ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Tax Collection: ತೆರಿಗೆ ಸಂಗ್ರಹಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ

ಚಿಕ್ಕಬಳ್ಳಾಪುರ ತಾಲ್ಲೂಕು ತೆರಿಗೆ ಸಂಗ್ರಹದಲ್ಲಿ ಶೇಕಡಾ 97.82% ರಷ್ಟು ಪ್ರಗತಿ ಸಾಧಿಸಿ ಪ್ರಥಮ ಸ್ಥಾನದಲ್ಲಿದ್ದರೆ. ಚಿಂತಾಮಣಿ ತಾಲ್ಲೂಕು ಶೇಕಡಾ 96.72%, ಗೌರಿಬಿದನೂರು ತಾಲ್ಲೂಕು ಶೇಕಡಾ 93.71% ಪ್ರಗತಿಯೊಂದಿಗೆ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿವೆ. ಗುಡಿಬಂಡೆ-93.65%, ಶಿಡ್ಲಘಟ್ಟ-93.39%, ಮಂಚೇನಹಳ್ಳಿ-92.88%, ಚೇಳೂರ-92.68% ಮತ್ತು ಬಾಗೇಪಲ್ಲಿ ತಾಲ್ಲೂಕು ಗಳು-92.40 % ತೆರಿಗೆ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸಿವೆ.

ಚಿಕ್ಕಬಳ್ಳಾಪುರ : ಕಳೆದ ಸೆಪ್ಟೆಂಬರ್ 2025 ರಿಂದ 22 ಜನವರಿ 2026 ವರೆಗೆ ಗ್ರಾಮ ಪಂಚಾಯಿತಿ ಗಳ ತೆರಿಗೆ ಸಂಗ್ರಹದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲಿ ಸತತವಾಗಿ ಪ್ರಥಮ ಸ್ಥಾನದಲ್ಲಿದ್ದು ಶೇಕಡಾ 95.25% ಪ್ರಗತಿಯೊಂದಿಗೆ ಮೊದಲ ಸ್ಥಾನವನ್ನು ಪಡೆದಿದೆ. 

ರಾಯಚೂರು ಜಿಲ್ಲೆ ಶೇಕಡಾ 94.90%, ಉತ್ತರ ಕನ್ನಡ ಜಿಲ್ಲೆ ಶೇಕಡಾ 84.80% ನೊಂದಿಗೆ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದಿದೆ ಇದು ಹರ್ಷದಾಯಕ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ವೈ.ನವೀನ್ ಭಟ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Chimul Election: ಚಿಮೂಲ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಚಿಕ್ಕಬಳ್ಳಾಪುರ ತಾಲ್ಲೂಕು ತೆರಿಗೆ ಸಂಗ್ರಹದಲ್ಲಿ ಶೇಕಡಾ 97.82% ರಷ್ಟು ಪ್ರಗತಿ ಸಾಧಿಸಿ ಪ್ರಥಮ ಸ್ಥಾನದಲ್ಲಿದ್ದರೆ. ಚಿಂತಾಮಣಿ ತಾಲ್ಲೂಕು ಶೇಕಡಾ 96.72%, ಗೌರಿಬಿದನೂರು ತಾಲ್ಲೂಕು ಶೇಕಡಾ 93.71% ಪ್ರಗತಿಯೊಂದಿಗೆ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿವೆ. ಗುಡಿಬಂಡೆ-93.65%, ಶಿಡ್ಲಘಟ್ಟ-93.39%, ಮಂಚೇನಹಳ್ಳಿ-92.88%, ಚೇಳೂರ-92.68% ಮತ್ತು ಬಾಗೇಪಲ್ಲಿ ತಾಲ್ಲೂಕು ಗಳು-92.40 % ತೆರಿಗೆ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸಿವೆ. 

ಜಿಲ್ಲೆಯಲ್ಲಿ ಒಟ್ಟು 157 ಗ್ರಾಮ ಪಂಚಾಯಿತಿಗಳಿದ್ದು ಅದರಲ್ಲಿ 55 ಗ್ರಾಮ ಪಂಚಾಯಿತಿಗಳು ಶೇಕಡಾ 100% ತೆರಿಗೆ ಸಂಗ್ರಹ ಮಾಡಿದ್ದು ಉಳಿದಂತೆ 55 ಗ್ರಾಮ ಪಂಚಾಯಿತಿಗಳು ಶೇಕಡಾ 90%, 47 ಗ್ರಾಮ ಪಂಚಾಯಿತಿಗಳು ಶೇಕಡಾ 80% ತೆರಿಗೆ ಸಂಗ್ರಹಣೆ ಮಾಡಿರುವುದು ಸಂತಸ ತಂದಿದೆ ಎಂದರು.

ಜಿಲ್ಲೆಯಲ್ಲಿ 09/01/2026 ರಿಂದ 23/01/2026 ವರೆಗೆ ತೆರಿಗೆ ಸಂಗ್ರಹಕ್ಕಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿದ್ದು, ಪ್ರತಿಯೊಬ್ಬರು ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ಪಾವತಿ ಮಾಡಿ ಅಭಿವೃದ್ಧಿಗೆ ಸಹಕರಿಸ ಬೇಕೆಂದು ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.