ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA becoming a father: ಹೆಣ್ಣು ಮಗುವಿನ ಜನನದಿಂದ ಕುಟುಂಬದಲ್ಲಿ ಸಂಭ್ರಮ; ತಂದೆಯಾದ ಸಂತಸ ಹಂಚಿಕೊಂಡ ಶಾಸಕ

ಹೆಣ್ಣು ಮಗುವಿನ ಜನನವನ್ನು ಮಹಾಲಕ್ಷ್ಮಿಯ ಆಗಮನವೆಂದು ಭಾವಿಸಿ ಸಂಭ್ರಮಿಸಿರುವ ಶಾಸಕರ ಮಾತು ಹೆಣ್ಣು ಮಗುವಿನ ಮೇಲಿನ ಪ್ರೀತಿ, ಗೌರವ ಹಾಗೂ ಕುಟುಂಬದ ಸಂತೋಷವನ್ನು ಪ್ರತಿಬಿಂಬಿಸಿದೆ. ರಾಜಕೀಯದ ಒತ್ತಡ, ಸಾರ್ವಜನಿಕ ಜೀವನದ ಜವಾಬ್ದಾರಿಗಳ ನಡುವೆ ತಂದೆಯಾದ ಕ್ಷಣ ಅವರ ಪಾಲಿಗೆ ಮರೆಯಲಾಗದ ಭಾವನಾತ್ಮಕ ಅನುಭವವಾಗಿದೆ.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್(Pradeep Eshwar) ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕ ಪ್ರದೀಪ್ ಈಶ್ವರ್ ಹಾಗೂ ಅವರ ಪತ್ನಿಗೆ ಹೆಣ್ಣು ಮಗು ಜನಿಸಿದ್ದು, ದಂಪತಿ ತಮ್ಮ ಜೀವನದ ಅತ್ಯಂತ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಕುಟುಂಬಕ್ಕೆ ಪುಟ್ಟ ಕಂದಮ್ಮನ ಆಗಮನವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಶಾಸಕ ಪ್ರದೀಪ್ ಈಶ್ವರ್ ಅವರು, 'ನನ್ನ ಮನೆಗೆ ಸಾಕ್ಷಾತ್ ಮಹಾಲಕ್ಷ್ಮೀಯೇ ಬಂದಿದ್ದಾಳೆ' ಎಂದು ಸಂಭ್ರಮ ಹಂಚಿಕೊಂಡಿರುವುದು ಎಲ್ಲರ ಗಮನ ಸೆಳೆದಿದೆ.

ಹೆಣ್ಣು ಮಗುವಿನ ಜನನವನ್ನು ಮಹಾಲಕ್ಷ್ಮಿಯ ಆಗಮನವೆಂದು ಭಾವಿಸಿ ಸಂಭ್ರಮಿಸಿರುವ ಶಾಸಕರ ಮಾತು ಹೆಣ್ಣು ಮಗುವಿನ ಮೇಲಿನ ಪ್ರೀತಿ, ಗೌರವ ಹಾಗೂ ಕುಟುಂಬದ ಸಂತೋಷವನ್ನು ಪ್ರತಿಬಿಂಬಿಸಿದೆ. ರಾಜಕೀಯದ ಒತ್ತಡ, ಸಾರ್ವಜನಿಕ ಜೀವನದ ಜವಾಬ್ದಾರಿಗಳ ನಡುವೆ ತಂದೆ ಯಾದ ಕ್ಷಣ ಅವರ ಪಾಲಿಗೆ ಮರೆಯಲಾಗದ ಭಾವನಾತ್ಮಕ ಅನುಭವವಾಗಿದೆ.

ಇದನ್ನೂ ಓದಿ: MLA Pradeep Eshwar: ಜನರ ಸಮಸ್ಯೆ ಆಲಿಸುವುದೇ ನನಗೆ ಆತ್ಮತೃಪ್ತಿ: ಶಾಸಕ ಪ್ರದೀಪ್ ಈಶ್ವರ್

