ಚಿಕ್ಕಬಳ್ಳಾಪುರ: ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇದೇ ತಿಂಗಳ 11 ಹಾಗೂ 12ರಂದು ನಡೆಯಲಿರುವ ಕರ್ನಾಟಕ ರಾಜ್ಯ ಮಟ್ಟದ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಚಿಕ್ಕಬಳ್ಳಾಪುರ ಜಿಲ್ಲಾ ತಂಡವನ್ನು ಆಯ್ಕೆ ಮಾಡಲಾಗಿದೆ.
14, 16, 18 ಹಾಗೂ 20 ವರ್ಷದ ವಯೋಮಿತಿಯ ವಿವಿಧ ಸ್ಪರ್ಧೆಗಳಿಗೆ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. 14 ವರ್ಷದ ಟ್ರಯಥ್ಲಾನ್ ಸ್ಪರ್ಧೆಗೆ ತೇಜಸ್ ಕುಮಾರ್ ಆಯ್ಕೆಯಾಗಿದ್ದಾರೆ.
16 ವರ್ಷದ ವಿಭಾಗದಲ್ಲಿ 60 ಮೀಟರ್ ಓಟಕ್ಕೆ ಆರ್ಯನ್ ಹಾಗೂ ಸಿರಿವಂತ್, 600 ಮೀಟರ್ ಓಟಕ್ಕೆ ಚಿರಂತ್ ಮತ್ತು ಮಹಾಂತ್ ಹಾಗೂ ಉದ್ದ ಜಿಗಿತಕ್ಕೆ ಸಿರಿವಂತ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: Dasara sports meet 2025: ಕುಸ್ತಿಪಟು ವಿನೇಶಾ ಫೋಗಟ್ ಅತಿಥಿ
18 ವರ್ಷದ ಬಾಲಕರ ವಿಭಾಗದಲ್ಲಿ 100 ಮೀಟರ್ ಓಟಕ್ಕೆ ಪುನಿತ್ ರಾಯ್, ರಘುವಂಶಿ ಹಾಗೂ ಅಶಿರ್ವರ್ ಎ.ಎಂ., 200 ಮೀಟರ್ ಓಟಕ್ಕೆ ರಕ್ಷಿತ್, ರಘುವಂಶಿ ಮತ್ತು ಪುನಿತ್ ರಾಯ್, 400 ಮೀ. ಓಟಕ್ಕೆ ರಕ್ಷಿತ್ ಹಾಗೂ ಮಹಮ್ಮದ್ ಜುನೈದ್, 1000 ಮೀಟರ್ ಓಟಕ್ಕೆ ಆರ್ವಿನ್ ಕುಮಾರ್, ಫಜಿಮ್ ಖಾನ್ ಮತ್ತು ಶಿವರಾಜ ಕುಬೇರ ಆಯ್ಕೆಯಾಗಿದ್ದಾರೆ. ಎತ್ತರ ಜಿಗಿತಕ್ಕೆ ಲೋಹಿತ್ ಹಾಗೂ ಮಿಡ್ಲಿ ರಿಲೇ ಸ್ಪರ್ಧೆಗೆ ರಕ್ಷಿತ್, ಪುನಿತ್ ರಾಯ್, ಸೂರಜ್ ಮತ್ತು ಲೋಲಿತ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
18 ವರ್ಷದ ಬಾಲಕಿಯರ ವಿಭಾಗದಲ್ಲಿ 100 ಮೀಟರ್ ಓಟಕ್ಕೆ ಸುಪ್ರಿತಾ, 200 ಮೀಟರ್ ಓಟಕ್ಕೆ ಭಗವತಿ, 400 ಮೀಟರ್ ಓಟಕ್ಕೆ ಮಧುಶ್ರೀ ಹಾಗೂ ಭಾರ್ಗವಿ, 1000 ಮೀಟರ್ ಓಟಕ್ಕೆ ಮಧುಶ್ರೀ, ಮಿಡ್ಲಿ ರಿಲೇ ಸ್ಪರ್ಧೆಗೆ ಸುಪ್ರಜಾ, ಭಾರ್ಗವಿ, ಮಧುಶ್ರೀ ಹಾಗೂ ರೋಶಿನಿ ಮತ್ತು ಉದ್ದ ಜಿಗಿತಕ್ಕೆ ಸುಪ್ರಜಾ ಆಯ್ಕೆಯಾಗಿದ್ದಾರೆ.
ತಂಡದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್ ಹಾಗೂ ತರಬೇತುದಾರರಾದ ಲೋಕೇಶ್ ಕುಮಾರ್ ಮತ್ತು ಚಂದ್ರು ಬೆಂಗಳೂರಿಗೆ ತೆರಳಲಿದ್ದಾರೆ.
ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದುಕೊಡಲಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಡಾ. ಕೆ.ವಿ. ನವೀನ್ ಕಿರಣ್ ಶುಭ ಹಾರೈಸಿದ್ದಾರೆ.