ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr G Parameshwar: ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಶಾಂತಿಯುತ ಜಿಲ್ಲೆ ಎಂಬ ಹಿರಿಮೆಗೆ ಪಾತ್ರವಾಗಿದೆ : ಗೃಹಸಚಿವ ಡಾ.ಜಿ.ಪರಮೇಶ್ವರ ಶ್ಲಾಘನೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರುವಂತೆ, ಜಿಲ್ಲೆಯಲ್ಲಿಯೂ ಚೆನ್ನಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯು ಕಾಲಕಾಲಕ್ಕೆ ಕೈಗೊಂಡ ಕಟ್ಟುನಿಟ್ಟಿನ ಕ್ರಮ ಗಳಿಂದಾಗಿ ಇದು ಸಾಧ್ಯವಾಗಿದೆ ಎಂಬುದು ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನೆಯಿಂದ ಮನವರಿಕೆ ಯಾಗಿದ್ದು ಜಿಲ್ಲಾ ಪೊಲೀಸ್ ಇಲಾಖೆಯನ್ನು ಶ್ಲಾಘಿಸುತ್ತೇನೆ

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರುವಂತೆ, ಜಿಲ್ಲೆಯಲ್ಲಿಯೂ ಚೆನ್ನಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯು ಕಾಲಕಾಲಕ್ಕೆ ಕೈಗೊಂಡ ಕಟ್ಟುನಿಟ್ಟಿನ ಕ್ರಮ ಗಳಿಂದಾಗಿ ಇದು ಸಾಧ್ಯವಾಗಿದೆ ಎಂಬುದು ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನೆ ಯಿಂದ ಮನವರಿಕೆಯಾಗಿದ್ದು ಜಿಲ್ಲಾ ಪೊಲೀಸ್ ಇಲಾಖೆಯನ್ನು ಶ್ಲಾಘಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರ ಹೊರ ವಲಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೊಲೀಸ್ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.  

ರಾಜ್ಯದ ಗಡಿಗಳ ಮೂಲಕ ಗಾಂಜಾ ಮತ್ತಿತರೆ ಮಾದಕ ವಸ್ತುಗಳು ಸರಬರಾಜು ಆಗುತ್ತಿ ರುವ ಬಗ್ಗೆ ಮಾಹಿತಿಯಿದೆ. ಚಿಕ್ಕಬಳ್ಳಾಪುರ ಜಿಲ್ಲೆಯು ಆಂಧ್ರದ ಗಡಿಯನ್ನು ಹಂಚಿ ಕೊಂಡಿದ್ದ ಈ ಮೂಲಕ ರಾಜ್ಯಕ್ಕೆ ಮಾದಕ ವಸ್ತುಗಳಾದ ಗಾಂಜಾ, ಡ್ರಗ್ಸ್, ಅಕ್ರಮ ಮದ್ಯ ಇತ್ಯಾದಿಗಳು ಸರಬರಾಜು ಆಗದಂತೆ ಚೆಕ್ ಪೋಸ್ಟ್ ಸ್ಥಾಪಿಸಲು ಸೂಚಿಸಿದೆ. ಜಿಲ್ಲೆಯಲ್ಲಿ ಕಳೆದ ವರ್ಷ 24 ಕೊಲೆಗಳಾಗಿದ್ದು ನಿಗದಿತ ಕಾಲಮಿತಿಯಲ್ಲಿ ಎಲ್ಲವನ್ನೂ ಬೇಧಿಸ ಲಾಗಿದ್ದು ಅಪರಾಧಿಗಳನ್ನು ಜೈಲಿಗಟ್ಟಲಾಗಿದೆ ಎಂದು ಹೇಳಿದರು.

