ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Child Labour: ಬಾಲ ಕಾರ್ಮಿಕ ಪದ್ದತಿ ಸಮಾಜಕ್ಕೆ ಮಾರಕ: ನ್ಯಾ ಗಣೇಶ್

ಸಂವಿಧಾನದಲ್ಲಿ  ಅನುಚ್ಚೇಧ ಕಲಂ  ೨೩,೨೪ ಮತ್ತು ೩೦ ಅಡಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಅದೇಶ ಮಾಡಿದ್ದಾರೆ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು, ಅವರಿಗೆ ಉಚಿತ ಶಿಕ್ಷಣ ನೀಡಲು ಸಂವಿಧಾನದಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಮಕ್ಕಳು ಶಿಕ್ಷಣ ಪಡೆದು ದೇಶದ ಸಮಗ್ರ ಅಭಿವೃದ್ದಿಗೆ ಕೈಜೋಡಿಸಬೇಕಿದೆ.

ಗೌರಿಬಿದನೂರು: ಶಿಕ್ಷಣದಿಂದ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ದಿ ಮತ್ತು ಉತ್ತಮ ಸತ್ಪಪ್ರಜೆ ಅಗಲು ಸಾಧ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್ ತಿಳಿಸಿದರು.

ಅವರು ತಾಲ್ಲೂಕಿನ ಅಲಕಾಪುರ ಸರ್ಕಾರಿ ಪ್ರೌಡಶಾಲೆ ಅವರಣದಲ್ಲಿ ಕಾನೂನು ಸೇವಾ ಸಮಿತಿ ವಕೀಲರ ಸಂಘ, ಕಾರ್ಮಿಕ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ `ವಿಶ್ವ ಬಾಲ ಕಾರ್ಮಿಕ ವಿರೋಧಿ’’ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಸಂವಿಧಾನದಲ್ಲಿ  ಅನುಚ್ಚೇಧ ಕಲಂ  ೨೩,೨೪ ಮತ್ತು ೩೦ ಅಡಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಅದೇಶ ಮಾಡಿದ್ದಾರೆ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು, ಅವರಿಗೆ ಉಚಿತ ಶಿಕ್ಷಣ ನೀಡಲು ಸಂವಿಧಾನದಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಮಕ್ಕಳು ಶಿಕ್ಷಣ ಪಡೆದು ದೇಶದ ಸಮಗ್ರ ಅಭಿವೃದ್ದಿಗೆ ಕೈಜೋಡಿಸಬೇಕಿದೆ. ಶ್ರೀಮಂತಿಕೆಯಿಂದ ದೇಶ ಅಭಿವೃದ್ದಿ ಅಗಲ್ಲ, ಶೈಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದರು.

ಇದನ್ನೂ ಓದಿ: Chikkanayakanahalli (Tumkur) News: ಬಸ್ ಸೌಲಭ್ಯಕ್ಕೆ ಒತ್ತಾಯ

ಅಪ್ರಾಪ್ತ ಮಕ್ಕಳು ಕಾರ್ಖಾನೆಗಳಲ್ಲಿ, ಮೆಕ್ಯಾನಿಕ್ ಅಂಗಡಿ,ಇಟ್ಟಿಗೆ ಪ್ಯಾಕ್ಟರಿ ಚಿಲ್ಲರೆ ಅಂಗಡಿಗಳಲ್ಲಿ ಕೆಲಸ ಮಾಡಬಾರದು, ಬಾಲಕಾರ್ಮಿಕರು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಕ್ಷಮ್ಯ ಅಪರಾಧ ಎಂದು ಪರಿಗಣ ಸಲಾಗುವುದು ಎಂದರು.

ಹೆಚ್ಚುವರಿ ಪ್ರಧಾನ ನ್ಯಾಯಾಧೀಶೆ ಪುಷ್ಟ ಮಾತನಾಡಿ, ಕೋವಿಡ್-೧೯ ಬಳಿಕ ಅದಷ್ಟೋ ಮಕ್ಕಳು ಬಡತನದಿಂದ ಶಿಕ್ಷಣದಿಂದ ದೂರ ಉಳಿದಿದ್ದಾರೆ. ಅದು ಅಗಬಾರದು. ಪ್ರತಿ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ,ಬಾಲಕಾರ್ಮಿಕ ಪದ್ದತಿ ದೇಶಕ್ಕೆ ಮಾರಕ ಅದರ ನಿವಾರಣೆ ನಾವು ಶ್ರಮಿಸೋಣ ಎಂದರು.

ಬಾಲಕಾರ್ಮಿಕ ಪದ್ದತಿ ಕಠಿಣ ಶಿಕ್ಷೆ ಕಾನೂನುನಲ್ಲಿ ಇದೆ ೨ವರ್ಷ ಸಜೆ ಮತ್ತು ೫೦ ಸಾವಿರ ದಂಡ ಕೊಡಬೇಕು ಮತ್ತು ಅರೋಪಿಗೆ ಜಾಮೀನು ರಹಿತ ಶಿಕ್ಷೆ ಸಹ ಅಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕ ಸತೀಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಕೀಲ ಸಂಘದ ಅಧ್ಯಕ್ಷ ದಿನೇಶ್,ಕಾರ್ಯದರ್ಶಿ ಬಿ,ಲಿಂಗಪ್ಪ,ಪ್ರಭಕರ್,ಸರ್ಕಾರಿ ಅಭಿಯೋಜಕ ಪಾಯಾಜ್ ಪಟೀಲ್,ಅಲಕಾಪುರ ಪ್ರೌಡಶಾಲೆ ಮುಖ್ಯ ಶಿಕ್ಷಕ ಹಾಗೂ ನ್ಯಾಯಾಲಯ ಸಿಬ್ಬಂದಿ ಭಾಗವಹಿಸಿದ್ದರು.