ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

50% Discount on fine: ಎಆರ್‌ಟಿಒ ಕಚೇರಿಯಿಂದ ವಾಹನ ಸವಾರರಿಗೆ ಬಂಪರ್ ಕೊಡುಗೆ: ಇಲಾಖಾ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ!

1991ರಿಂದ 2022 ರವರೆಗೆ ದಾಖಲಾಗಿ ರುವ ಇಲಾಖಾ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯ ವಾಗುತ್ತದೆ. ಈ ಅವಧಿಯಲ್ಲಿ ಬಾಕಿ ಇರುವ ದಂಡದ ಮೊತ್ತದಲ್ಲಿ ನೇರ ಶೇ.50ರಷ್ಟು ಕಡಿತ ಇರಲಿದೆ. ಸಾರ್ವಜನಿಕರು ಈ ಸೌಲಭ್ಯ ವನ್ನು 21-06-2026 ರಿಂದ 10-07-2026 ರವರೆಗೆ ಪಡೆದುಕೊಳ್ಳಲು ಕಾಲಾವಕಾಶ ನೀಡಲಾಗಿದೆ.

ಸಾರಿಗೆ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಚಿಂತಾಮಣಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯು ಸುವರ್ಣಾವಕಾಶವೊಂದನ್ನು ಕಲ್ಪಿಸಿಕೊಟ್ಟಿದೆ.

ಚಿಂತಾಮಣಿ: ಸಾರಿಗೆ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿ ರುವ ವಾಹನ ಸವಾರರಿಗೆ ಚಿಂತಾಮಣಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯು ಸುವರ್ಣಾವಕಾಶ ಕಲ್ಪಿಸಿಕೊಟ್ಟಿದೆ.

ಕರ್ನಾಟಕ ಸರ್ಕಾರದ ಆದೇಶದನ್ವಯ, ಸಾರಿಗೆ ಇಲಾಖೆಯಲ್ಲಿ ದಾಖಲಾಗಿರುವ ಹಳೆಯ ಪ್ರಕರಣ ಗಳ ದಂಡದ ಮೊತ್ತದ ಮೇಲೆ ಭರ್ಜರಿ ಶೇ.50ರಷ್ಟು ವಿನಾಯಿತಿ(50% exemption on fine amount for old cases)ಯನ್ನು ಘೋಷಿಸಲಾಗಿದ್ದು, ಈ ಕುರಿತು ಸಾರ್ವಜನಿಕರಲ್ಲಿ ಮತ್ತು ವಾಹನ ಚಾಲಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ.

ಇದನ್ನೂ ಓದಿ: Chinthamani News: ಎಸ್‌ಸಿ/ಎಸ್‌ಟಿ ನೌಕರರ ಮೇಲಿನ ದೌರ್ಜನ್ಯ ಮುಂದುವರಿದರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ: ಎಸ್‌ ಪ್ರದೀಪ್‌ ಎಚ್ಚರಿಕೆ

ಚಿಂತಾಮಣಿ ನಗರದ ಆಟೋ ನಿಲ್ದಾಣ, ಟೆಂಪೋ ನಿಲ್ದಾಣ ಸೇರಿದಂತೆ ಪ್ರಮುಖ ಜಾಗಗಳಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಆಟೋ ಚಾಲಕರು,ಲಾರಿ ಹಾಗೂ ಬಸ್ ಮಾಲೀಕರು ಮತ್ತು ಚಾಲಕರನ್ನು ಭೇಟಿ ಮಾಡಿ ಈ ಮಾಹಿತಿ ತಲುಪಿಸುತ್ತಿದ್ದಾರೆ.

ಕಚೇರಿಯ ಅಧಿಕಾರಿಗಳು ಆಟೋ ಚಾಲಕರ ನಿಲ್ದಾಣಗಳಿಗೆ ತೆರಳಿ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಎಆರ್‌ಟಿಒ ಅಧಿಕಾರಿ ಬೈರಾರೆಡ್ಡಿ, 1991ರಿಂದ 2022 ರವರೆಗೆ ದಾಖಲಾಗಿ ರುವ ಇಲಾಖಾ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗುತ್ತದೆ. ಈ ಅವಧಿಯಲ್ಲಿ ಬಾಕಿ ಇರುವ ದಂಡದ ಮೊತ್ತದಲ್ಲಿ ನೇರ ಶೇ.50ರಷ್ಟು ಕಡಿತ ಇರಲಿದೆ. ಸಾರ್ವಜನಿಕರು ಈ ಸೌಲಭ್ಯ ವನ್ನು 21-06-2026 ರಿಂದ 10-07-2026 ರವರೆಗೆ ಪಡೆದುಕೊಳ್ಳಲು ಕಾಲಾವಕಾಶ ನೀಡಲಾಗಿದೆ.

ಬಹಳ ವರ್ಷಗಳಿಂದ ಬಾಕಿ ಉಳಿದಿರುವ ಇಲಾಖಾ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ನೀಡಿರುವ ಈ ಕೊನೆಯ ಅವಕಾಶವನ್ನು ಚಿಂತಾಮಣಿ ತಾಲ್ಲೂಕಿನ ಪ್ರತಿಯೊಬ್ಬ ವಾಹನ ಸವಾರರು ಬಳಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿ ದ್ದಾರೆ.