Chikkaballapur News: ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರಿ ಚೇತನಾ ಅಭಿಯಾನ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಿಯುಸಿ ನಂತರ ಉನ್ನತ ವ್ಯಾಸಾಂಗ ಮಾಡುತ್ತಿರುವವರು  ಸುಮಾರು 40 ರಿಂದ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಈ ಬೃಹತ್ ಪ್ರಮಾಣದ ಯುವಜನತೆ  ಮಾದಕ ವಸ್ತುಗಳಿಗೆ ಬಲಿಯಾಗಬಾರದು. ವ್ಹೀಲಿಂಗ್ ನಿಯಂತ್ರಣಕ್ಕೂ ಪೊಲೀಸ್ ಇಲಾಖೆ ಕ್ರಮ ವಹಿಸಿದ್ದು ಇನ್ನೂ ಹೆಚ್ಚಿನ ಕಟ್ಟುನಿಟ್ಟು ಕ್ರಮ ಕೈಗೊಳ್ಳಲು ಇಲಾಖೆಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ಚಿಕ್ಕಬಳ್ಳಾಪರ ಜಿಲ್ಲೆಯು ಎರಡು ಬೃಹತ್ ಹೆದ್ದಾರಿಗಳನ್ನು ಒಳಗೊಂಡಿದ್ದು ಇಲ್ಲಿ ಅಪಘಾತಗಳ ಸಂಖ್ಯೆ ಹಾಗೂ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಸಹ ಹೆಚ್ಚಿದೆ. 2.5 ವರ್ಷದಲ್ಲಿ 700 ಮಂದಿ ಮೃತಪಟ್ಟು 1400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕಾರಣವಾಗುತ್ತಿರುವ  ಟಿಪ್ಪರ್ ಸೇರಿದಂತೆ ಬೃಹತ್ ವಾಹನಗಳ ಸಂಚಾರ ನಿಯಂತ್ರಣ ಹಾಕಬೇಕಾದ ಅವಶ್ಯಕತೆ ಇದೆ.ಮುಖ್ಯವಾಗಿ ಹೆದ್ದಾರಿಯಲ್ಲಿ 19 ಬ್ಲಾಕ್ ಸ್ಪಾಟ್‌ಗಳನ್ನು ಗುರ್ತಿಸಿದ್ದು ಮೈಸೂರು ಹೆದ್ಧಾರಿಯಂತೆ ಇಲ್ಲಿಯೂ ಕೂಡ ಸೈನ್ ಬೋರ್ಡ್ಗಳನ್ನು ಅಳವಡಿಸಬೇಕಿದೆ.ಈ ಕೆಲಸ ಮಾಡಲು ಆರ್.ಟಿಒ ಮತ್ತು ಹೆದ್ಧಾರಿ ಪ್ರಾಧಿಕಾರಕ್ಕೆ ಜಿಲ್ಲಾಡಳಿತ ಸೂಚಿಸಲು ನಿರ್ದೇಶನ ನೀಡಲಾಗಿದೆ ಎಂದರು.

ಶಿಕ್ಷೆ ಪ್ರಮಾಣ ಹೆಚ್ಚಿಸಬೇಕಿದೆ ?
ಪೋಕ್ಸೋ ಪ್ರಕರಣಗಳಲ್ಲಿ ಸಾಕ್ಷಿ ಕೊರತೆ ಕಾರಣ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿರುವ ಪ್ರಮಾಣ ಕಡಿಮೆಯಾಗಿದೆ ಎಂದು ವಿಷಾದಿಸಿದ ಅವರು ಶಿಕ್ಷೆ ಪ್ರಮಾಣ ಹೆಚ್ಚಿಸಲು ನೆರವಾಗುವ ಸಾಕ್ಷಿಗಳನ್ನು ಕರೆ ತರುವ ಕೆಲಸ ಮಾಡಲು ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ 165 ಹೆಚ್ಚು ಪೊಲೀಸ್ ಸಿಬ್ಬಂದಿಗಳ ಹುದ್ದೆಗಳು ಖಾಲಿ ಇದ್ದು  ಇವುಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಶೇ 46ರಷ್ಟು ಪೊಲೀಸ್ ವಸತಿ ಗೃಹಗಳ ಸೌಲಭ್ಯವಿದ್ದು ಇದನ್ನು ಶೇಕಡವಾರು 80ರಷ್ಟು ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದರು.

ಬಿಜೆಪಿ ಆಕ್ರೋಶ ಯಾತ್ರೆ
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಕೈಗೊಂಡಿರುವುದು ಜನಾಕ್ರೋಶಯಾತ್ರೆ ಅಲ್ಲವೇ ಅಲ್ಲ.೨೦೦೦ ಹಣ ಬೇಡ, ಫ್ರೀ ಬಸ್ ಬೇಡ, ವಿದ್ಯುತ್ ಬೇಡ, ಒಟ್ಟಾರೆ ಗ್ಯಾರೆಂಟಿಗಳು ಬೇಡ ಎಂದು ಯಾರು ಬೀದಿಗೆ ಬಂದಿದ್ದಾರೆ ಹೇಳಿ ನೋಡೋಣ. ಶಬ್ದಕೋಶದಲ್ಲಿ ಇದೆ ಎಂದು ಪದಬಳಕೆ ಮಾಡುವುದಲ್ಲ ಎಂದ ಅವರು,ಕಾಂಗ್ರೆಸ್ ಪಕ್ಷದ ಯಶಸ್ವೀ ಆಡಳಿತ ಸಹಿಸ ಲಾಗದೆ ಬಿಜೆಪಿ ಪಕ್ಷದ ಮುಖಂಡರು ಹೂಡಿರುವ ಕುತಂತ್ರವೇ ಈ ಯಾತ್ರೆ. ಆದ್ದರಿಂದ ಇದು  ಜನಾಕ್ರೋಶವಲ್ಲ ಬದಲಿಗೆ ಬಿಜೆಪಿ ಪಕ್ಷದ ಆಕ್ರೋಶ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಆಡಳಿತ ವೈಖರಿ ನೋಡಿ ಬಿಜೆಪಿ ಪಕ್ಷದವರಿಗೆ ಭಯ ಹುಟ್ಟಿದೆ ಹಾಗಾಗಿ ಜನರನ್ನು ದಿಕ್ಕು ತಪ್ಪಿಸುವ ಸಲು ವಾಗಿ, ಕೇಂದ್ರದ ವರಿಷ್ಠರನ್ನು ಮೆಚ್ಚಿಸುವ ಸಲುವಾಗಿ ಜನಾಕ್ರೋಶದ ಹೆಸರಿನಲ್ಲಿ ಬಿಜೆಪಿ ಆಕ್ರೋಶದ ಯಾತ್ರೆ ಕೈಗೊಂಡಿದ್ದಾರೆ ಎಂದರು.

