ಶಿಡ್ಲಘಟ್ಟ : ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರು ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದು 3ನೇ ವಾರ್ಡಿನ ಮುಖಂಡರಾದ ಮನೋಹರ್ ತಿಳಿಸಿದರು.
ನಗರದ ಕೆ.ಕೆ ಪೇಟೆಯಲ್ಲಿ ಮೂರನೇ ವಾರ್ಡಿನ ಮಾಜಿ ಸದಸ್ಯ ಚಿತ್ರ ಮನೋಹರ್ ರವರ ನೇತೃತ್ವ ದಲ್ಲಿ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಮುದಾಯ ವೈದ್ಯಕೀಯ ವಿಭಾಗದಿಂದ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು ಜನರು ಆರೋಗ್ಯದ ಬಗ್ಗೆ ಕಾಳಜಿ ಉಂಟಾಗಬೇಕು. ಆರೋಗ್ಯ ತಪಾಸಣೆ ಕಾರ್ಯಕ್ರಮಗಳ ಪ್ರಯೋಜನ ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಎಂದರು.
ನಮ್ಮ ವಾರ್ಡಿನ ಮಹಿಳೆಯರು ಕೆಲಸದ ಒತ್ತಡದಿಂದ ಆರೋಗ್ಯ ಕಡೆ ಗಮನ ಹರಿಸುವುದಿಲ್ಲ, ಆದ್ದರಿಂದ ಮಹಿಳೆಯರು ಇಂತಹ ಆರೋಗ್ಯ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳೆ ಯರು ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚುಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಡಿ.ಎಂ ಸೌಭಾಗ್ಯ ಮಾತನಾಡಿ ಕಳೆದ ಒಂದು ವಾರದಿಂದ ಮೂರನೇ ವಾರ್ಡಿನ ಜನರಿಗೆ ಆರೋಗ್ಯ ತಪಾಸಣಾ ಶಿಬಿರದ ಬಗ್ಗೆ ಅರಿವು ಮೂಡಿಸಿದ ಚಿತ್ರ ಮನೋಹರ್ ರವರು ಮಂಗಳವಾರ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಎಂದಿಗೆ ನಮ್ಮ ವಾರ್ಡಿನ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಿದ್ದಾರೆ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯ ಹಾಗೂ ಅವರ ಕುಟುಂಬ ಆರೋಗ್ಯವಾಗಿರಲಿ ಅವರು ಮುಂದಿನ ದಿನಗಳಲ್ಲಿ ಇಂತಹ ಅನೇಕ ಶಿಬಿರಗಳು ನಮ್ಮ ವಾರ್ಡಿನ ಜನತೆಗೆ ಮಾಡಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಆರೋಗ್ಯ ಶಿಬಿರದಲ್ಲಿ 100 ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ಬಿಪಿ, ಶುಗರ್, ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ಸಸ್ಮಾಕ್ಯಾನ್ಸರ್, ಗಂಟಲು ಕ್ಯಾನ್ಸರ್, ಸ್ತ್ರೀರೋಗಿಗಳಿಗೆ ಪರೀಕ್ಷೆಯನ್ನು ಮಾಡಿಸಿದರೆ, ಕೆಲವು ರೋಗಗಳಿಗೆ ಸ್ಥಳದಲ್ಲಿ ಚಿಕಿತ್ಸೆ ನೀಡಿದರು, ಕೆಲವು ಸ್ತ್ರೀರೋಗಿಗಳಿಗೆ ಬೆಂಗಳೂರಿನ ಕೆಲವು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಶಾಂಭವಿ, ಡಾ.ನೇತ್ರಾವತಿ ಎಂ ಎ, ಡಾ.ಕಿರಣ್, ಜೀವನ್ ವೈ ಎಮ್, ಕೀರ್ತಿ ಎನ್, ಕಾಂತ ವಿ, ಕವಿತ ಎನ್, ಚೈತ್ರ ಎಸ್, ಯುವರಾಜ್ ಟಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಅಲುವೇಲು ಮಂಗಮ್ಮ, ಅಂಗನವಾಡಿ ಸಹಾಯಕಿ ಭವಾನಿ ಡಿಡಿ ಆಶಾ ಕಾರ್ಯಕರ್ತೆ ಶಶಿಕಲಾ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.