ಸಾಮಾನ್ಯವಾಗಿ ಸಾರ್ವಜನಿಕ ಜೀವನದಲ್ಲಿ ರಾಜಕೀಯ ವಿಚಾರಗಳು, ಕ್ಷೇತ್ರದ ಅಭಿವೃದ್ಧಿ ಹಾಗೂ ಜನಪರ ಚಟುವಟಿಕೆಗಳ ಮೂಲಕ ಗುರುತಿಸಿಕೊಳ್ಳುವ ಪ್ರದೀಪ್ ಈಶ್ವರ್ ಅವರ ಬದುಕಿನಲ್ಲಿ ಇದೀಗ ಹೊಸ ಅಧ್ಯಾಯ ಆರಂಭವಾಗಿದೆ. ಪುಟ್ಟ ಕಂದಮ್ಮನ ಆಗಮನದಿಂದ ಕುಟುಂಬದ ಸಂತೋಷ ಇಮ್ಮಡಿಗೊಂಡಿದ್ದು, ಮನೆಮಂದಿಯ ಪಾಲಿಗೆ ಈ ಕ್ಷಣ ಅವಿಸ್ಮರಣೀಯವಾಗಿದೆ.

ಶಾಸಕರಿಗೆ ಹೆಣ್ಣು ಮಗು ಜನಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು, ಪಕ್ಷದ ಕಾರ್ಯ ಕರ್ತರು, ಸ್ನೇಹಿತರು ಹಾಗೂ ಹಿತೈಷಿಗಳು ಸಂತಸ ವ್ಯಕ್ತಪಡಿಸಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ.

18cbpm8mla magu ok

ಹೆಣ್ಣು ಮಗು ಕುಟುಂಬಕ್ಕೆ ಮಾತ್ರವಲ್ಲ, ತಂದೆ-ತಾಯಿಯ ಬದುಕಿಗೂ ಹೊಸ ಭರವಸೆ, ಪ್ರೀತಿ ಮತ್ತು ಹೊಣೆಗಾರಿಕೆಯ ಸಂಕೇತ. ಶಾಸಕ ಪ್ರದೀಪ್ ಈಶ್ವರ್ ದಂಪತಿಯ ಮಡಿಲಿಗೆ ಬಂದಿರುವ ಪುಟ್ಟ ಮಹಾಲಕ್ಷ್ಮಿ ಆರೋಗ್ಯ, ಆಯುಷ್ಯ, ವಿದ್ಯೆ ಹಾಗೂ ಸಂಸ್ಕಾರದಿಂದ ಸಮೃದ್ಧಳಾಗಿ ಬೆಳೆಯಲಿ. ತಂದೆ-ತಾಯಿಗೆ ಹೆಮ್ಮೆ ತರುವ ಮಗಳಾಗಿ ಬಾಳಲಿ ಎಂಬುದು ಕ್ಷೇತ್ರದ ಜನತೆ ಹಾಗೂ ಅಭಿಮಾನಿಗಳ ಹಾರೈಕೆಯಾಗಿದೆ.

ಮತ್ತೊಂದು ಕಡೆ ತಾಲೂಕಿನ ಕಾಕಲಚಿಂತೆ ಗ್ರಾಮದ ಭೈರವೇಶ್ವರ ದೇವಾಲಯದಲ್ಲಿ 101 ತೆಂಗಿನ ಕಾಯಿ ಒಡೆಯುವ ಮೂಲಕ ಪೂಜೆ ಸಲ್ಲಿಸಿ ಮನೆಗೆ ಮಹಾಲಕ್ಷ್ಮೀ ಬಂದಿರುವುದು ಶಾಸಕರಿಗೆ ಒಳಿತಾಗಲಿದೆ.ರಾಜಕೀಯವಾಗಿಯೂ ಅವರು ಇನೂ ಹೆಚ್ಚಿನ ಸ್ಥಾನಮಾನ ಪಡೆಯುವುದು ಖಚಿತ ಎಂದು ಮಾಜಿ ಶಾಸಕ ಶಿವಾನಂದ್, ಕುಡಾ ಅಧ್ಯಕ್ಷ ಸಂದೀಪ್‌ಚಕ್ರವರ್ತಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಅಭಿಪ್ರಾಯಪಟ್ಟರು.

ಈ ವೇಳೆ ಗ್ರಾಮಸ್ಥರು ಸೇರಿ ಅಪಾರ ಸಂಖ್ಯೆಯ ಅಭಿಮಾನಿಗಳು ಪೂಜೆಯಲ್ಲಿ ಭಾಗವಹಿಸಿದ್ದರು.