ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Eid Milad: ಜಿಲ್ಲೆಯಾದ್ಯಂತ ಸಡಗರ-ಸಂಭ್ರಮದ ಈದ್ ಮಿಲಾದ್ ಆಚರಣೆ

ಚಿಂತಾಮಣಿಯಲ್ಲಿ ಹಬ್ಬದ ಅಂಗವಾಗಿ ಪ್ರಮುಖ ಬೀದಿಗಳು ಹಾಗೂ ಮಸೀದಿಗಳ ಸಂಪರ್ಕ ರಸ್ತೆಗಳು ಕಣ್ಣು ಕೋರೈಸುವ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು. ದೊಡ್ಡಪೇಟೆಯ ಜಾಮಿಯಾ ಮಸೀದಿ ಬಳಿ ಆರಂಭವಾದ ಅದ್ಧೂರಿ ಮೆರವಣಿಗೆ ಮೆಹಬೂಬ್ ನಗರ, ಶಾಂತಿನಗರ, ಹೂವಿನಪೇಟೆ, ನೆಕ್ಕುಂದಿಪೇಟೆ, ಚೇಳೂರು ರಸ್ತೆ ಹಾಗೂ ಗಜಾನನ ವೃತ್ತದ ಮೂಲಕ ಈದ್ಗಾ ಮೈದಾನ ತಲುಪಿತು

ಚಿಂತಾಮಣಿ, ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ಮೆರವಣಿಗೆ

ಶಾಂತಿ, ಸೌಹಾರ್ದದ ಸಂದೇಶ ಸಾರಿದ ಧರ್ಮಗುರುಗಳು

ಚಿಕ್ಕಬಳ್ಳಾಪುರ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಆಚರಿಸುವ ಈದ್ ಮಿಲಾದ್(Eid Milad) ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಿದರು. ಜಿಲ್ಲೆಯ ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಮಸೀದಿಗಳನ್ನು ಅಲಂಕರಿಸಿ, ವಿಶೇಷ ಪ್ರಾರ್ಥನೆ ಹಾಗೂ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು.

ಚಿಂತಾಮಣಿಯಲ್ಲಿ ಹಬ್ಬದ ಅಂಗವಾಗಿ ಪ್ರಮುಖ ಬೀದಿಗಳು ಹಾಗೂ ಮಸೀದಿಗಳ ಸಂಪರ್ಕ ರಸ್ತೆಗಳು ಕಣ್ಣು ಕೋರೈಸುವ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು. ದೊಡ್ಡಪೇಟೆಯ ಜಾಮಿಯಾ ಮಸೀದಿ ಬಳಿ ಆರಂಭವಾದ ಅದ್ಧೂರಿ ಮೆರವಣಿಗೆ ಮೆಹಬೂಬ್ ನಗರ, ಶಾಂತಿನಗರ, ಹೂವಿನಪೇಟೆ, ನೆಕ್ಕುಂದಿಪೇಟೆ, ಚೇಳೂರು ರಸ್ತೆ ಹಾಗೂ ಗಜಾನನ ವೃತ್ತದ ಮೂಲಕ ಈದ್ಗಾ ಮೈದಾನ ತಲುಪಿತು. ಹಸಿರು ಧ್ವಜಗಳು, ಮೆಕ್ಕಾ–ಮದೀನಾ ಹಾಗೂ ಮಸೀದಿಗಳ ಪ್ರತಿಕೃತಿಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು. ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಸಲ್ಲಿಸ ಲಾಯಿತು.

ಇದನ್ನೂ ಓದಿ: Eid Milad Jewel Fashion 2026: ಈದ್ ಮಿಲಾದ್‌ಗೆ ಬಂತು ಮಿನುಗುವ ಇಯರಿಂಗ್ಸ್

ಚಿಕ್ಕಬಳ್ಳಾಪುರ ನಗರದಲ್ಲಿ ಮಿಲಾದ್ ಸಮಿತಿ ನೇತೃತ್ವದಲ್ಲಿ ಜಲೂಸ್‌-ಎ-ಮುಹಮ್ಮದಿ ನಡೆಯಿತು. ಜಾಮಿಯಾ ಮಸೀದಿ ಟೌನ್‌ಹಾಲ್‌ನಿಂದ ಆರಂಭವಾದ ಜಲೂಸ್‌ ಬಜಾರ್ ರಸ್ತೆ, ಬಿಬಿ ರಸ್ತೆ ಹಾಗೂ ಎಂಜಿ ರಸ್ತೆ ಮೂಲಕ ಈದ್ಗಾ ಮೈದಾನ ತಲುಪಿತು. ಅಲ್ಲಿ ಅಸರ್ ನಮಾಝ್ ನೆರವೇರಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಂಡು ಭಕ್ತಿಭಾವ ಮೆರೆದರು.

26cbpm7cbp eid

ಈ ಸಂದರ್ಭದಲ್ಲಿ ಧರ್ಮಗುರುಗಳು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಹಾಗೂ ಸಂದೇಶಗಳನ್ನು ಸ್ಮರಿಸಿ, ಕರುಣೆ, ಸಂಯಮ, ಶಿಸ್ತು, ಸಹೋದರತ್ವ ಹಾಗೂ ನೆರೆಯವರ ಹಕ್ಕು ಗಳನ್ನು ಗೌರವಿಸುವ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಚಿಂತಾಮಣಿ ಜಾಮಿಯಾ ಮಸೀದಿ ಅಧ್ಯಕ್ಷ ಮೂನ್ ಸ್ಟಾರ್ ಗೌಸ್ ಪಾಷಾ ಮಾತನಾಡಿ, “ಭಿನ್ನಾಭಿ ಪ್ರಾಯಗಳನ್ನು ಮರೆತು ಎಲ್ಲರೂ ಸಹೋದರರಂತೆ ಶಾಂತಿ ಮತ್ತು ಸೌಹಾರ್ದದಿಂದ ಬದುಕಬೇಕು. ಪ್ರವಾದಿಯವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅರ್ಥ ಪೂರ್ಣವಾಗಿ ಹಬ್ಬ ಆಚರಿಸಬೇಕು” ಎಂದರು.

ಹಬ್ಬದ ಅಂಗವಾಗಿ ಮನೆಗಳಲ್ಲಿ ಸಿಹಿ ತಿಂಡಿಗಳನ್ನು ತಯಾರಿಸಿ ವಿತರಿಸಲಾಯಿತು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಿಲ್ಲೆಯಾದ್ಯಂತ ಈದ್ ಮಿಲಾದ್ ಮೆರವಣಿಗೆಗಳು ಶಾಂತಿಯುತವಾಗಿ ನಡೆಯುವಂತೆ ಪೊಲೀಸ್ ಇಲಾಖೆ ಬಿಗಿ ಬಂದೋ ಬಸ್ತ್ ಕಲ್ಪಿಸಿತ್ತು.