ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shidlaghatta News: ವೇದಘೋಷ ಮೊಳಗಿದ ಶ್ರೀ ನಗರೇಶ್ವರ ಸ್ವಾಮಿ ಸನ್ನಿಧಿ: ಲೋಕ ಕಲ್ಯಾಣ, ವಿಶ್ವಶಾಂತಿ ಹಾಗೂ ರೈತರ ಸಮೃದ್ಧಿಗೆ ವಿಶೇಷ ವೇದಪಾರಾಯಣ

ವೇದೋ ನಿತ್ಯಮಧೀಯತಾಂ" ಎಂಬ ಸಂದೇಶವು ವೇದ ಅಧ್ಯಯನ ಹಾಗೂ ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮಹತ್ವವನ್ನು ಸಾರುತ್ತದೆ. ವೇದಮಂತ್ರಗಳ ಪಾರಾಯಣವು ಲೋಕ ಕಲ್ಯಾಣ, ವಿಶ್ವ ಶಾಂತಿ, ಸಕಾಲಿಕ ಮಳೆ ಹಾಗೂ ರೈತರ ಸಮೃದ್ಧಿಗಾಗಿ ಸಲ್ಲಿಸುವ ಮಹಾಯಜ್ಞವಾಗಿದ್ದು, ಇಂತಹ ಕಾರ್ಯಕ್ರಮಗಳು ಸನಾತನ ಧರ್ಮದ ಪರಂಪರೆಯನ್ನು ಉಳಿಸಿ ಧಾರ್ಮಿಕ ಜಾಗೃತಿ ಮೂಡಿಸು ತ್ತವೆ

ಶಿಡ್ಲಘಟ್ಟ: ಆಷಾಢ ಮಾಸದ ಅಂಗವಾಗಿ ನಗರದ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಶಿಡ್ಲಘಟ್ಟ ತಾಲೂಕಿನ ಅರ್ಚಕರ ಸಂಘದ ವತಿಯಿಂದ ಭಕ್ತಿಭಾವದಿಂದ ವಿಶೇಷ ವೇದಪಾರಾಯಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಮಂಡಳಿಯ ಉಪಾಧ್ಯಕ್ಷ ಎಸ್. ನಾಗರಾಜ್, ಆಷಾಢ ಮಾಸದಲ್ಲಿ ನಡೆಯುವ ವೇದಪಾರಾಯಣವು ಲೋಕ ಕಲ್ಯಾಣ, ವಿಶ್ವಶಾಂತಿ, ಸಕಾಲಿಕ ಮಳೆ, ರೈತರ ಸಮೃದ್ಧಿ ಹಾಗೂ ಸಮಾಜದಲ್ಲಿ ಸುಖ-ಶಾಂತಿ ನೆಲೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ವೇದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಭಕ್ತರು ಇಂತಹ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Shidlaghatta News: ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಿ: ತಹಶೀಲ್ದಾರ್ ಗಗನ್ ಸಿಂಧು

ಅರ್ಚಕರಾದ ಎಸ್. ಸತ್ಯನಾರಾಯಣ ರಾವ್ ಮಾತನಾಡಿ, "ವೇದೋ ನಿತ್ಯಮಧೀಯತಾಂ" ಎಂಬ ಸಂದೇಶವು ವೇದ ಅಧ್ಯಯನ ಹಾಗೂ ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ ಮಹತ್ವವನ್ನು ಸಾರುತ್ತದೆ. ವೇದಮಂತ್ರಗಳ ಪಾರಾಯಣವು ಲೋಕ ಕಲ್ಯಾಣ, ವಿಶ್ವ ಶಾಂತಿ, ಸಕಾಲಿಕ ಮಳೆ ಹಾಗೂ ರೈತರ ಸಮೃದ್ಧಿಗಾಗಿ ಸಲ್ಲಿಸುವ ಮಹಾಯಜ್ಞವಾಗಿದ್ದು, ಇಂತಹ ಕಾರ್ಯಕ್ರಮಗಳು ಸನಾತನ ಧರ್ಮದ ಪರಂಪರೆಯನ್ನು ಉಳಿಸಿ ಧಾರ್ಮಿಕ ಜಾಗೃತಿ ಮೂಡಿಸು ತ್ತವೆ ಎಂದು ತಿಳಿಸಿದರು.

ಬಳಿಕ ತಾಲೂಕಿನ ಅರ್ಚಕರ ಸಂಘದ ಅರ್ಚಕರು ವೇದಮಂತ್ರಗಳನ್ನು ಪಠಿಸಿ, ಶ್ರೀ ನಗರೇಶ್ವರ ಸ್ವಾಮಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವೇದಘೋಷದ ನಡುವೆ ಲೋಕ ಕಲ್ಯಾಣ, ಉತ್ತಮ ಮಳೆ ಹಾಗೂ ರೈತರ ಸಮೃದ್ಧಿ ಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ್ತ ಮಂಡಳಿ ಅಧ್ಯಕ್ಷ ಶಿವಶಂಕರ್, ಕೆ.ಸಿ. ಸುರೇಶ್ ಬಾಬು, ಆರ್. ಮಲ್ಲಿಕಾರ್ಜುನ್, ನವೀನ್, ಮುರಳಿ, ದೇವಾಲಯದ ಅರ್ಚಕರಾದ ಮಂಜುನಾಥ್, ಎಸ್.ಆರ್. ರಾಮಚಂದ್ರ, ಕೆ.ವಿ. ವಸಂತ್ ಕುಮಾರ್, ವೆಂಕಟೇಶ್ ಮೂರ್ತಿ, ಶ್ರೀ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಮಂಡಳಿಯ ಪದಾಧಿಕಾರಿಗಳು, ಮಹಿಳಾ ಮಂಡಳಿ ಸದಸ್ಯರು, ಶಿಡ್ಲಘಟ್ಟ ತಾಲೂಕಿನ ಅರ್ಚಕರ ಸಂಘದ ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.