ಕುಮಾರಸ್ವಾಮಿ ಪ್ರಭಾವಿ
ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯ ಸರಕಾರದ ವಿರುದ್ಧ ಯುದ್ಧ ಸಾರಿರುವುದಾಗಿ ಹೇಳಿರುವ ಮಾತಿಗೆ ಪ್ರತಿಕ್ರಯಿಸಿದ ಗೃಹಸಚಿವರು ಅವರು ಕೇಂದ್ರದ ಪ್ರಭಾವಿ ಸಚಿವರು. ರಾಜ್ಯದ ಪ್ರತಿನಿಧಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಅತ್ಯಂತ ಪ್ರಭಾವ ಯುತವಾದ ಕೈಗಾರಿಕಾ ಖಾತೆ ಹೊಂದಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಅವರ ಸಚಿವಾ ಲಯದ ಪಾತ್ರ ದೊಡ್ಡದಿದೆ.ಅಂತಹ ಕುಮಾರಸ್ವಾಮಿ ಬಗ್ಗೆ ನಾವೇನಾದರೂ ಮಾತನಾ ಡಲು ಆಗುತ್ತಾ? ದೇಶದ ಕೈಗಾರಿಕೆಗಳೆಲ್ಲವೂ ಅವರ ಸುಪರ್ಧಿಗೆ ಬರುತ್ತದೆ. ಹೀಗಾಗಿ ಅವರು ರಾಜ್ಯದ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ತಿರುಗೇಟು ನೀಡದರು.

ಬೆಲೆ ಏರಿಕೆ ಕೇಂದ್ರದ ಕೊಡುಗೆ!!
ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಜಿಎಸ್‌ಟಿ ಪಾವತಿ ಮಾಡುತ್ತಿರುವ ರಾಜ್ಯಗಳ ಪೈಕಿ ನಮ್ಮದು ೨ನೇ ಸ್ಥಾನದಲ್ಲಿದೆ.ಸತ್ಯ ಹೀಗಿದ್ದರೂ ನಮ್ಮ ಪಾಲನ್ನು ನಮಗೆ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ.ರಾಜ್ಯದ ಬೆಲೆ ಏರಿಕೆಗೆ ಕೇಂದ್ರಸರಕಾರ ಬೆಲೆ ಏರಿಕೆಯೇ ಕಾರಣವಾಗಿದೆ.ಜನಪರ ಆಡಳಿತಕ್ಕೆ ಬೆಲೆಯೇರಿಕೆ ಅನಿವಾರ್ಯ ಎಂದು ಸಮರ್ಥಿಸಿ ಕೊಂಡರು.

ತನಿಖೆಯಿಂದ ಸತ್ಯ!!
ಕೊಡಗಿನ ವಿನಯ್ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ.ತನಿಖೆ ಮುಗಿದ ಬಳಿಕ ಸತ್ತಾಸತ್ಯತೆ ಗೊತ್ತಾಗಲಿದೆ.ತನಿಖೆಯಲ್ಲಿರುವಾಗ ಈ ಬಗ್ಗೆ ಏನನ್ನೂ ಪ್ರತಿಕ್ರಯಿಸಲಾರೆ ಎನ್ನುವ ಮೂಲಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಜಿಲ್ಲಾ ಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ಎಸ್ಪಿ ಕಚೇರಿಯ ಬಳಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಈ ವೇಳೆ ಸಚಿವರಿಗೆ ಶಾಸಕ ಪ್ರದೀಪ್ ಈಶ್ವರ್ ಸಾಥ್ ನೀಡಿದ್ದರು.

ಈ ಸಂದರ್ಭದಲ್ಲಿ ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕರಾದ ಲಾಬುರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಪೊಲೀಸ್ ಅಧಿಕಾರಿಗಳು ಇದ್ದರು.