಹಲವು ಬಾರಿ ರೈಲ್ವೇ ಹಳಿಗಳನ್ನು ದಾಟುವಾಗ ಸಾರ್ವಜನಿಕರು ರೈಲಿಗೆ ಸಿಲುಕಿ ಮೃತಪಟ್ಟ ಘಟನೆಗಳು ನಡೆದಿವೆ.ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ವಾಕ್ ಅಥವಾ ಅಂಡರ್‌ಪಾಸ್ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.